ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೂಲಕ ಜಗತ್ತಿಗೆ ಸಾರಿದೆ. ಗುರು ದೇವರಿಗೆ ಗುರುಪೂಜೆ ಇಂದು ಸೋಮವಾರ ಸಂಜೆ 7.30ಕ್ಕೆ

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || *ಇಂದು ಸೋಮವಾರ ಸಂಜೆ 7.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರು ಪೂಜೆ* ಭಕ್ತಿಭಾವ ತುಂಬಿದ ಮಂಗಳೂರು ದಸರಾ ಮಹೋತ್ಸವ ಬಹಳ ಯಶಸ್ವಿಯಾಗಿ ನೆರವೇರಿದೆ.ಶ್ರೀ ಬಿ ಜನಾರ್ಧನ ಪೂಜಾರಿಯವರ ಆಶಯದಂತೆ ಜರಗುವ ಮಂಗಳೂರು ದಸರಾ ಜನತೆಯ ದಸರಾವಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದದಿಂದ ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂಬ ಅರಿವಿನ ಮೂಲಕ ಸರ್ವ ಸಮಾನತೆಯ ತತ್ವ ಸಂದೇಶಗಳನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೂಲಕ ಜಗತ್ತಿಗೆ ಸಾರಿದೆ. ಗುರು ದೇವರಿಗೆ ಗುರುಪೂಜೆ ಇಂದು ಸೋಮವಾರ ಸಂಜೆ 7.30ಕ್ಕೆ ಶ್ರೀ ಕ್ಷೇತ್ರದಲ್ಲಿ ನೇರವೇರಲಿದ್ದು ಕ್ಷೇತ್ರದ ಭಕ್ತರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಗುರುಪೂಜೆ ಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ.