KADRI SHREE KALA BHIRAVA KSHETRA -SATHYA GHATANE












ಕದ್ರಿ ಶ್ರೀ ಕಾಲ ಭ್ಯೆರವನ ಕ್ಷೇತ್ರದಲ್ಲಿ.....ನಡೆದ ಸತ್ಯ... ಘಟನೆ....!!!          
ದಿನ (30-01-2018) ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಕದ್ರಿಯ ಶ್ರೀ ಕಾಲ ಭ್ಯೆರವ ಕ್ಷೇತ್ರಕ್ಕೆ ಹೋಗಿದೆ.. ಅಲ್ಲಿ ಕ್ಷೇತ್ರದ ಹೊರಗಡೆ ಮರದ ಹತ್ತಿರ ಕುಳಿತು. ಅದೇ ಅಲ್ಲಿ ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶದ ಬಗ್ಗೆ ದೂರವಾಣಿಯಲ್ಲಿ ನನ್ನ ಗೆಳೆಯರಾದ ಮಲ್ಪೆ ವಿ.ಕೆ.ಪೂಜಾರಿ ಯವರಲ್ಲಿ ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶ ವಿಚಾರಧಾರೆಗಳನ್ನೆ....ಮಾತನಾಡುತ್ತಿರುವ...ಆ ಸಮಯದಲ್ಲಿ... ಒಬ್ಬ ಯಾರೋ ಬಂದು...ನನ್ನ ಎಡಬದಿಯ ಸ್ವಲ್ಪ ದೂರದಲ್ಲಿ ಕುಳಿತು ಕೊಂಡ....!!! ಅಲ್ಲಿ ಸ್ವಲ್ಪ ಕತ್ತಲು ಕೂಡಾ ಇತ್ತು... !!! ಅಲ್ಲೆ ಪಕ್ಕದಲ್ಲಿ ಒಂದು ಸ್ಟೀಲ್ ತಟ್ಟೆ ಇತ್ತು...!!! ಆ ತಟ್ಟೆಯಲ್ಲಿ ಹೆಚ್ಚಾಗಿ ಅಲ್ಲಿರುವ ನಾಯಿಗಳಿಗೆ ಅನ್ನ ಹಾಕುವ ತಟ್ಟೆ ಅದು...!!! ಅದಲ್ಲಿತ್ತು ಅನ್ನ ಸಾರು ಚಪಾತಿ....!!! ಅದೇ ಅಲ್ಲಿ ಕುತ್ತ ಆ ವ್ಯಕ್ತಿ ಅದನ್ನು ತಿನ್ನಲು ಪ್ರಾರಂಭಿಸಿದ...ನನಗೆ ಒಮ್ಮಲೇ ಅಚ್ಚರಿ ಮೂಡಿಸಿತ್ತು....!!! ಅದೇ ನಾನು ಅವನೇ ತಂದು ತಟ್ಟೆಯಲ್ಲಿ ಹಾಕಿ ತಿನ್ನುವುದು ಎಂದು....!!! ಯೋಚಿಸಿದ್ದೆ... ಅದು ಅಲ್ಲ..ಹಾಗೇ...!!! ಅದು ಅಲ್ಲಿರುವ ತಟ್ಟೆನೇ ಅದು....!!! ಅದೇ ನಾನು ದೂರವಾಣಿ ಯಲ್ಲಿ ಶ್ರೀ ನಾರಾಯಣ ಗುರುದೇವರ ವಿಚಾರಗಳನೇ ಮುಂದುವರಿಸುತ್ತಿದೆ...ನನ್ನ ಗೆಳೆಯನಲ್ಲಿ....!!! ಸ್ವಲ್ಪ ಸಮಯದ ನಂತರ ಅಲ್ಲಿನ ಒಬ್ಬ ಸ್ವಾಮಿಜೀಯರು ಅಲ್ಲೆ ಸಮೀಪದಲ್ಲೇ ಇರುವ ನೀರಿನ ನಲ್ಲಿಯಲ್ಲಿ ತಟ್ಟೆ ತೊಳೆಯಲು ಬಂದರು... ಅವರು ಕೂಡಾ ಆ ವ್ಯಕ್ತಿ ತಿನ್ನುತ್ತಿರುವುದನ್ನು ಹತ್ತಿರ ಹೋಗಿ ನೋಡಿದ್ದರು.ಅವರಿಗೂ ಅಚ್ಚರಿ...!!! ಅಲ್ಲಿಂದ ಆ ಸ್ವಾಮೀಜಿ ಹೊರಟು ಹೋಗಿ... ಸ್ವಲ್ಪ ಸಮಯದ ನಂತರ ವಾಪಸ್ಸು ಬಂದು ಆ ವ್ಯಕ್ತಿ ತಟ್ಟೆಗೆ ಚಪಾತಿ ತಂದು ಹಾಕಿದ್ರು...!!! ನಾನು ನೋಡುತ್ತಾನೆ ಇದ್ದೆ...!!! ಆ ವ್ಯಕ್ತಿ ತಿನ್ನುತ್ತನೇ ಇತ್ತು....!!! ಅದೇ ನನ್ನ ಮನಸ್ಸು ಅದೇ ವ್ಯಕ್ತಿಯ ಹತ್ತಿರ ಹೋಗು ಎಂದು ಹೇಳುತ್ತಿತ್ತು...!!! ನಾನು ತಕ್ಷಣ ಅಲ್ಲಿಂದ ಎದ್ದು ಆ ವ್ಯಕ್ತಿಯ ಹತ್ತಿರ ಹೋದೆ.. ತಕ್ಷಣ ಆ ವ್ಯಕ್ತಿ ಅಲ್ಲಿಂದ ಎದ್ದು.. ಮುಂದೆ ಹೋಯಿತು...!!! ಅದೇ ತಟ್ಟೆಯಲ್ಲಿ ಅನ್ನ ಚಪಾತಿ ಹಾಗೇನೆ ಇತ್ತು...!!! ನಂತರ ಇನ್ನೊಬ್ಬ ಬಂದು ನನ್ನಲ್ಲಿ ವಿಚಾರಿಸಿತ್ತು...ಆ ವ್ಯಕ್ತಿ ಯಾರೆಂದು...!? ನಾನು ಹೇಳಿದೆ.ನನಗೆ ಗೊತ್ತಿಲ್ಲ ಎಂದೂ....!!! ಅವರು ಅಲ್ಲಿಂದ ಸೀದಾ ಹೋಗಿ ಒಬ್ಬ ಸನ್ಯಾಸಿ ಬಾಬಾರನ್ನು ಅವರು ಕರೆದು ಕೊಂಡು ಬಂದರು... ಆ ಸನ್ಯಾಸಿ ಬಾಬಾ ಆ ವ್ಯಕ್ತಿಯನ್ನು ಹಿಂದಿ ಭಾಷೆಯಲ್ಲಿ ವಿಚಾರಿಸಿದಾಗ ...ಆ ವ್ಯಕ್ತಿ ನಾನು ರಾತ್ರಿ ಇಲ್ಲಿಯೇ ಮಲಗುತ್ತೇನೆ..ಎಂದಿತ್ತು.... ಅದಕ್ಕೆ ಅಲ್ಲಿನ ಬಾಬಾ ಅವಕಾಶ ಕೊಡಲಿಲ್ಲ... ನೀವು ಕದ್ರಿ ದೇವಸ್ಥಾನಕ್ಕೆ ಹೋಗಿ ಎಂದರು... ಆ ವ್ಯಕ್ತಿಯನ್ನು... ಆ ವ್ಯಕ್ತಿ ಕ್ಷೇತ್ರದ ಕಾಂಪೌಂಡ್ ನ ಹೊರಗೆ ಬಂದು ನಾನು ಮತ್ತು ಇನ್ನೊಬ್ಬ ಅಪರಿಚಿತ ನಾವು ಒಟ್ಟಾಗಿ ಮಾತನಾಡಿದೇವು...ಆ ವ್ಯಕ್ತಿಯಲ್ಲಿ ನಾವು ನೀವು ಎಲ್ಲಿಂದ ಬಂದಿರುವುದು ಎಂದು ಕೇಳಿದೇವು...ಆ ವ್ಯಕ್ತಿ ಹಿಂದಿ ಬಾಷೆಯಲ್ಲಿ ನಾನು ಇಲ್ಲಿಯವನೇ ಇಲ್ಲಿಯೇ ಇರುವುದು ಎಂದಿತ್ತು....!!! ಅದೇ ಅಲ್ಲಿಂದ ಸೀದಾ ಹೊರಟ್ಟಿತ್ತು....!!! ಇದು ನೋಡಲು ಅದ್ಭುತ...!!! ಆಶ್ಚರ್ಯದ ಸಂಗತಿ...!!! 
ಬಿಕ್ಷುಕನ್ನೂ....ಅಲ್ಲ...!!! ಹುಚ್ಚು... ಅಲ್ಲ...!!! ನೋಡಲು ಸುಂದರವಾಗಿಯೇ ಇದ್ದ... ಅದೇ ಬಟ್ಟೆಯಲ್ಲಿ ಮಣ್ಣು ತುಂಬಿತ್ತು....!!! ಪ್ಯಾಂಟ್ ಧರಿಸಿದ್ದ.. ಅದೇ ಕಾಲಿಗೆ ಕಪ್ಪುಬಣ್ಣದ ಸಾಕ್ಸ್ ಧರಿಸಿತ್ತು..!!! ಅದೇ ಹಣೆಯಲ್ಲಿ ಕೆಂಪು ಬಣ್ಣದ ಅಡ್ಡ ನಾಮದ ಅಗಲವಾದ ತಿಲಕ ಇತ್ತು....!!! 
ಅದೇ ನಾವು ಇಬ್ಬರು ಸ್ವಲ್ಪ ಹೊತ್ತು ...ಮಾತನಾಡುತ್ತಾ... ನನಗೆ ತಕ್ಷಣ ನೆನಪಿಗಾಗಿ ಬಂತು...ಮರುತ್ವಮಲೆಯಲ್ಲಿ ಒಮ್ಮೆ ಶ್ರೀ ನಾರಾಯಣ ಗುರು ದೇವರು ತಪಸ್ಸು ಮಾಡುತ್ತಿದ್ದಾಗ ತಪಸ್ಸುನಿಂದ ಎದ್ದ ತಕ್ಷಣ ಅವರಿಗೆ ಹಸಿವಾಯಿತು. ಅಂದು ಗುರುಗಳಿಗೆ ಏನಾದರೂ ಆಹಾರ ಬೇಕಿತ್ತು. ತೀರಾ ಕತ್ತಲಾಗಿದ್ದರಿಂದ ಕಾಡಿನಲ್ಲಿ ಹಣ್ಣು ಕಾಯಿಗಳನ್ನು ಹುಡುಕುವುದು ಸಾಧ್ಯವಾಗುವಂತಿಲ್ಲ. ಆದರೂ ಆಹಾರವನ್ನರಸಿ ಅವರು ಗುಹೆಯಿಂದ ಹೊರಗೆ ಬಂದರು. ಅದೇ ಸಮಯಕ್ಕೆ ಕುಷ್ಠ ರೋಗಿ ಮುದುಕನೊಬ್ಬ ಅಲ್ಲಿಗೆ ಬಂದ.ಅವನ್ನು ಗುರುಗಳನ್ನು ಕಂಡವನೇ ಅವರನ್ನು ಕುಳಿತುಕೊಳ್ಳವಂತೆ ಹೇಳಿದ.ಆನಂತರ ಎರಡೂ ಎಲೆಗಳನ್ನಿಟ್ಟು ಅದರಲ್ಲಿ ಹುರಿದ ಅಕ್ಕಿಹಿಟ್ಟನ್ನು ಬೆಲ್ಲವನ್ನೂ ಇಟ್ಟ.ಹಸಿದಿದ್ದ ಗುರುಗಳಿಗೆ ಅದು ಮೃಷ್ಟಾನ್ನ ಸಮಾನ ಭೋಜನವಾಯಿತು.ಊಟ ಮುಗಿಸಿ ಗುಹೆಗೆ ಹೋಗಿ ಎರಡು ದೊನ್ನೆಗಳಲ್ಲಿ ನೀರು ತಂದರು.ಆದರೆ ಆ ಮುದುಕ ಎಲ್ಲಿದ್ದಾನೆ..? ಗುರುಗಳು ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಿದರೂ ಆ ಕುಷ್ಠರೋಗಿ ಪತ್ತೆ ಆಗಲಿಲ್ಲ... ಆಗ ಶ್ರೀ ನಾರಾಯಣಗುರುಗಳು ಅವನಲ್ಲಿ ಪರಮಾತ್ಮನನ್ನು ಕಂಡರು. ಎಂದೂ ಮಾತು ಮುಂದುವರಿಸಿದೇ....ನಂತರದ ಅವರ ಧರ್ಮಸ್ಥಳ ಕ್ಷೇತ್ರದ ಅಣಪ್ಪ ಸ್ವಾಮಿಯ ಬಗ್ಗೆ ಮಾತನ್ನು ಸುಮಾರು ರಾತ್ರಿ 9 ಗಂಟೆಯ ತನಕ ಮುಂದುವರಿಸುತ್ತಾ.... ಅದೇ ನನ್ನ ಮನಸ್ಸು ಮಾತ್ರ ಅದೇ ವ್ಯಕ್ತಿ ಮೇಲೆನೇ ಇತ್ತು....!!! ನಂತರ ಅವರು ಮನೆಗೆ ಹೊರಟರು. ನಾನು ಅಲ್ಲಿಂದ ತಕ್ಷಣ ಆ ವ್ಯಕ್ತಿಯನ್ನು ಹುಡುಕಲು ಪ್ರಾರಂಬಿಸಿದೆ.ಹುಡುಕುತ್ತಾ ಕದ್ರಿ ದೇವಸ್ಥಾನಕ್ಕೆ ಹೊರಟೆ.ಅಲ್ಲಿಯೇ ದೇವಸ್ಥಾನದ ಪಕ್ಕದಲ್ಲೇ ಆ ವ್ಯಕ್ತಿ ಇತ್ತು....!!! 
ನಾವು ದೇವಸ್ಥಾನದ ಧ್ವಜ ಸ್ತಂಭದ ಹತ್ತಿರ ನಿಂತು.. ದೇವರಲ್ಲಿ ಪ್ರಾರ್ಥನೆ ಮಾಡುತ್ತಿದೆ...!!! ಆ ವ್ಯಕ್ತಿ ಅಲ್ಲಿಗೆನೇ ಬಂತು. ನಾನು ಮಾತನಾಡಿಸಿದೇ ನಿಮ್ಮ ಪ್ಲಾಸ್ಟಿಕ್ ಕವರ್ ಎಲ್ಲಿ ಎಂದೂ ಕೇಳಿದೆ.ಆ ವ್ಯಕ್ತಿ ಹಿಂದಿಯಲ್ಲಿ ಕೆರೆ ಹತ್ತಿರ ಇದೆ ಎಂದು ಹೇಳಿತ್ತು. ಅದೇ ಅದರ ಹಿಂದೆನೇ ಕೆರೆಯ ಹತ್ತಿರ ಹೊರಟೆ...!!! ತಕ್ಷಣ ನೆನಪಿಗೆ ಬಂತು ಆ ವ್ಯಕ್ತಿಗೆ ದಾನ ಮಾಡುವ ಎಂದು.... ತಕ್ಷಣ ಆ ವ್ಯಕ್ತಿಗೆ ಹತ್ತು ರೂಪಾಯಿಯ ಮೂರು ನೋಟುಗಳನ್ನು ಕೊಟ್ಟೆ..!!! ಅದೇ ನೋಟುಗಳನೇ ಸ್ವಲ್ಪ ಹೊತ್ತು ನೋಡಿ....!!! ನಂತರದ ಅದರ ಅಂಗಿಯ ಕಿಸೆಯಲ್ಲಿ ಹಾಕಿಕೊಂಡಿತು.. ಅದೇ ಕರೆ ಇನ್ನೊಂದು ಪಕ್ಕದಲ್ಲಿ ಯಾರೋ ಒಬ್ಬರು ಸ್ನಾನ ಮಾಡುತ್ತಿದರು.ಅದೇ ಆ ವ್ಯಕ್ತಿ ಯಾರೆಂದು ನನ್ನಲ್ಲಿ ಕೇಳಿತು. ಆಗ ನಾನು ನನಗೆ ಗೊತ್ತಿಲ್ಲ ಎಂದೆ...!!! ನಂತರ ಆ ವ್ಯಕ್ತಿಗೆ ಅಲ್ಲಿಯೇ ಸ್ನಾನ ಮಾಡುತ್ತಿದ್ದ ಇನ್ನೊಬ್ಬ ...ಆ ವ್ಯಕ್ತಿಗೆ ಜೋರು ಮಾಡುತ್ತಿದ್ದ... ನೀನು ಇಲ್ಲಿಂದ ಬೇಗನೇ ಹೊರಡಬೇಕು ಎಂದು... ಇಲ್ಲದಿದ್ದರೆ ಪೋಲಿಸ್ ಕಂಪ್ಲೀಟ್ ಕೊಡುತ್ತೇನೆ ಎಂದು ಹೇಳಿತು....!!! ನಾನು ಅಲ್ಲಿಂದ ಹೊರಡುವಾಗ ಸುಮಾರು ರಾತ್ರಿ 9.30 ಗಂಟೆ ಆಯಿತು. ನಂತರ ಮನೆಗೆ ಹೊರಟೆ....
ಅದೇ ಇದರ ಹಿಂದೆ ಇರುವ ಸತ್ಯ ಅದೇ ಪರಮ ಸತ್ಯ.....!!! ಅದೇ ಪರಮಾತ್ಮ ನಮಗೆ ಯಾವುದೇ ರೂಪದಲ್ಲೊ ....ತನ್ನ ಭಕ್ತನಿಗೆ ದರ್ಶನ ಕೊಡಬಹುದು.....!!! ಅದೇ ನಿನ್ಮ ಮನಸ್ಸು ಸದಾ ಆ ಪರಮಾತ್ಮನಲ್ಲಿಯೇ ಲೀನವಾದ್ದಾರೆ.....ಖಂಡಿತವಾಗಿಯು...ಅವನ ಕೃಪೆ...ದರ್ಶನ ನೀನಾಗಾಗುವುದು......!!!! ಇದು ಸತ್ಯ. ಅದು ಪರಮ ಸತ್ಯ... ಅದೇ ಶಿವನ ಸ್ವರೂಪ....!!!! ಅದೇ ಕಾಲಭ್ಯೆರವನ ಸ್ವರೂಪ....!!! ಅದೇ ಮಹಾಶಕ್ತಿ ಮಾತ್ರ ಒಂದೇ.ಅದು "ಈಶ್ವರ ಶಕ್ತಿ.'...!! ಅದೇ ಶ್ರೀ ನಾರಾಯಣ ಗುರುದೇವರ ಮಹಾ ಶಕ್ತಿ....!!! 
ನನ್ನ ಅನುಭವದ ದೇವರು.... ನಿಮಗೋ ಆಗಲಿ.... ಆ. ....ಅನುಭವ......
ಜೈ ಗುರುದೇವ.
ಶ್ರೀ ನಾರಾಯಣ ಗುರುದೇವರ ಪರಮ ಸೇವಕ
 ಸುರೇಶ್. ಕೆ.ಪಿ

https://www.facebook.com/billavayouthvingmangaluru/posts/1446617585449351

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ