Posts

Showing posts from October 5, 2025

ಜನರ ಹಿತದ ಹೋರಾಟಗಾರ: ಮುದ್ರಾಡಿ ಮಂಜುನಾಥ ಪೂಜಾರಿ

Image
 ✍️ ಚೈತ್ರ ಕಬ್ಬಿನಾಲೆ ಜನರ ಹಿತದ ಹೋರಾಟಗಾರ: ಮುದ್ರಾಡಿ ಮಂಜುನಾಥ ಪೂಜಾರಿ! ಮುದ್ರಾಡಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಮಂಜುನಾಥ ಪೂಜಾರಿ ಅವರು ಕೇವಲ ಒಬ್ಬ ವ್ಯಕ್ತಿ ಅಲ್ಲ, ಹೋರಾಟದ ಪ್ರತಿಧ್ವನಿ, ನಿಷ್ಠೆಯ ಪ್ರತಿರೂಪ, ಜನಸೇವೆಯ ಕಾವ್ಯ. ಉಡುಪಿಯ ಹೆಬ್ರಿ ತಾಲೂಕಿನ ಬಾಚಿಮಜಲು ಅವರ ಜನ್ಮಭೂಮಿ. ತಂದೆ ದಿ. ಚಂದು ಪೂಜಾರಿ, ತಾಯಿ ಕಮಲ ಚಂದು ಪೂಜಾರಿಯವರ ಜೀವನವೇ ಸಾರ್ವಜನಿಕ ಸೇವೆಯ ದಾರಿ ತೋರಿಸಿದ ಪಾಠಶಾಲೆ. ತಂದೆ ಮಂಡಲ ಪಂಚಾಯತ್ ಸದಸ್ಯರಾಗಿದ್ದವರು. ತಾಯಿ 10 ವರ್ಷಗಳ ಕಾಲ ಪಂಚಾಯತ್ ಸದಸ್ಯೆಯಾಗಿದ್ದವರು. ಹೀಗೆ ಜನಸೇವೆಯ ಮಣ್ಣಲ್ಲಿ ಬೆಳೆದ ಮಂಜುನಾಥ ಪೂಜಾರಿಯವರ ಹೃದಯದಲ್ಲಿ ಹೋರಾಟದ ಜ್ಯೋತಿ ಬಾಲ್ಯದಲ್ಲೇ ಬೆಳಗಿತ್ತು. 1980ರ ದಶಕದಲ್ಲಿ ಹೆಬ್ರಿಯ ಗ್ರಾಮಗಳು ಕಾರ್ಕಳ ತಾಲೂಕಿಗೆ ಸೇರಿದ್ದಾಗ, ಅಭಿವೃದ್ಧಿಯ ಕನಸುಗಳು ಮಂಕಾಗಿದ್ದವು. ಆದರೆ ಮಂಜುನಾಥ ಪೂಜಾರಿ ಮೌನವಾಗಿರಲಿಲ್ಲ. ಅವರು ಜನರ ಹಿತಕ್ಕಾಗಿ ಧ್ವಜ ಹಿಡಿದರು. “ಹೆಬ್ರಿಗೆ ತಾಲೂಕು ಬೇಕು” ಎಂಬ ಧ್ವನಿ ಅವರ ಶ್ವಾಸವಾಗಿಬಿಟ್ಟಿತು. ಮಕ್ಕಳಿಂದ ಹಿರಿಯರ ತನಕ ಎಲ್ಲರನ್ನು ಒಗ್ಗೂಡಿಸಿ, ಧರಣಿ, ಪ್ರತಿಭಟನೆ, ಪತ್ರಿಕೆ, ಸಭೆ ಹೀಗೆ ಎಲ್ಲಾಮಾರ್ಗಗಳನ್ನು ಬಳಸಿ ಸರ್ಕಾರದ ಕಿವಿಗೆ ಕನಸಿನ ಧ್ವನಿಯನ್ನು ತಟ್ಟಿದರು. ಶಾಸಕರಾದ ವೀರಪ್ಪ ಮೊಯ್ಲಿಯವರು ಸ್ಥಳಕ್ಕೆ ತಕ್ಷಣ ಬರುವುದಿಲ್ಲವೆಂದು ಹೇಳಿದಾಗ, ಮಂಜುನಾಥ ಪೂಜಾರಿ ತಮ್ಮ ಹೋರಾಟದ ಹಠವನ್ನು ತೋರಿಸುತ್ತಾ “ತಾಲೂಕು ಘೋಷಣೆ ಮ...