Posts

Showing posts from August 19, 2024

ಶ್ರೀ ನಾರಾಯಣ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ”

Image
*ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ತನ್ನಿಮಿತ್ತ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ” ಎಂದು ಸಾರುವ ಪುಟ್ಟ ಘಟನೆ ಇಲ್ಲಿದೆ*… ಮಲಯಾಳಂ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖರಲ್ಲಿ ಕುಟ್ಟಿಪ್ಪುಳ ಕೃಷ್ಣಪಿಳ್ಳ (1900-1971) ಕೂಡಾ ಒಬ್ಬರು. ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಇವರು ಮತ ಧರ್ಮಗಳನ್ನು ವೈಚಾರಿಕತೆಯ ಒರೆಯಲ್ಲಿ ಪರೀಕ್ಷಿಸಿ ಮಂಡಿಸಿದ ಖ್ಯಾತಿಯುಳ್ಳವರು. ಅವರು 1922ರಲ್ಲಿ ಆಲುವಾ ಅದ್ವೈತಾಶ್ರಮದಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇರಿಕೊಂಡರು. ಈ ಕಾಲದ ಅನುಭವವೊಂದನ್ನು ಅವರು ದಾಖಲಿಸಿದ್ದಾರೆ. ಇದು ಶ್ಯಾಮ್ ಬಾಲಕೃಷ್ಣನ್ ಅವರು ಸಂಪಾದಿಸಿರುವ ‘ಮೌನಪೂನ್ತೇನ್’ ಕೃತಿಯಲ್ಲಿದೆ.  ಆಲುವಾ ಪಾಠಶಾಲೆಯ ವಿದ್ಯಾರ್ಥಿಗಳಿಗೆ   ಗುರುಗಳು ಪ್ರಾಯೋಜಿಸಿದ ಔತಣ ನೀಡುವ ರೂಢಿಯಿತ್ತು. ವಿವಿಧ ಜಾತಿ ಮತಗಳಿಗೆ ಸೇರಿದವರು ಒಟ್ಟಿಗೆ ಕುಳಿತು ಉಣ್ಣುವುದು ಈ ಔತಣಗಳ ಉದ್ದೇಶ. ಒಮ್ಮೆ ಈ ಔತಣಕ್ಕೆ ಆಶ್ರಮದ ಅಧಿಕಾರಿಗಳು ನನ್ನನ್ನೂ ಆಹ್ವಾನಿಸಿದರು. ಆ ಕಾಲದಲ್ಲಿ ನಾನಿದ್ದ ಸ್ಥಿತಿಯನ್ನು ಗಮನಿಸಿದ್ದ ಅವರಿಗೆ ಈ ಔತಣದ ಆಹ್ವಾನವನ್ನು ಒಪ್ಪಿಕೊಳ್ಳುತ್ತೇನೇಯೋ ಇಲ್ಲವೋ ಎಂಬ ಅನುಮಾನವಿತ್ತು. ವಿವಿಧ ಜಾತಿಗಳಿಗೆ ಸೇರಿದವರ ಸಹಪಂಕ್ತಿ ಭೋಜನ ಆಚಾರಗಳ ಉಲ್ಲಂಘನೆಯಲ್ಲೇ ಅತಿ ದೊಡ್ಡದೆಂದು ಸವರ್ಣ ಹಿಂದೂಗಳು ಭಾವಿಸಿದ್ದ ಕಾಲವದು. ಸಂಪ್ರದಾಯಸ್ಥ  ಕುಟುಂಬದಲ್ಲೇ ಹುಟ್ಟಿ ಅಲ್ಲಿಯ ತನಕ ಜಗತ್ತನ್ನೇ ನೋಡದಂತೆ ಬದುಕಿದ್ದ ನನಗೂ ಈ