MAHAGURU NIYAMA





     
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!  

-----------------------------------------
ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಹೆಸರು, ಗುರುವಿನ ಸತ್ಯತತ್ವ ಧರ್ಮ
ಸಂದೇಶಗಳನ್ನು ಮುಂದಿಟ್ಟುಕೊಂಡು ಗುರುಸೇವೆ,ಗುರುಧರ್ಮ ಪ್ರಚಾರ,ಸಮಾಜಮುಖಿ- ಸಮಾಜ
ಸೇವೆಗಳನ್ನು ಮಾಡುತ್ತಿರುವ,ಮಾಡುವ..ವ್ಯಕ್ತಿ, ಸಂಘ,ಸಂಸ್ಥೆ,,ಸಂಘಟನೆಗಾಗಿ...ಇದು..ನಿಯಮ..
ಸಂದೇಶಗಳು.... ಮೊದಲು ಅನುಷ್ಠಾನ ಮಾಡಿ....ಯಶಸ್ಸು ...ಜಯ ಖಂಡಿತವಾಗಿ.... ಇದುಸತ್ಯ...
ಅದುವೇ ಮಹಾಗುರುವಿನ ಸತ್ಯವಾಗಿದೆ...!!
-----------------------------------------
1). ನೀವು ನಡೆಸುವ ಯಾವುದೇ ಶುಭ ಸಮಾರಂಭ, ಸಭಾ ಕಾರ್ಯಕ್ರಮ..ಅದೇ ಇನ್ನಿತರ ಯಾವುದೇ
ಕಾರ್ಯಕ್ರಮಗಳು ಇರಲಿ..ಮುಖ್ಯವಾಗಿ ಶ್ರೀ ನಾರಾಯಣ ಗುರುದೇವರ ಭಾವಚಿತ್ರ,photo ಅಥವಾ
ಗುರುವಿನ ಮೂರ್ತಿ ವೇದಿಕೆಯ ನಿಮ್ಮ ಬಲಬದಿಯಲ್ಲಿ ಅಥವಾ ವೇದಿಕೆ ಮಧ್ಯ ಭಾಗದಲ್ಲಿ ಸುಮಾರು
ಅಡಿ ಎತ್ತರದ ಪೀಠ ಮಾಡಿ ಅದರ ಮೇಲೆ ಶ್ರೀ ನಾರಾಯಣ ಗುರುದೇವರ ಪೋಟೋ ಅಥವಾ ಗುರು
ಮೂರ್ತಿಯನ್ನು ಪ್ರತಿಷ್ಠಾಪಿಸಿ. ಅದಕ್ಕೆ ಹೂವಿನಿಂದ ಅಲಂಕರಿಸಿ, ದೀಪ ಬೆಳಗಿಸಿ,ಜೊತೆಗೆ
ಫಲ,ನೈವೇದ್ಯ ಸಮರ್ಪಣೆ ಮಾಡಿ.ಮುಖ್ಯವಾಗಿ ಸಭಾ ಕಾರ್ಯಕ್ರಮದ ಉದ್ಘಾಟನೆ ಇದ್ದಾರೆ ಗುರುದೇವರ
ಪೀಠದ ಎದುರು ಮಾಡಿದ್ದಾರೆ ಉತ್ತಮ. ( ಗುರುದೇವರ ಎದುರಿಗೆ ಬೆಳಗಿದ ದೀಪ ಕಾರ್ಯಕ್ರಮ
ಮುಗಿಯುವ ವರೆಗೆ ಉರಿಯುತ್ತಿರಬೇಕು.).

2).ನೀವು ಪ್ರಚಾರಕ್ಕಾಗಿ ಬಳಕೆ ಮಾಡುವ ಬ್ಯಾನರ್,ಆಮಂತ್ರಣ ಪತ್ರಿಕೆ, ಪೋಸ್ಟರ್, ವೇದಿಕೆ
ಬ್ಯಾನರ್...ಇವುಗಳಲ್ಲಿ ಮುಖ್ಯವಾಗಿ ಶ್ರೀ ನಾರಾಯಣ ಗುರುದೇವರ ಭಾವಚಿತ್ರವನ್ನು 
ಉಪಯೋಗಿಸಲ್ಲೇ ಬೇಕು. ನಂತರ ದೇವರ ಚಿತ್ರ ಅಥವಾ ಕುಲದೇವರ ಚಿತ್ರ ಇರಲಿ.ಯಾವುದೇ ಕಾರಣಕ್ಕೆ
ವ್ಯಕ್ತಿಗಳ ಭಾವ ಚಿತ್ರಗಳನ್ನು ಉಪಯೋಗಿಸಬೇಡಿ..ಅದೇ ವ್ಯಕ್ತಿಗಳ ಹೆಸರು ಬಳಕೆ ಮಾಡಬಹುದು
ಶುಭಕೋರುವ ಬಗ್ಗೆ.

3).ಶುಭ ಸಮಾರಂಭ,ಸಭಾ ಕಾರ್ಯಕ್ರಮ,ಮದುವೆ ಇತ್ಯಾದಿ ಸಮಾರಂಭಗಳಿಗೆ ದುಂದು ವೆಚ್ಚ ಅದೇ
ಆಡಂಬರದ ಕಾರ್ಯಕ್ರಮ ಬೇಡ. ಇದು ಶ್ರೀ ನಾರಾಯಣ ಗುರುದೇವರ ಸತ್ಯ ತತ್ವ ಧರ್ಮಕ್ಕೆ ವಿರುದ್ಧ..
ಇದನ್ನು ಗುರುದೇವರು ಇಷ್ಟ ಪಡುವುದಿಲ್ಲ.ಅದೇ ನೀವು ದುಂದು ವೆಚ್ಚ ಅಥವಾ ಆಡಂಬರಕ್ಕೆ
ಉಪಯೋಗಿಸುವ ಹಣವನ್ನು ಆರ್ಥಿಕವಾಗಿ ಹಿಂದುಳಿದ, ಬಡವರ ಶಿಕ್ಷಣಕ್ಕೆ, ಮದುವೆ, ಆರೋಗ್ಯ
ಸಮಸ್ಯೆಯಲ್ಲಿ ಇರುವವರಿಗೆ, ಮನೆ ಇಲ್ಲದೆ ಇರುವವರಿಗೆ ಉಪಯೋಗಿಸಿ ಅಂತಹವರಿಗೆ ಸಹಾಯ
ಮಾಡಿ.ನಿಮಗೆ ಸದಾ ಗುರುದೇವರ ಕೃಪೆ ಅನುಗ್ರಹ ಸಿಗುವುದು ಇದು ಸತ್ಯ. ನಿಮ್ಮ ಮುಂದಿನ ಉಜ್ವಲ
ಭವಿಷ್ಯಕ್ಕೆ.

4).  ಧಾರ್ಮಿಕ, ಸಮಾಜಿಕ,  ಸಮಾಜದ ಸಂಘಟನೆಯಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು
ತರಲ್ಲೇಬೇಡಿ.ಇದರಿಂದ ಸಮಾಜ, ಸಂಘಟನೆ ವಿಭಾಜನೆಯಾಗುತ್ತದೆ.ಇದಕ್ಕೆ ಅವಕಾಶ ಮಾಡಬೇಡಿ.ಇಲ್ಲಿ
ಸಮಸ್ತರು ಪಕ್ಷ ಭೇದ  ಮರೆತು ಎಲ್ಲರೂ ಒಂದಾಗಿ ಮಾನವ ಧರ್ಮ ರಕ್ಷಣೆ , ಸಮಾಜದ ಸೇವೆಯಲ್ಲಿ
ಒಗ್ಗೂಡಿ ಉತ್ತಮ ಕೆಲಸ ಕಾರ್ಯವನ್ನು ಮಾಡಿ.ಅದೇ ಮಹಾಗುರುವಿನ ಸತ್ಯ ತತ್ವ ಧರ್ಮ
ಸಂದೇಶಗಳನ್ನು ಆದರ್ಶವಾಗಿ ಮುಂದಿಟ್ಟುಕೊಂಡು ಹೋಗಿ..ಅದೇ ಮಹಾಗುರುವಿನ ತತ್ವ ಸಂದೇಶದಂತೆ
ಹೋಗುವ ..ಮುನ್ನಡೆಯುವ ವ್ಯಕ್ತಿಯನ್ನು , ಸಂಘ ಸಂಸ್ಥೆ, ಸಂಘಟನೆಗಳನ್ನು ಬೆಂಬಲಿಸಿ.

5). ಸಂಘ,ಸಂಸ್ಥೆ,ಸಂಘಟನೆಗಳ ವತಿಯಿಂದ ನಡೆಸುವ ಶುಭ ಸಮಾರಂಭ,ಸಾಮಾಜಿಕ ಕಾರ್ಯಕ್ರಮದ ಮೊದಲ
ಆಮಂತ್ರಣ ಪತ್ರಿಕೆಯನ್ನು ಗುರುದೇವರಿಗೆ ಅರ್ಪಿಸಿ. ಮಹಾಗುರುವಿನ ಕರ್ನಾಟಕ ಮೂಲ ಸಾನಿಧ್ಯ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳೂರು ಮತ್ತು ಮಹಾಗುರುವಿನ 
Shree Gokarnanatha Kshethra
Kodroli,Mangaluru-575003.
Ph:0824_2494040

ಮಹಾಮೂಲ ಮಹಾ ಪೀಠ
ಶಿವಗಿರಿ, ಕೇರಳ ಕ್ಷೇತ್ರಕ್ಕೆ ಆಮಂತ್ರಣವನ್ನು ಕೆಳಗಿನ ವಿಳಾಸ ಕಳುಹಿಸಿ.

Shivagiri Mutt
Varkala
Thiruvanathapuram
Kerala-695141

_________________________________
6).ನೀವು ಮಾಡುವ ಯಾವುದೇ ಶುಭ ಸಮಾರಂಭ,ಮದುವೆ, ಇನ್ನಿತರ ಪ್ರಮುಖ ಕಾರ್ಯಕ್ರಮದಲ್ಲಿ ಮೊದಲು
ಗುರು ಪ್ರಾರ್ಥನೆ ಗುರು ಪೂಜೆ ಸಲ್ಲಿಸಿ. ಇರಲಿ,ನಂತರ ಇತರ. ದೇವರಿಗೆ ಪೂಜೆ ಸಲ್ಲಿಸಿ.ಮೊದಲು
ಗುರುಬಲ ಗುರುಶಕ್ತಿ ಬೇಕು. ಮಹಾಶಕ್ತಿಯಿಂದಲ್ಲೇ ನಿಮ್ಮ ಉತ್ತಮ ಕೆಲಸ, ಶುಭ ಕಾರ್ಯವೂ
ಯಶಸ್ಸು ಆಗುವುದು. ಆಗುತ್ತದೆ.ಇದು ಸತ್ಯ.

7).ಸಂಘ ಸಂಸ್ಥೆ, ಸಂಘಟನೆಗಳು ಯಾವುದೇ ಸಾಮಾಜಿಕ, ಸಾರ್ವಜನಿಕ ಸಭೆಯಲ್ಲಿ, ಶುಭ
ಸಮಾರಂಭಗಳಲ್ಲಿ, ಯಾವುದೇ ಜಾತಿ, ಮತ,ಧರ್ಮ, ವ್ಯಕ್ತಿಗಳಿಗೆ ನಿಂದನೆ, ಟೀಕೆ ಮಾಡುವ ಸಂದೇಶ,
ವಿಚಾರಧಾರೆ ಬೇಡ.. ಅದೇ ಅದರ ವಿಮರ್ಶೆಯು ಬೇಡ... ಅಲ್ಲಿ ಸದಾ ಇರಲಿ ಉತ್ತಮ ಚಿಂತನೆ,ಉತ್ತಮ
ಯೋಜನೆ ,ಯೋಚನೆ ಅಷ್ಟೇ .ಅದೇ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆಧ್ಯತೆ ಇರಲಿ.ಗುರುದೇವರ
ಸತ್ಯ ತತ್ವ ಧರ್ಮ ಸಂದೇಶದಂತೆ.

8).ಯಾವುದೇ ಸಂಘ ಸಂಸ್ಥೆ, ಸಂಘಟನೆಗಳು ಬಡವ,ಶ್ರೀಮಂತ ಎಂಬ ವಿಭಾಗ ಮಾಡುವುದು ಬೇಡ. ಇಲ್ಲಿ
ಸಮಸ್ತರು ಒಂದೇ ಭಾವನೆ ಇರಲಿ ಎಲ್ಲರೊಂದಿಗೆ ಪ್ರೀತಿ ಪ್ರೇಮ ಗೌರವದಿಂದ
ನೋಡಿ.ಪ್ರೀತಿಯಿಂದಲ್ಲೇ ಮಾತಾನಾಡಿಸಿ.. ಇಲ್ಲಿ ನಾವು ಮಹಾಗುರುವಿನ ಪ್ರೀತಿಯ ಮಕ್ಕಳು
ನಾವೆಲ್ಲರೂ ಒಂದೇ ದೇವರ ಮಕ್ಕಳು.ಎಂದಿರಲಿ.

9).ನಮ್ಮ ಸಮಸ್ತ ಸಮಾಜ ,ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವರು...ಸತ್ಯ ತತ್ವ
ಧರ್ಮ ಸಂದೇಶದಂತೆ ಮುನ್ನಡೆಯಿರಿ.. ಮಹಾಗುರುವೇ ಮಹಾಜಗತ್ತಿಗೆನೇ ಕೊಟ್ಟ ಮಹಾಬ್ಬುತ
ಮಹಾಸಂದೇಶ " ಒಂದೇ ಜಾತಿ, ಒಂದೇ ಮತ,ಒಬ್ಬನೇ ದೇವರು " ಮಹಾದೇವ ಮಹಾಸಂದೇಶವನ್ನು
ಒಪ್ಪಿಕೊಂಡು ಅನುಷ್ಠಾನ ಮಾಡಿ ಅದರಂತೆ ಬದುಕು ಜೀವನ ನಡೆಸಿ.
ಎಲ್ಲಿಯೂ ಎಂದೆಂದಿಗೂ ಜಾತಿ, ಮತ,ಧರ್ಮ, ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೊ
ನಿಂದಿಸಬೇಡಿ,ಟೀಕೆಸಬೇಡಿ,ನೋವಿಸಬೇಡಿ ಅಷ್ಟೇ.
ಸಮಸ್ತ ಹಿತವೇ ಮುಖ್ಯ ಇರಲಿ.ನಿಮಗೆ ಮಹಾಗುರಿವಿನ ಕೃಪೆ ಅನುಗ್ರಹ ತಾನಾಗಿಯೇ ಸಿಗುವುದು. ಇದು
ಸತ್ಯ.

1o).ನಮ್ಮ ಸಮಾಜದ, ಸಮಸ್ತ ಮಾನವ ಧರ್ಮದ ಕರ್ನಾಟಕದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ,
ಮಂಗಳೂರು  ಇದು ಮಹಾಗುರು ವಿಶ್ವ ಗುರು ಶ್ರೀ ನಾರಾಯಣ ಗುರುದೇವನ ಮೂಲ ಸಾನಿಧ್ಯ. ಅದೇ
ಕೇರಳದಲ್ಲಿರುವ ಶಿವಗಿರಿ ಮಹಾಗುರುವಿನ ಮಹಾ ಸಮಾಧಿ ಮಹಾಜಗತ್ತಿನ  ಮಹಾಶಕ್ತಿ ಮೂಲ ಮಹಾ ಪೀಠ
ಮಹಾಶಕ್ತಿ ಮಹಾ ಕೇಂದ್ರ ಅದುವೇ ಜಗತ್ತಿನ ಮಹಾ ಆಧ್ಯಾತ್ಮ ಕೇಂದ್ರ. ಶಿವಗಿರಿ.... ಇದು
ಸತ್ಯ. ಅದುವೇ ಮಹಾಗುರುವಿನ ಮಹಾ ಸಂಕಲ್ಪನೇ ಆಗಿದೆ. ಆಗಿರುವುದು. ನಮ್ಮ ಮಹಾಗುರು ಮತ್ತು
ದೇವರು ಶ್ರೀ ನಾರಾಯಣ ಗುರುದೇವ ಒಬ್ಬನೇ ಎಂದು ನಂಬಿಕೆಯಿಂದಲ್ಲೇ ನಂಬಿ.ಮುಂದಿನ ಉತ್ತಮ
ಸಮಾಜಕ್ಕಾಗಿ.

11). ನೀವು, ಸಂಘ ಸಂಸ್ಥೆಗಳು, ಸಂಘಟನೆಗಳು ಪ್ರತಿ ವರ್ಷವೂ  ಮಹಾದೇವ  ಮೂಲ ಸಾನಿಧ್ಯ
ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಮತ್ತು ಮಹಾಗುರುವಿನ ಮೂಲ ಮಹಾಶಕ್ತಿ ಪೀಠ
ಶಿವಗಿರಿ ನಿಮ್ಮಿಂದ ಸಾಧ್ಯವಾದಷ್ಟು  ಕ್ಷೇತ್ರಕ್ಕೆ ಗುರುಕಾಣಿಕೆ ಅಥವಾ ದೇಣಿಗೆಯನ್ನು ನೀಡಿ
. ಇದು ಸೇವಾ ರೂಪದಲ್ಲಿ ಇರಲಿ..ಅದೇ  ಸಂಗ್ರಹವಾದ ಗುರುಕಾಣಿಕೆ ...ಗುರುಸೇವೆಗೆ,ಸಾಮಾಜಿಕ
ಸೇವೆಗಳಿಗೆ ಉಪಯೋಗವಾಗುತ್ತದೆ. ನಿಮಗೆ ಮತ್ತು ಸಮಸ್ತರಿಗೆ ಮಹಾದೇವ ಮಹಾಗುರುವಿನ ಅನುಗ್ರಹ
ಕೃಪೆ ಸದಾ ಇರುವುದು ಇದು ಸತ್ಯ.

12).ಪ್ರತಿದಿನ, ಪ್ರತಿವಾರ,/ಪ್ರತಿ ತಿಂಗಳಿಗೊಮ್ಮೆ ಮಹಾಗುರುವಿನ ಗುರುಪೂಜೆಯನ್ನು
ಮಂದಿರದಲ್ಲಿ ಅಥವಾ ಮನೆಯಲ್ಲಿ ಮಾಡಿ. ಅದೇ ಪ್ರತಿ ತಿಂಗಳಿಗೊಮ್ಮೆ ಗುರುದೇವರ ಮಹಾ ನಕ್ಷತ್ರ
ಶತಬಿಷೆ ದಿನದಂದು ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ಇದು ಮಹಾಗುರು ವಿಶ್ವಗುರು ಶ್ರೀ
ನಾರಾಯಣ ಗುರುದೇವರು ಪರಮಾತ್ಮ ಸಂಕಲ್ಪದಂತೆ ಪರಮಾತ್ಮ ಸೃಷ್ಟಿಯ ಮಹಾ ಪುಣ್ಯ ಭೂಮಿಗೆ
ಸಮಸ್ತ ಮಾನವ ಧರ್ಮ ಅದೇ ಸನಾತನ ಧರ್ಮದ ರಕ್ಷಣೆ, ಉಳಿವಿಗಾಗಿ.. ಪರಮಾತ್ಮನೇ ಶ್ರೀ ನಾರಾಯಣ
ಗುರುದೇವನ ರೂಪದಲ್ಲಿ ಅವತಾರವೆತ್ತಿ ಬಂದ ದಿನವೇ ಶತಭಿಷ ನಕ್ಷತ್ರದಂದು. ದಿನವನ್ನು
ಇಂದಿಗೂ ಪ್ರತಿವರ್ಷವೂ ಜಗತ್ತಿನಾದ್ಯಂತ ಭಕ್ತಿ ಶ್ರದ್ಧೆಯಿಂದ ಸಮಸ್ತ ಮಾನವ ಧರ್ಮ,
ಗುರುಭಕ್ತರು ಗುರು ಜಯಂತಿಯನ್ನು ಆಚರಿಸಲಾಗುತ್ತದೆ. ನೀವು  ಕೂಡ ಆಚರಣೆ ಮಾಡಿ.

13).ಯಾವುದೇ ಸಂಘ ಸಂಸ್ಥೆ, ಸಂಘಟನೆಗಳು ಹೆಸರು, ಅಧಿಕಾರ, ಪ್ರತಿಷ್ಠೆಗೆ ಬೇಡ.. ಅಲ್ಲಿ
ಮುಖ್ಯ ಗುರು ಪ್ರತಿಷ್ಠೆ, ಗುರು ಸತ್ಯ ತತ್ವ ಧರ್ಮ ಪ್ರಚಾರಕ್ಕೆ ಹೆಚ್ಚಿನ ಗಮನ ಮತ್ತು
ಅದನ್ನು ಸಮಸ್ತ ನಮ್ಮ ಸಮಾಜ ಅನುಷ್ಠಾನ ಮಾಡುವಂತೆ ಇರಲಿ ಅಷ್ಟೇ.
ಹೆಸರು, ಅಧಿಕಾರ, ಪ್ರತಿಷ್ಠೆ. ಇದನ್ನೆಲ್ಲ ಪರಮಾತ್ಮ ಮಹಾಗುರುವೇ ನೀಡುವುದು, ಕರುಣಿಸುವುದು
ಎಂದು ನೆನಪಿರಲಿ..ಅಲ್ಲಿ ಯಾವುದೇ ಸ್ವಾರ್ಥ ಅಹಂಕಾರ ಬೇಡ.. ನಾನು, ನನ್ನದು, ನನ್ನಿಂದ ಎಂದು.
ಮೊದಲು ಮಹಾದೇವ ಮಹಾಗುರುವಿನ ಶರಣಾಗತಿ ಆಗಿರಿ..ನಿಮಗೆ ಎಲ್ಲವೂ ಮಹಾಗುರುವಿನ ಕೃಪೆ
ಅನುಗ್ರಹದಿಂದ ಸಿಗುವುದು ಸಿಗುತ್ತದೆ. ಇದು ಸತ್ಯ.
ಯಾವುದೇ ಉತ್ತಮ ಕಾರ್ಯವೂ ಮಹಾದೇವ ಮಹಾಗುರುವಿನ ಮಹಾಸೇವೆಯೆದೇ ಮಾಡಿ.ಮುನ್ಮಡೆಯಿರಿ.ಗುರು
ಕೃಪೆ ಸದಾ ನಿಮಗಿದೆ.ಇದು ಸತ್ಯ.

14).ಯಾವುದೇ ಜಾತಿ, ಮತ,ಧರ್ಮ, ವ್ಯಕ್ತಿಗಳಿಗೆ ನೋವು, ಹಿಂಸೆ ತರುವ ಪ್ರಚೋದನಕಾರಿ ಹೇಳಿಕೆ,
ಸಂದೇಶಗಳನ್ನು ಸಂಘ ಸಂಸ್ಥೆಗಳು, ಸಂಘಟನೆಗಳು ನೀಡುವುದು ಬೇಡ. ಸದಾ ಅಲ್ಲಿ positive
ಚಿಂತನೆಗಳನ್ನು ಮಾತ್ರ ಇರಲಿ.ಇದರಿಂದ ಸಮಾಜ, ನಾವು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು
ಸಾಧ್ಯ. ಅಲ್ಲಿ ಸದಾ ಪರಮಾತ್ಮ ಶ್ರೀ ನಾರಾಯಣ ಗುರುದೇವನ ಪೂರ್ಣ ಅನುಗ್ರಹವಿರುವುದು.ಇದು
ಸತ್ಯ.

15).ಪ್ರತಿವಾರ, ತಿಂಗಳಿಗೊಮ್ಮೆ ಮನೆ ಮನೆ ಭೇಟಿ ಇರಲಿ..ಗುರು ತತ್ವ ಸಂದೇಶ ಪ್ರಚಾರ ಮತ್ತು
ಪ್ರತಿಸಂಘ ಸಂಸ್ಥೆ ಗಳ ಸಂಪರ್ಕ, ಅಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ
ಭಾಗವಹಿಸಿ.ಜೊತೆಗೆ ಎಲ್ಲರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ.ಸಂಘಟನೆಯಿಂದ
ಬಲಯುತ್ತರಾಗಿರಿ.ಗುರುವಿನ ಸಂದೇಶದಂತೆ ಇದು ಸತ್ಯ.

16).ಪ್ರತಿ ದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕೊಮ್ಮೆ ಮಹಾಗುರು ವಿಶ್ವ ಗುರು
ಶ್ರೀ ನಾರಾಯಣ ಗುರುದೇವರು  ಪ್ರಾಣ ಪ್ರತಿಷ್ಠೆ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ
ಕ್ಷೇತ್ರ, ಮಂಗಳೂರು ಮತ್ತು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಹಾದೇವ ಮಹಾಗುರು
ವಿಶ್ವಗುರು ದೇವನ ಪುಣ್ಯ ಕ್ಷೇತ್ರ ಶಿವಗಿರಿ, ಕೇರಳಕ್ಕೆ ಯಾತ್ರೆಯನ್ನು ಮಾಡಿ.ಗುರುವಿನ ಮಹಾ
ಕೃಪೆ ಅನುಗ್ರಹಕ್ಕೆ ಸದಾ ಪಾತ್ರರಾಗಿ. ಅದೇ ಮುಂದಿನ ಉತ್ತಮ ಕಾಲಕ್ಕೆ. ಇದು ಸತ್ಯ.

17).ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಮಹಾ ಸಾನಿಧ್ಯ ಮಹಾಶಕ್ತಿ ಪೀಠ ಕೇರಳದ
ಶಿವಗಿರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಬಹಳ ಶಿಸ್ತು ಬದ್ಧ ,ಭಕ್ತಿ ಶ್ರದ್ಧೆ ಯಿಂದ ನಡೆಯುವ
ಮಹಾಗುರುವಿನ "ಮಹಾತಿರ್ಥಟನೆ" ಯಲ್ಲಿ ಪಾಲ್ಗೊಂಡು ,ಗುರು ಸಂದೇಶ ಪ್ರಚಾರದಲ್ಲಿ ಸೇವೆ
ಮಾಡಿ.ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗುವ ನವರಾತ್ರಿ ಮಹಾದಸರಾ,
ಶಿವರಾತ್ರಿ ಹಬ್ಬದಂದು ಸಂದರ್ಭದಲ್ಲಿ ಕುಟುಂಬ ಸಮೇತವಾಗಿ ಬನ್ನಿ ಮತ್ತು ಸೇವಕರಾಗಿ
ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಗುರುವಿನ ಗುಲಾಮರಾಗಿ ಸದಾ ಆನಂದಮಯ ನಿಮ್ಮ ಜೀವನ. ಇದು
ಸತ್ಯ.

18).ಸಂಘ, ಸಂಸ್ಥೆ, ಸಂಘಟನೆಗಳು ಸಮಾಜಕ್ಕೆ,ಮಾನವ ಧರ್ಮಕ್ಕೆ ಸದಾ ಸುಂದರ ಬದುಕು ಜೀವನ
ನಡೆಸುವ ಸಲುವಾಗಿ ಪ್ರತಿನಿತ್ಯ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂಸ್ಕಾರ,
ಸಂಸ್ಕೃತಿ,ವಿಚಾರಧಾರೆ ಸಂಧಿಸಿದ ತರಬೇತಿ ತರಗತಿ ಗಳನ್ನು ನಡೆಸಿ. ಮುಖ್ಯವಾಗಿ ಮಹಾಗುರು
ವಿಶ್ವಗುರು ಶ್ರೀ ನಾರಾಯಣ ಗುರುದೇವನ ಸತ್ಯ ತತ್ವ ಧರ್ಮ ಸಂದೇಶ ಪ್ರಚಾರ ,ಆಧ್ಯಾತ್ಮ
ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿ.ಸಮಸ್ತ ಸಮಾಜಕ್ಕೆ ಮಾನವ ಧರ್ಮಕ್ಕೆ ನಿತ್ಯ ನಿರಂತರ
ಸುಖ ಶಾಂತಿ, ನೆಮ್ಮದಿ ಸಿಗುವುದು ಆಧ್ಯಾತ್ಮ ಮಾರ್ಗದ ಮೂಲಕ ಮಾತ್ರ. ಇದು ಸತ್ಯ.
ಇದು ಅಂತೂ ಸತ್ಯ...!!! ಅದು ಪರಮ ಸತ್ಯವಾಗಿದೆ....!!!
ನೆನಪಿರಲಿ....
ಯಾವ ವ್ಯಕ್ತಿ, ಸಂಘ, ಸಂಸ್ಥೆ,ಸಂಘಟನೆಗಳು ಮೇಲಿನ ಪರಮಾತ್ಮನ ಮಹಾ ಜ್ಞಾನದ ಮೂಲಕನೇ
ಸೃಷ್ಟಿಕೊಂಡ ಸಂದೇಶ/ ನಿಯಮಗಳನ್ನು ಯಾರು ಭಕ್ತಿ ಶ್ರದ್ಧೆಯಿಂದ ಅನುಸರಿಸಿ ಅನುಷ್ಠಾನ
ಮಾಡಿ ಮುನ್ನಡೆಯುವುದೇ ಮುಂದೆ ಹೋಗುವುದೇ ಅಲ್ಲಿ ಯಾವುದೇ ವ್ಯಕ್ತಿ ಇರಲಿ ಯಾವುದೇ ಸಂಘ
ಸಂಸ್ಥೆಗಳು, ಸಂಘಟನೆಗಳು ಇರಲಿ.. ಅದಕ್ಕೆ ಮುಂದೆ ಉಜ್ವಲ ಭವಿಷ್ಯವಿರುವುದು ...ಉನ್ನತ
ಯಶಸ್ಸು ಕಂಡು. ಮಹಾದೇವ ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಕೃಪೆ ಅನುಗ್ರಹ ಸದಾ
ಇರುವುದು ಇದು ಸತ್ಯ. ಅದು ಪರಮ ಸತ್ಯವಾಗಿದೆ....!!!
ಅದಕ್ಕೊಂದು ಸತ್ಯದ ಉದಾಹರಣೆ ಇಲ್ಲಿದೆ....
ಮಹಾದೇವ ಮಹಾಗುರು ವಿಶ್ವಗುರು  ಶ್ರೀ ನಾರಾಯಣ ಗುರುದೇವನ ಪೂರ್ಣ ಅನುಗ್ರಹ ಕೃಪೆ
ಪ್ರೇರಣೆಯಿಂದ ಗುರು ಸಂಕಲ್ಪದಂತೆ ರಚನೆಗೊಂಡ...ಹುಟ್ಟಿಕೊಂಡ ಆಧ್ಯಾತ್ಮ ಸಂಘಟನೆನೆಯೇ "
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ " ಮಂಗಳೂರು. ಸಂಘಟನೆಯ ಹಿಂದೆ ಮುಂದೆ ಇರುವ
ಪ್ರೇರಣೆಯ ಮಹಾಬ್ಬುತ ಮಹಾಶಕ್ತಿ ಶ್ರೀ ನಾರಾಯಣ ಗುರುದೇವರೇ ಇದು ಸತ್ಯ ಗುರುವಿನ ಮಹಾ
ಸಂಕಲ್ಪ ಸಂಘಟನೆಗಿದೆ...ಇದು ಸತ್ಯ. ಮುಖ್ಯವಾಗಿ ಇಲ್ಲಿ ಪ್ರಚಾರ ಮಹಾದೇವ ಮಹಾಗುರು
ವಿಶ್ವಗುರು ಶ್ರೀ ನಾರಾಯಣ ಗುರುದೇವನ ಸತ್ಯ ತತ್ವ ಧರ್ಮ ಸಂದೇಶಗಳು ಆಗಿದೆ ಆಗಿರುವುದು...
ಅದುವೇ ಸಮಸ್ತ ಸಮಾಜಕ್ಕೆ ಮಾನವ ಧರ್ಮಕ್ಕೆ ....ಇದು ಸತ್ಯ.
ಮಹಾಗುರುವಿನ ಸತ್ಯ ತತ್ವ ಸಂದೇಶಗಳನ್ನು ಪ್ರಚಾರ ಪ್ರಾರಂಭಿಸಿದ
ದಿನದಿಂದಲ್ಲೇ....ಮಹಾಗುರುವಿನ ಮಹಾಶಕ್ತಿ ಮಹಿಮೆ ಹರಿದು ಬಂತು ....ಅದುವೇ " ನನ್ನ ಅನುಭವ
ದೇವರು " ನುಡಿಗಳ ಮೂಲಕನೇ ಇದು ಸತ್ಯ.... ಈಗಾಗಲೇ ಸುಮಾರು 3000ಕ್ಕಿಂತಲೂ ಹೆಚ್ಚಿನ ನನ್ನ
ಅನುಭವ ದೇವರು ಅನುಭವದ ನುಡಿಗಳು ಪ್ರಚಾರಗೊಂಡಿದೆ ಜಾಲತಾಣದ ಮೂಲಕ.... ಇದು ಸತ್ಯ...
ಅದನ್ನು ಅದೆಷ್ಟೋ ಮಹಾದೇವ ಮಹಾಗುರುವಿನ ಭಕ್ತರು ಅನುಭವಿಸಿ... ತನ್ನ ಬದುಕು ಜೀವನದಲ್ಲಿ
ಅನುಷ್ಠಾನ ಮಾಡುತ್ತಿರುವುದು ಅಂತೂ...!!! ಅದು ಪರಮ ಸತ್ಯವಾಗಿದೆ....!!!
ಇಂದಿನಿಂದಲ್ಲೇ  ಸಮಸ್ತ ಸಮಾಜದಲ್ಲಿ , ಮಾನವ ಧರ್ಮದಲ್ಲಿ... ಜಾಗೃತವಾಗಲಿ
ಮಹಾಗುರುವಿನ ಮಹಾಬ್ಬುತ ಮಹಾ  ಸತ್ಯ ತತ್ವ ಧರ್ಮ  ಸಂದೇಶಗಳು...!!! ಮುಂದಿನ ಉತ್ತಮ ಬದುಕು
ಜೀವನಕ್ಕೆ.... ಅಲ್ಲಿರುವುದು ಸದಾ ಮಹಾದೇವ ಮಹಾಗುರುವಿನ ಕೃಪೆ ಅನುಗ್ರಹ.... ನಿತ್ಯ
ನಿರಂತರ.... ಸಮಸ್ತ ಮಾನವ ಧರ್ಮಕ್ಕೆ... ಇದು ಸತ್ಯ.... ಅದುವೇ ಪರಮ ಸತ್ಯ.
ಇದೇ ಸತ್ಯ. ಅದೇ ಪರಮಾತ್ಮ.
ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama
#ಇದು_ಸಂಘ_ಸಂಸ್ಥೆ_ಸಂಘಟನೆ_ವ್ಯಕ್ತಿಗಳಿಗಾಗಿ_ನಿಯಮ_ನಿಬಂಧನೆಗಳನ್ನು_ಮುಂದಿನ_ಉಜ್ವಲ_ಭವಿಷ್ಯಕ್ಕೆ_ಅದುವೇ_ಆಧ್ಯಾತ್ಮ_ಉನ್ನತಿಗಾಗಿ_ಸಮಸ್ತ_ಮಾನವ_ಧರ್ಮದ_ಉಳಿವಿಗಾಗಿ_ಇದು_ಸತ್ಯ_ಅದುವೇ_ಮಹಾಗುರು_ವಿಶ್ವಗುರು_ಶ್ರೀ_ನಾರಾಯಣ_ಗುರುದೇವನ_ಮಹಾಸಂದೇಶ_ಸತ್ಯ
ಸದಾ ಮಹಾದೇವ ಮಹಾಗುರು ಶ್ರೀ ನಾರಾಯಣ ಗುರುದೇವನ ಸತ್ಯ ಧರ್ಮ ಪ್ರಚಾರದ ಸೇವೆಯಲ್ಲಿ...
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ, ಮಂಗಳೂರು,ಕರ್ನಾಟಕ.
ಗುರುಸೇವಕ,ಆಧ್ಯಾತ್ಮ ಚಿಂತಕ
ಸುರೇಶ್. ಕೆ.ಪಿ
ನಮ್ಮ ಸಂಪರ್ಕ ಸಂಖ್ಯೆ: 9483024279 ( Whatsapp)
www.bsngdp.blogspot.in
http://bsngdp.blogspot.com/p/mahaguruniyama.html
ಈ ಮಹಾಗುರು ನಿಯಮವನ್ನು ದಿನಾಂಕ  27-8-2018 ರಂದು ಮಹಾಗುರುವಿನ ಮಹಾ ಜಯಂತಿಯಂದು  ಪ್ರಕಟಿಸಿದೆ.  

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು