ನಿತ್ಯ ಗುರುನಾಮ ಜಪ ಯಜ್ಞ...

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
           
ಪ್ರಿಯ ಮಹಾಗುರುವಿನ ಭಕ್ತರೇ,
ಭಗವಾನ್ ಶ್ರೀ ನಾರಾಯಣ ಗುರುದೇವನ ಪೂರ್ಣ ದಿವ್ಯ ಕೃಪೆ ಆಶೀರ್ವಾದಗಳನ್ನು ಪಡೆಯಲು ಹೀಗೋ ಇಲ್ಲಿದೆ ಒಂದು ಪರಮ ಸುಂದರ ಸದಾವಕಾಶ....!!!
ಪ್ರಸ್ತುತ ಕಾಲ ಘಟಕದಲ್ಲಿ ಇಡೀ ವಿಶ್ವವೇ ಯಾವತ್ತೂ ಕಾಣದ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದೆ...ಎದುರಿಸುತ್ತಿದೆ...ಅದಕ್ಕಾಗಿ ಪರಮ_ಆತ್ಮ ಸಾಕ್ಷಾತ್ಕಾರ ಮತ್ತು ಲೋಕದ ಕಲ್ಯಾಣಕ್ಕಾಗಿ... ಈ ಗುರುನಾಮ ಜಪ ಯಜ್ಞದಲ್ಲಿ ಪೂರ್ಣ ಭಕ್ತಿ ಶ್ರದ್ಧೆಯಿಂದ ಭಾಗವಹಿಸುವಂತೆ ತಮ್ಮೆಲ್ಲರಲ್ಲಿ ಈ ಮೂಲಕ ಗೌರವದಿಂದ ಕೇಳಿಕೊಳ್ಳುತ್ತೇವೆ.
ಮಹಾಗುರುವಿಗೆ ಸಂತೃಪ್ತಿಯಾದರೆ ಇಡೀ ಜಗತ್ತಿಗೆ ಸಂತೃಪ್ತಿಯಾಗುತ್ತದೆ ನಿತ್ಯ...ಇದು ಸತ್ಯ.

          ನಿತ್ಯ ಗುರುನಾಮ ಜಪ ಯಜ್ಞ
ಈ ಕಲಿಕಾಲದಲ್ಲಿ ಪರಮ ನಾಮಸ್ಮರಣೆಯೊಂದೇ ನಮ್ಮ ನಿತ್ಯ ಪರಮಾನಂದದ ಜೀವನಕ್ಕೆ...!!! ಬೇರೆ ದಾರಿಯೇ ಇಲ್ಲ...ಇಲ್ಲ...ಇಲ್ಲ....ಇದು ಸತ್ಯ.
                       -ಗುರು ಪ್ರಾರ್ಥನೆ-
                             👇👇👇
ಶಿವಗಿರಿಶಿಖರಾಗ್ರೇ ದಿವ್ಯಾಪದ್ಮಾಸನಸ್ಥಂ
ವರದಮಭಯ ಹಸ್ತಂ ಪಾಪವಿಧ್ವಂಸಪಾದಂ
ಸುಜನಶಿಖರಸೇವ್ಯಂ ಚಾರುಕಾರುಣ್ಯ ನೇತ್ರಂ
ಕಲಿಕಲುಷವಿನಾಶಂ ನೌಮೀ ನಾರಾಯಣಾಖ್ಯಂ
                   -ಗುರು ಮಹಾ ಮಂತ್ರ-
                            👇👇👇
  !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
                    *ಜಪಾನುಷ್ಠಾನದ ಕ್ರಮ*
                              👇👇👇
• ಮೊದಲು ಗುರು ಪ್ರಾರ್ಥನೆ ಪಠಿಸುವುದು, ತದ ನಂತರ
• ಪ್ರತಿ ಮಣಿಗೆ  ಓಂ ಶ್ರೀ ನಾರಾಯಣ ಪರಮ ಗುರವೇ        ನಮಃ   ಗುರು ಮಹಾ ಮಂತ್ರವನ್ನು ಜಪಿಸಿರಿ
• ಒಂದು ಮಾಲೆ = 108 ಬಾರಿ ಗುರು ಮಹಾ ಮಂತ್ರ ಜಪ
• ಮಂತ್ರವನ್ನು ಕೇಳುವ ಹಾಗೆ ಗಟ್ಟಿಯಾಗಿ ಜಪಿಸಿ.
ಬದುಕು_ಜೀವನಾದ್ಯಂತ ಪ್ರತಿದಿನ ಗುರು ಮಂತ್ರ ಜಪ ಮುಂದುವರಿಸಿ.
------------------------
ಈ ಜಪಯಜ್ಞದ ಸಂಕಲ್ಪ ಮಾಡಿದ ದಿನ : 23-8-2021 ಸಿಂಹಮಾಸದ ಶತಭಿಷಾ ನಕ್ಷತ್ರ,
-----------------

ವಿಶೇಷ ಮಾಹಿತಿ: ಜಪ ಮಾಲೆ Mahaguru online storeನಲ್ಲಿ ಲಭ್ಯವಿರುವುದು.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು