ಇದು ನಿಮ್ಮ ಸ್ವಾಭಿಮಾನದ ಬದುಕಿನ ಕಡೆಗೆ ಆಹ್ವಾನ.....ಉತ್ತಮ ಯೋಚನೆ ಸಾಮರ್ಥ್ಯ ನಿಮ್ಮಲ್ಲಿ ಉಂಟೇ...ನಿಮ್ಮ ಬದುಕೇ ಉಜ್ವಲ... ಇದು ಸತ್ಯ.

!! ಓಂ ಶ್ರೀ ನಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾ

ಮಾನ್ಯರೇ,
ಶ್ರೀ ಜೆ. ಪಿ ನಾರಾಯಣಸ್ವಾಮಿ ಪ್ರತಿಷ್ಠಾನವು ಬಳ್ಳಾರಿಯ ಆರ್ಯ ಈಡಿಗ ಗೌನ ಮಹಾಸಭೆಯ ಸಹಯೋಗದಲ್ಲಿ, ರಾಜ್ಯದಾದ್ಯಂತ ಇರುವ ಈಡಿಗ ಸಮುದಾಯದ  (ಈಡಿಗ, ಬಿಲ್ಲವ, ದೀವರು, ಹಳೇಪೈಕ ಸೇರಿದಂತೆ ಎಲ್ಲಾ 26 ಪಂಗಡಗಳಿಗೆ ಸೇರಿದ) ಪದವೀಧರ   ಯುವಕ,  ಯುವತಿಯರಿಗೆ  75 ದಿನಗಳ ಕೌಶಲ್ಯ ತರಬೇತಿ  ನೀಡಿ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಕೊಡಿಸುವ ಕಾರ್ಯಕ್ರಮವನ್ನು 2021ರ  ಸೆಪ್ಟೆಂಬರ್ ನಲ್ಲಿ  ಬಳ್ಳಾರಿಯಲ್ಲಿ ಆಯೋಜನೆ ಮಾಡಲು ನಿರ್ಧರಿಸಿದೆ.
60 ದಿನಗಳ ತರಬೇತಿ ಬಳ್ಳಾರಿಯಲ್ಲಿ  ಮತ್ತು ಕೊನೆಯ 15 ದಿನಗಳ ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ. 
ಒಂದು ನೂರು ಮಂದಿ ಯುವಕ ಯುವತಿಯರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕೊಡಿಸಲು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಜೆ ಪಿ ಸುಧಾಕರ್ ಅವರು ಇಚ್ಛಿಸಿದ್ದಾರೆ.

 ಆದ್ದರಿಂದ ಜೆಪಿಎನ್ ಪಿ ಯ ಪ್ರತಿಷ್ಠಿತ ಸಂಚಾಲಕರಾದ ನೀವು ನಿಮ್ಮ ಭಾಗದಿಂದ ಅರ್ಹ ಪದವೀಧರ ಯುವಕ ಯುವತಿಯರ ಸಮೀಕ್ಷೆ ನಡೆಸಿ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯ ಪ್ರಯೋಜನಗಳನ್ನು ವಿವರಿಸಿ. ನಿಮ್ಮ ಕಡೆಯಿಂದ ಎಷ್ಟು ಮಂದಿ ತರಬೇತಿ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಾ ಸಂಚಾಲಕರು ಆಗಸ್ಟ್ 25 ರ ವೇಳೆಗೆ ತಿಳಿಸಬೇಕಾಗಿ ಕೋರುತ್ತೇನೆ. 

 ಹೆಚ್ಚಿನ ಮಾಹಿತಿಗಾಗಿ ಕೌಶಲ್ಯ ತರಬೇತಿ ಸಮನ್ವಯಾಧಿಕಾರಿ ಪ್ರಸನ್ನ ನಾಯ್ಕ ಇವರನ್ನು ಸಂಪರ್ಕಿಸಿ (9035805347). 
ತರಬೇತಿಗೆ ಬರುವ ಅಭ್ಯರ್ಥಿ ಗಳು ತಮ್ಮ  Bio- data (CV) ಮಾಹಿತಿಯನ್ನು awakeyoungindia@gmail.com  ಇಮೇಲ್ ವಿಳಾಸಕ್ಕೆ  ಕಳುಹಿಸಬೇಕು. ತರಬೇತಿ ಪ್ರಾರಂಭವಾಗುವ ದಿನಾಂಕ  ಮತ್ತು ಸ್ಥಳದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು.   

ವಿಶೇಷ ಸೂಚನೆ: ಬೆಂಗಳೂರಿನಲ್ಲಿ  ಕೆಲಸ ಮಾಡಲು ಇಚ್ಛಿಸುವವರು ಮಾತ್ರ ಅರ್ಜಿ ಸಲ್ಲಿಸಬೇಕು ಮತ್ತು ತರಬೇತಿಗೆ ಬರುವ ಮೊದಲು ಕನಿಷ್ಠ  ಒಂದು ಡೋಸ್  ಕರೋನ  ಲಸಿಕೆಯನ್ನು  ಪಡೆದಿರತಕ್ಕದ್ದು.

- ಎಚ್. ಎಲ್. ಶಿವಾನಂದ
ಟ್ರಸ್ಟಿ, ಶ್ರೀ ಜೆಪಿಎನ್ ಪ್ರತಿಷ್ಠಾನ. 
(ಕೌಶಲ್ಯಾಭಿವೃದ್ಧಿ ತರಬೇತಿ ಉಸ್ತುವಾರಿ)

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು