Posts

Showing posts from August 15, 2024

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

Image
*ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು* ಗಾನಗಂಧರ್ವನೆಂಬ ಬಿರುದಿನ ಮೂಲಕವೇ ಪ್ರಸಿದ್ಧರಾಗಿರುವ ಕೆ.ಜೆ. ಯೇಸುದಾಸ್ ತಮ್ಮ ಸಿನಿಮಾ ಸಂಗೀತ ಪಯಣವನ್ನು ಆರಂಭಿಸಿದ್ದು ಈ ಕೆಳಗಿನ ಹಾಡಿನ ಮೂಲಕ… ।  ಜಾತಿ ಭೇದಂ ಮತದ್ವೇಷಂ ಏದುಮಿಲ್ಲಾದೆ ಸರ್ವರುಂ ಸೋದರತ್ವೇನ ವಾಳುನ್ನ ಮಾತೃಕಾ ಸ್ಥಾಪನಮಾಣಿದ್ “ಜಾತಿ ಭೇದ, ಮತ ದ್ವೇಷಗಳಿಲ್ಲದೆ  ಸರ್ವರೂ ಸೋದರರಂತೆ ಬಾಳುವ ಮಾದರಿ ಸಂಸ್ಥೆಯಿದು” ಎಂದು ಈ ಸಾಲುಗಳನ್ನು  ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಮೊದಲ  ಧಾರ್ಮಿಕ ಸಂಸ್ಥೆಯಾದ ಶೋಷಿತ ಅವಕಾಶ ವಂಚಿತ ಜನರಿಗೆ ಸ್ವಾಭಿಮಾನ ಆತ್ಮಗೌರವದ ಬಾಗಿಲು ತೆರೆದ ಕೇರಳದ ಅರುವಿಪ್ಪುರಂ ದೇಗುಲದ ಗೋಡೆಯಲ್ಲಿ ಗುರುಗಳು ಬರೆಸಿದ ವಾಕ್ಯಗಳು ಇವು. ಸುಮಾರು ಹತ್ತು ವರ್ಷಗಳ ಹಿಂದೆ ಗುರು ಸಮಾಧಿ ದಿನದಂದು ಕೆ. ಜೆ. ಯೇಸುದಾಸ್ ಗುರುದೇವರ ಬಗ್ಗೆ ಆಡಿದ ಮಾತುಗಳು ಈ ಕೆಳಗಿನಂತೆ ಇವೆ. ನನ್ನ ಬದುಕಿನ ಬಹುದೊಡ್ಡ ಹೆಜ್ಜೆಯನ್ನಿಟ್ಟದ್ದು ಶ್ರೀನಾರಾಯಣ ಗುರುದೇವರ ಈ ಮಹಾಕಾವ್ಯವನ್ನು ಹಾಡುವುದರ ಮೂಲಕವಾಗಿತ್ತು. ಇದು ನನ್ನ ಬದುಕಿನ ಬಹುದೊಡ್ಡ ಪುಣ್ಯಗಳಲ್ಲೊಂದೆಂದು ನಾನು ಭಾವಿಸಿದ್ದೇನೆ. ‘ಕಾಲ್ಪಾಡುಗಳ್’ ಎಂಬ ಸಿನಿಮಾಕ್ಕಾಗಿ ನಾನು ಮೊದಲು ಹಾಡಿದ, ಈಗಲೂ ಹಾಗೂ ಎಂದೆಂದೂ ಹಾಡುತ್ತಲೇ ಇರಬೇಕನ್ನಿಸುವ ನಾಲ್ಕು ಸಾಲುಗಳಿವು. ಇವು ನಾನು ಸಿನಿಮಾಕ್ಕಾಗಿ ಹಾಡಿದ ಮೊದಲ ಹಾಡಿನ ಸಾಲುಗಳೂ ಹೌದು. ಈ ನಾಲ್ಕು ಸಾಲುಗಳಲ್ಲಿ ಗುರುಗಳು ತೋರಿಸಿಕೊಟ್ಟ ಮಹಾತತ್ವದ ಕಾರಣಕ್