Posts

Showing posts from June 21, 2024

15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ - ಬಿಲ್ಲವರು

Image
*15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ ಬಿಲ್ಲವರು*  ಕರ್ನಾಟಕ ಕರಾವಳಿಯ ಬಿಲ್ಲವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿ, ಮೇಲ್ಟಾತಿಯವರೆಂದು ಹೇಳಿಕೊಳ್ಳುವ ಹಿಂದೂಗಳು ಅಸಮಾನತೆಯ ಧೋರಣೆಯನ್ನು ಮಾಡುತ್ತಿದ್ದರು. ಬಿಲ್ಲವರು ಹಿಂದೂ ಧರ್ಮ ಮತ್ತು ದೇವತೆಗಳ ಬಗೆಗೆ ಅನನ್ಯ ಶ್ರದ್ಧೆಯುಳ್ಳವರಾಗಿ, ಮೇಲ್ಟಾತಿಯವರ ಮೋಸದ ಮಾತುಗಳನ್ನು ನಂಬಿ ನಡೆಯುತ್ತಿದ್ದರು. ಯಾವುದೇ ದೇವಸ್ಥಾನಗಳಲ್ಲಿ ಬಿಲ್ಲವರಿಗೆ ಪ್ರವೇಶವಿಲ್ಲದಿದ್ದರೂ ಕೂಡ ಅವರು ಆ ದೇವಸ್ಥಾನಗಳ ಹೊರ ಆವರಣದಲ್ಲಿ ನಿಂತು ಕಾಣದ ದೇವರಿಗೆ ಕೈ ಮುಗಿದು ಹರಕೆ-ಕಾಣಿಕೆಗಳನ್ನು ಕೊಂಡೊಯ್ದು ಸುರಿಯುತ್ತಿದ್ದರು. ಶತಮಾನಗಳ ಹಿಂದೆಯೇ ಕೆಲವು ಪ್ರಜ್ಞಾವಂತ ಬಿಲ್ಲವರು ಮೇಲ್ವಾತಿಯವರಿಂದ ತಮ್ಮವರಿಗೆ ಆಗುತ್ತಿರುವ ಮೋಸ, ವಂಚನೆ, ಶೋಷಣೆಗಳನ್ನು ಅರಿತು ನ್ಯಾಯಕ್ಕಾಗಿ ಹೋರಾಡುತ್ತಿದ್ದರು ಎನ್ನುವ ವಿಚಾರ ಕೋಟಿ-ಚೆನ್ನಯ, ಕಾಂತಬಾರೆ-ಬೂದಾಬಾರೆ, ಮಾಣಿಬಾಲೆ ಮುಂತಾದ ಪಾಡ್ಡನಗಳಲ್ಲಿ ಉಲ್ಲೇಖಗೊಂಡಿವೆ. ತಮ್ಮ ಜನಾಂಗದ ಹೀನ ಗತಿಯನ್ನು ಸಹಿಸಲಾರದ ಎಂ. ಅರಸಪ್ಪನವರು 1869 ರಲ್ಲಿ ಮಂಗಳೂರಿನಲ್ಲಿ ಬಿಲ್ಲವರ ಸಭೆಯನ್ನು ಕರೆದರು. ಸುಮಾರು 5000 ಬಿಲ್ಲವ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮೇಲ್ಮಾತಿಯ ಹಿಂದೂಗಳಿಂದ ಬಿಲ್ಲವರಿಗಾಗುವ ಅವಮಾನವನ್ನು ಅರಸಪ್ಪನವರು ವಿವರಿಸಿದರು. ತಮಗೆ ಸಮಾನ ಸ್ಥಾನವನ್ನು ಕೊಡದ ಹಿಂದೂಗಳಿಂದ ಪ್ರತ್ಯೇಕವಾದ,