*ಶ್ರೀ ಕ್ಷೇತ್ರ ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ದಿನಾಂಕ : 3-10-2024 ನೇ ಗುರುವಾರದಿಂದ 12-10-2024 ನೇ ಶನಿವಾರದ ವರೆಗೆ.* ಸದ್ಭಕ್ತರೇ, ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂವತ್ಸರದ ಕನ್ಯಾ ಮಾಸ 17 ಸಲುವ ದಿನಾಂಕ : 03-10-2024 ನೇ ಗುರುವಾರ ಮೊದಲ್ಗೊಂಡು ದಿನಾಂಕ : 12-10-2024 ನೇ ಶನಿವಾರದ ವರೆಗೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು ಈ ನವರಾತ್ರಿ ಉತ್ಸವದಲ್ಲಿ *ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ ಹಾಗೂ ಅಕ್ಷರಭ್ಯಾಸ* ನಡೆಯಲಿರುವುದು. ಈ ಸೇವೆ ಮಾಡಲು ಇಚ್ಚಿಸುವವರು ಶ್ರೀ ಕ್ಷೇತ್ರದ ದೂರವಾಣಿ ಸಂಖ್ಯೆ: *9148894088* ತಿಳಿಸಿದ್ದಲ್ಲಿ ನೀವು ತಿಳಿಸಿದ ದಿನಾಂಕದಂದು ಪೂಜೆ ಮಾಡಿಸಿ ಪ್ರಸಾದ ನೀಡಲಾಗುವುದು. ಭಕ್ತಾಭಿಮಾನಿಗಳಾದ ತಾವು ತನು ಮನ ಧನಗಳಿಂದ ಸಹಕರಿಸಿ ಸರ್ವಶಕ್ತಿಗಳ ಪ್ರಸಾದ ಪಡೆದು ಸಾನಿಧ್ಯ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. *ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ.* 💛
*ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು* ಗಾನಗಂಧರ್ವನೆಂಬ ಬಿರುದಿನ ಮೂಲಕವೇ ಪ್ರಸಿದ್ಧರಾಗಿರುವ ಕೆ.ಜೆ. ಯೇಸುದಾಸ್ ತಮ್ಮ ಸಿನಿಮಾ ಸಂಗೀತ ಪಯಣವನ್ನು ಆರಂಭಿಸಿದ್ದು ಈ ಕೆಳಗಿನ ಹಾಡಿನ ಮೂಲಕ… । ಜಾತಿ ಭೇದಂ ಮತದ್ವೇಷಂ ಏದುಮಿಲ್ಲಾದೆ ಸರ್ವರುಂ ಸೋದರತ್ವೇನ ವಾಳುನ್ನ ಮಾತೃಕಾ ಸ್ಥಾಪನಮಾಣಿದ್ “ಜಾತಿ ಭೇದ, ಮತ ದ್ವೇಷಗಳಿಲ್ಲದೆ ಸರ್ವರೂ ಸೋದರರಂತೆ ಬಾಳುವ ಮಾದರಿ ಸಂಸ್ಥೆಯಿದು” ಎಂದು ಈ ಸಾಲುಗಳನ್ನು ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಮೊದಲ ಧಾರ್ಮಿಕ ಸಂಸ್ಥೆಯಾದ ಶೋಷಿತ ಅವಕಾಶ ವಂಚಿತ ಜನರಿಗೆ ಸ್ವಾಭಿಮಾನ ಆತ್ಮಗೌರವದ ಬಾಗಿಲು ತೆರೆದ ಕೇರಳದ ಅರುವಿಪ್ಪುರಂ ದೇಗುಲದ ಗೋಡೆಯಲ್ಲಿ ಗುರುಗಳು ಬರೆಸಿದ ವಾಕ್ಯಗಳು ಇವು. ಸುಮಾರು ಹತ್ತು ವರ್ಷಗಳ ಹಿಂದೆ ಗುರು ಸಮಾಧಿ ದಿನದಂದು ಕೆ. ಜೆ. ಯೇಸುದಾಸ್ ಗುರುದೇವರ ಬಗ್ಗೆ ಆಡಿದ ಮಾತುಗಳು ಈ ಕೆಳಗಿನಂತೆ ಇವೆ. ನನ್ನ ಬದುಕಿನ ಬಹುದೊಡ್ಡ ಹೆಜ್ಜೆಯನ್ನಿಟ್ಟದ್ದು ಶ್ರೀನಾರಾಯಣ ಗುರುದೇವರ ಈ ಮಹಾಕಾವ್ಯವನ್ನು ಹಾಡುವುದರ ಮೂಲಕವಾಗಿತ್ತು. ಇದು ನನ್ನ ಬದುಕಿನ ಬಹುದೊಡ್ಡ ಪುಣ್ಯಗಳಲ್ಲೊಂದೆಂದು ನಾನು ಭಾವಿಸಿದ್ದೇನೆ. ‘ಕಾಲ್ಪಾಡುಗಳ್’ ಎಂಬ ಸಿನಿಮಾಕ್ಕಾಗಿ ನಾನು ಮೊದಲು ಹಾಡಿದ, ಈಗಲೂ ಹಾಗೂ ಎಂದೆಂದೂ ಹಾಡುತ್ತಲೇ ಇರಬೇಕನ್ನಿಸುವ ನಾಲ್ಕು ಸಾಲುಗಳಿವು. ಇವು ನಾನು ಸಿನಿಮಾಕ್ಕಾಗಿ ಹಾಡಿದ ಮೊದಲ ಹಾಡಿನ ಸಾಲುಗಳೂ ಹೌದು. ಈ ನಾಲ್ಕು ಸಾಲುಗಳಲ್ಲಿ ಗುರುಗಳು ತೋರಿಸಿಕೊ...
ಉತ್ತಮ ಅನುಭವದ ಬರಹ👌👍....ಮಿತ್ರ ನಿಮಗೆ ಶುಭವಾಗಲಿ..... --------------- *ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ* *ಸಂಘಟನೆಗಳು ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರಬಾರದು. ಅವು ಸಮಾಜಕ್ಕೆ ಅಥವಾ ನಿರ್ದಿಷ್ಟ ಸಮುದಾಯ, ವರ್ಗದ ಹಿತಕ್ಕಾಗಿ ಕೆಲಸ ಮಾಡಬೇಕು. *ಸಂಘವು ಸಮಾಜದ ಸಮುದಾಯದ ಆಸ್ತಿಯೇ ಹೊರತು ನಿರ್ದಿಷ್ಟ ವ್ಯಕ್ತಿಯದ್ದಾಗಿರುವುದಿಲ್ಲ. *ಸಂಘದಲ್ಲಿ ರಾಜಕೀಯ, ಪಕ್ಷಪಾತ ಸಲ್ಲದು ಆದರೆ ತನ್ನ ಸಮುದಾಯದ ಒಟ್ಟು ಅಭಿವೃದ್ಧಿಗೆ ಕೆಲಸ ಮಾಡಲು ತನ್ನ ಸಮುದಾಯಕ್ಕೆ ಕೂಡ ರಾಜಕೀಯ ಅಧಿಕಾರ ಬೇಕು ಎನ್ನುವ ರಾಜಕೀಯ ಪ್ರಜ್ಞೆ ಬೇಕು.