Posts

Showing posts from August 20, 2024

ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಗೋಳಿಗರಡಿಯಲ್ಲಿ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ.

Image
*ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ* *ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಗೋಳಿಗರಡಿಯಲ್ಲಿ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಯಿತು* *ಗೋಳಿಗರಡಿ ಕ್ಷೇತ್ರದ ಪಾತ್ರಿಗಳಾದ ಶ್ರೀ ಶಂಕರ ಪೂಜಾರಿ ಇವರು ಪೂಜೆಯನ್ನು ನೆರೆವೇರಿಸುವುದರೊಂದಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.* *ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಜಿ ವಿಠ್ಠಲ ಪೂಜಾರಿ, ಅಧ್ಯಕ್ಷರಾದ ಶ್ರೀ ಎಂ ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀ ಐರೋಡಿ ವಿಠ್ಠಲ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನ ಜೆ ರಾಜ್, ಕೌಶಾಧಿಕಾರಿ ಶ್ರೀ ವಿಜಯ ಪೂಜಾರಿ, ಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಶ್ರೀ ರಾಜು ಪೂಜಾರಿ ಮೂಡಹಡು, ಶ್ರೀ ಸುರೇಶ್ ಪೂಜಾರಿ ಪಾಂಡೇಶ್ವರ, ಸುಧಾಕರ ಪೂಜಾರಿ ಐರೋಡಿ, ಸುರೇಶ್ ಪೂಜಾರಿ ಗುಡ್ಮಿ, ವಿಜಯ ಪೂಜಾರಿ ಬಾಳಕುದ್ರು, ಮನೋಜ ಪೂಜಾರಿ,  ಪಂಜು ಪೂಜಾರಿ, ಶ್ರೀಮತಿ ಶಶಿಕಲಾ ವಿಜಯ್ ಪೂಜಾರಿ, ಲೀಲಾವತಿ ಗಂಗಾಧರ ಪೂಜಾರಿ, ರಘು ಪೂಜಾರಿ, ಪ್ರಜ್ವಲ್ ಅರ್ಚಕರುಗಳಾದ ದಿನಕರ ಪೂಜಾರಿ,  ಸೀನ ಪೂಜಾರಿ, ಕರಿಯ ಪೂಜಾರಿ,  ಹರೀಶ್ ಪೂಜಾರಿ ಉಪಸ್ಥಿತರಿದ್ದರು*

ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೆಯ ಜಯಂತಿಯ ಆಚರಣೆ.

Image
ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಆಚರಣೆ ಮತ್ತು ಡಿ ದೇವರಾಜ ಅರಸು ರವರ 109ನೇ ಜನ್ಮದಿನಾಚರಣೆ  ಶ್ರೀ ಕ್ಷೇತ್ರ ಸಿಗಂದೂರಿನ ದೇವಾಲಯವೂ ಇಂದು ಎರಡು ವಿಶೇಷ ಆಚರಣೆಗೆ ಸಾಕ್ಷಿಯಾಯಿತು. ಈ ವಿಶ್ವ ಕಂಡ ದಾರ್ಶನಿಕರು,ವಿಶ್ವಕ್ಕೆ ಒಂದೇ ಜಾತಿ ,ಒಂದೇ ಮತ,ಒಂದೇ ಮತವೆಂದು ಸಾರಿದ ಮನುಕುಲದ ಉದ್ದಾರಕ್ಕಾಗಿ ಅದರಲ್ಲೂ ಹಿಂದುಳಿದ ಮನೂಕುಲದ ಧಾರ್ಮಿಕತೆ,ಶೈಕ್ಷಣಿಕ, ಮತ್ತು ಸ್ತ್ರೀ ಸ್ಥಾನಮಾನವನ್ನು ಹೆಚ್ಚಿಸಲು ಧಾರೆಗೆ ಆಗಮಿಸಿದ ಯುಗಪುರಷ ಬ್ರಹ್ಮಶ್ರೀ ನಾರಾಯಣ ಗುರುಗಳು ಇವರ 170ನೇ ಜನ್ಮದಿನಾಚರಣೆಯನ್ನು ಶ್ರೀ ‌ಕ್ಷೇತ್ರದಲ್ಲಿ ಅತೀ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಶ್ರೀ ‌ರಘುಪತಿ ಭಟ್ರ ಅರ್ಚಕತ್ವದಲ್ಲಿ ವಿಧಿ ವಿಧಾನದ ಪೂಜಾ ಕಾರ್ಯದೊಂದಿಗೆ,ಬೆಳಮಕ್ಕಿ ಭಜನ ತಂಡದ ಭಜನೆಯೊಂದಿಗೆ ನೇರದಿರುವ ಭಕ್ತ ಸಂಕುಲದ ಜೊತೆಗೆ ಪೂಜ್ಯ ಶ್ರೀ ಡಾ. ರಾಮಪ್ಪನವರು ಧರ್ಮದರ್ಶಿಗಳ ಸಂಪೂರ್ಣ ಅನುಗ್ರಹಪೂರ್ವಕವಾಗಿ ಶ್ರೀಯುತ ರವಿಕುಮಾರ್ ಹೆಚ್ ಆರ್ ಇವರ ಮುಂದಾಳತ್ವದಲ್ಲಿ ಪೂಜಾ ಕಾರ್ಯ ನೇರವೇರಿತು. ಶ್ರೀಯುತ ರವಿಕುಮಾರ್ ಹೆಚ್ ಆರ್ ಪ್ರಧಾನ ಕಾರ್ಯದರ್ಶಿಗಳು ಇದೇ ಸುಸಂದರ್ಭದಲ್ಲಿ 2 ಪ್ರಮುಖ ಘೋಷಣೆಗಳನ್ನು ಮಾಡಿದರು. 1) ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಗರದ ಅತ್ಯಂತ ಗುಡ್ಡಗಾಡು ಪ್ರದೇಶದ ಶೈಕ್ಷಣಿಕ ದೇಗುಲ ಸ ಕಿ ಪ್ರಾ ಶಾಲೆ ಮೇಘಾನೆ ಶಾಲೆಗೆ 52ನೇ ಶಾಲೆಯಾಗಿ ಶ್ರೀ ಕ್ಷೇತ್ರ ಸಿಗಂದೂರಿನ‌ಚ