ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೆಯ ಜಯಂತಿಯ ಆಚರಣೆ.

ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಆಚರಣೆ ಮತ್ತು ಡಿ ದೇವರಾಜ ಅರಸು ರವರ 109ನೇ ಜನ್ಮದಿನಾಚರಣೆ 

ಶ್ರೀ ಕ್ಷೇತ್ರ ಸಿಗಂದೂರಿನ ದೇವಾಲಯವೂ ಇಂದು ಎರಡು ವಿಶೇಷ ಆಚರಣೆಗೆ ಸಾಕ್ಷಿಯಾಯಿತು.

ಈ ವಿಶ್ವ ಕಂಡ ದಾರ್ಶನಿಕರು,ವಿಶ್ವಕ್ಕೆ ಒಂದೇ ಜಾತಿ ,ಒಂದೇ ಮತ,ಒಂದೇ ಮತವೆಂದು ಸಾರಿದ ಮನುಕುಲದ ಉದ್ದಾರಕ್ಕಾಗಿ ಅದರಲ್ಲೂ ಹಿಂದುಳಿದ ಮನೂಕುಲದ ಧಾರ್ಮಿಕತೆ,ಶೈಕ್ಷಣಿಕ, ಮತ್ತು ಸ್ತ್ರೀ ಸ್ಥಾನಮಾನವನ್ನು ಹೆಚ್ಚಿಸಲು ಧಾರೆಗೆ ಆಗಮಿಸಿದ ಯುಗಪುರಷ ಬ್ರಹ್ಮಶ್ರೀ ನಾರಾಯಣ ಗುರುಗಳು ಇವರ 170ನೇ ಜನ್ಮದಿನಾಚರಣೆಯನ್ನು ಶ್ರೀ ‌ಕ್ಷೇತ್ರದಲ್ಲಿ ಅತೀ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಶ್ರೀ ‌ರಘುಪತಿ ಭಟ್ರ ಅರ್ಚಕತ್ವದಲ್ಲಿ ವಿಧಿ ವಿಧಾನದ ಪೂಜಾ ಕಾರ್ಯದೊಂದಿಗೆ,ಬೆಳಮಕ್ಕಿ ಭಜನ ತಂಡದ ಭಜನೆಯೊಂದಿಗೆ ನೇರದಿರುವ ಭಕ್ತ ಸಂಕುಲದ ಜೊತೆಗೆ ಪೂಜ್ಯ ಶ್ರೀ ಡಾ. ರಾಮಪ್ಪನವರು ಧರ್ಮದರ್ಶಿಗಳ ಸಂಪೂರ್ಣ ಅನುಗ್ರಹಪೂರ್ವಕವಾಗಿ ಶ್ರೀಯುತ ರವಿಕುಮಾರ್ ಹೆಚ್ ಆರ್ ಇವರ ಮುಂದಾಳತ್ವದಲ್ಲಿ ಪೂಜಾ ಕಾರ್ಯ ನೇರವೇರಿತು.

ಶ್ರೀಯುತ ರವಿಕುಮಾರ್ ಹೆಚ್ ಆರ್ ಪ್ರಧಾನ ಕಾರ್ಯದರ್ಶಿಗಳು ಇದೇ ಸುಸಂದರ್ಭದಲ್ಲಿ 2 ಪ್ರಮುಖ ಘೋಷಣೆಗಳನ್ನು ಮಾಡಿದರು.

1) ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಗರದ ಅತ್ಯಂತ ಗುಡ್ಡಗಾಡು ಪ್ರದೇಶದ ಶೈಕ್ಷಣಿಕ ದೇಗುಲ ಸ ಕಿ ಪ್ರಾ ಶಾಲೆ ಮೇಘಾನೆ ಶಾಲೆಗೆ 52ನೇ ಶಾಲೆಯಾಗಿ ಶ್ರೀ ಕ್ಷೇತ್ರ ಸಿಗಂದೂರಿನ‌ಚಿತ್ತ ಸರ್ಕಾರಿ‌ಶಾಲೆಗಳತ್ತ ಯೋಜನೆಯಡಿಯಲ್ಲಿ ಶಾಲೆ‌ ಮತ್ತು ಅಂಗನವಾಡಿಯ ಸಂಪೂರ್ಣ ಅಂದಚಂದ ಮಾಡಲಾಗುವುದು ಎಂದು ಘೋಷಿಸಿದರು.

2) ಸಂಸ್ಕೃತ ಭಾಷೆಯ ಪ್ರಭುತ್ವ ಇಲ್ಲಿಯ ಮಕ್ಕಳಿಗೆ ಯುವಕರಿಗೆ ಬರಬೇಕೆಂಬ ಸದುದ್ದೇಶದಿಂದ ಶ್ರೀ ಕ್ಷೇತ್ರ ಸಿಗಂದೂರು ಪ್ರತಿ ಶನಿವಾರ ಮಧ್ಯಾಹ್ನ 2:00ರಿಂದ 04:00ರ ವರೆಗೆ ಶ್ರೀ ರಘುಪತಿ ಭಟ್ ಇವರ ಗುರುತ್ವದಲ್ಲಿ ಸಂಸ್ಕೃತ ಮಂತ್ರ ಮತ್ತು ಧಾರ್ಮಿಕ ವಿಧಿವಿಧಾನದ ಪಾಠ ಮಾಡಲು ಈ ಅಕ್ಟೋಬರ್‌ ನಿಂದ ಆರಂಭಿಸಲಾಗುವುದು ಎಂದು ಘೋಷಣೆ ಮಾಡಲಾಯಿತು.

ನಂತರದಲ್ಲಿ ಈ ದೇಶ ಕಂಡ ಸಮಾಜವಾಧಿ, ಹಿಂದುಳಿದ ವರ್ಗಗಳ ಹರಿಕಾರ ಕರುನಾಡಿನ ಅರಸು ಡಿ ದೇವರಾಜ್ ಅರಸು ಅವರ 109ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀ ರವಿಕುಮಾರ್ ಹೆಚ್ ಆರ್ ಡಿ ದೇವರಾಜ್ ಅರಸು ಮುಖ್ಯ ಮಂತ್ರಿಯಾಗಿ ಮಾಡಿದ ಸಾಧನೆಗಳನ್ನು ನೇರದಿದ್ದ ಭಕ್ತರಿಗೆ ವಿವರಿಸಿ ಸಿಹಿ ವಿತರಣೆ ಮಾಡಿ ಆಚರಣೆ‌ ಮಾಡಲಾಯಿತು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು