Posts

Showing posts from June 25, 2024

ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿ

Image
ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿ ಸರಸಕವಿ ಮೂಲೂರು ಎಂದೇ ಪ್ರಸಿದ್ಧರಾಗಿರುವ ಮೂಲೂರು ಎಸ್ ಪದ್ಮನಾಭ ಪಣಿಕ್ಕರ್ (1869-1931) ಅವರ ಸಲಹೆಯಂತೆ ಟಿ.ಕೆ. ಕಿಟ್ಟನ್ ರೈಟರ್, ವಲ್ಲಭಶ್ಶೇರಿಯಿಲ್ ಗೋವಿಂದನ್ ವೈದ್ಯರ್ ಕೊಟ್ಟಾಯಂನ ನಾಗಂಬಡಂ ದೇವಾಲಯದಲ್ಲಿ ನಾರಾಯಣ ಗುರುಗಳನ್ನು ಭೇಟಿಯಾಗಿ ಶಿವಗಿರಿ ತೀರ್ಥಯಾತ್ರೆಯ ಪರಿಕಲ್ಪನೆಯನ್ನು ವಿವರಿಸಿ ಅದಕ್ಕೆ ಅನುಮತಿಯನ್ನು ಪಡೆದುಕೊಂಡರು. ಸರಸಕವಿ ಮೂಲೂರರ ಮಾರ್ಗದರ್ಶನದಲ್ಲಿ ತೀರ್ಥಯಾತ್ರೆಗೆ ಸಂಬಂಧಿಸಿದ ಒಂದು ಪ್ರಕಟಣೆಯನ್ನು ಸಿದ್ಧಪಡಿಸಿಕೊಂಡೇ ಕಿಟ್ಟನ್ ರೈಟರ್ ಮತ್ತು ಗೋವಿಂದನ್ ವೈದ್ಯರು ಗುರುಗಳನ್ನು ಬೇಟಿಯಾದರು. ಮೂಲೂರು ಅವರಿಗೆ ಆ ದಿನ ಮತ್ತೊಂದು ಕಾರ್ಯಕ್ರಮವಿದ್ದುದರಿಂದ ಗುರುಗಳನ್ನು ಭೇಟಿಯಾಗುವ ನಿಯೋಗದಲ್ಲಿ ಅವರು ಇರಲಿಲ್ಲ. ಈ ಭೇಟಿ 1928ರ ಜನವರಿ 19ರಂದು ನಡೆಯಿತು.  ಗುರುಗಳು ಶಿವಗಿರಿ ತೀರ್ಥಯಾತ್ರೆಯ ದಿನಾಂಕವನ್ನು ಯೂರೋಪಿಯನ್ ವರ್ಷಾರಂಭವೆಂದು ಸಲಹೆ ಮಾಡಿದ್ದರು. ಆದರೆ ಅದು ಈಗ ಡಿಸೆಂಬರ್ ತಿಂಗಳ ಕೊನೆಯಲ್ಲೇ ಆರಂಭವಾಗುತ್ತದೆ. ತೀರ್ಥಯಾತ್ರೆಯೊಂದು ದೈವಭಕ್ತಿಯಾಚೆಗೆ ಜನ ಕಲ್ಯಾಣದ ವಿಚಾರಗಳನ್ನು ಹೇಗೆ ಒಳಗೊಳ್ಳಬೇಕು ಎಂಬುದನ್ನು ಗುರುಗಳು ಅಂದೇ ಚಿಂತಿಸಿ ವಿವರಿಸಿದ್ದಾರೆ. ಆ ದಿನದ ಮಾತುಕತೆಯ ವಿವರಗಳನ್ನು ಗುರುಗಳ ಅನುಯಾಯಿಗಳು ದಾಖಲಿಸಿದ್ದಾರೆ. ಇಲ್ಲಿರುವ ಅನುವಾದಕ್ಕೆ ಪಿ ಸುಭದ್ರಾ ಅವರು ರಚಿಸಿರುವ ‘ಶ್ರೀ ನಾರಾಯಣಗುರು: ಮಹಾಪ್ರವಾಚಕನಾಯ ಮೈತ್ರೇಯನ್’ ಎಂಬ