ಜನವರಿ 26 ಗಣರಾಜ್ಯೋತ್ಸವ ದಿನ ಎಲ್ಲಾ ತಾಲೂಕುಗಳಲ್ಲಿ ಪರಮ ಗುರು ಶ್ರೀ ನಾರಾಯಣ ಗುರುದೇವರ ಸ್ತಬ್ಬ ಚಿತ್ರ ಮೆರವಣಿಗೆ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ಬಗ್ಗೆ ಸಮಾಲೋಚನೆ ಸಭೆ, ಜನಾರ್ಧನ ಪೂಜಾರಿ ಯವರ ಮಾರ್ಗದರ್ಶನ*

*ಜನವರಿ 26 ವಿವಿಧ ಕಾರ್ಯಕ್ರಮ ಗಳು*

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ  ನಿರಾಕಾರಣೆ ಬಗ್ಗೆ ಬಿಲ್ಲವ ಸಂಘಗಳು ಮತ್ತು  ಬ್ರಹ್ಮ ಶ್ರೀ ನಾರಾಯಣ ಗುರು ಸಂಘಗಳ ಪ್ರಮುಖರ ಸಭೆಯು ಜರಗಿತು.  ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಭಾಗವಹಿಸಿದರು ಹಾಗೂ ಒಕ್ಕೊರಲಿನಿಂದ ಗುರುದೇವರ ಸ್ತಬ್ಧ  ಚಿತ್ರ ನಿರಾಕರಣೆ ಯ ಬಗ್ಗೆ ಖಂಡಿಸಿದರು. ಜನಾರ್ಧನ ಪೂಜಾರಿಯವರ ಮಾರ್ಗದರ್ಶನ ದಂತೆ ಸಭೆಯಲ್ಲಿ ನಿರ್ಣಯ ಗಳನ್ನು ತೆಗೆದು ಕೊಳ್ಳಲು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಯಾರು ಕುಳಿತುಕೊಳ್ಳದೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವ ಚಿತ್ರ ಮಾತ್ರ ಇದ್ದು ಉಳಿದವರು ಸ್ವಯಂ ಸೇವಕರಂತೆ  ಎದುರು ಕುಳಿತು ತಮ್ಮ ಅನಿಸಿಕೆಗಳನ್ನು ಹೇಳಿದರು.
 
*ನಿರ್ಣಯಗಳು*
 ಹಳದಿ ವಸ್ತ್ರ ಧಾರಣೆ ಮಾಡಿ ಪ್ರತಿ ಶ್ರೀ ನಾರಾಯಣ ಗುರು ಸಂಘದಲ್ಲಿ   ಗುರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಮಾಡಿ ಗುರು ಚಿಂತನೆಗಳನ್ನು ಹೇಳುವುದು.

ಪ್ರತಿ ತಾಲೂಕಿನಲ್ಲಿ ಹಳದಿ ವಸ್ತ್ರ ಧಾರಣೆ ಮಾಡಿ ಬ್ರಹ್ಮ ಶ್ರೀ ನಾರಾಯಣ ಗುರು ಟ್ಯಾಬ್ಲೋ ದಲ್ಲಿ ಗುರುದೇವರ ಸ್ತಬ್ಧ ಚಿತ್ರ ಮೆರವಣಿಗೆ.

   26 ನೇ  ತಾರೀಖಿಗೆ ಎಲ್ಲರೂ ತಮ್ಮ ಡಿಪಿ ಗಳಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸಂದೇಶ ಮತ್ತು ಚಿತ್ರವನ್ನುಹಾಕುವುದು. 

ಗುರುಭಕ್ತರು ಜನವರಿ 26 ರಂದು ತಮ್ಮ ವಾಹನಗಳಲ್ಲಿ ಗುರುದೇವರ ಹಳದಿ ಧ್ವಜ ಹಾಕುವುದು

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಗಳಿಂದ ಹೊರಡುವ ಗುರುದೇವರ ಟ್ಯಾಬ್ಲೋ   ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರಕ್ಕೆ   ಸಂಜೆ 6 ಘಂಟೆಗೆ ಬಂದು ಸೇರುವುದು. ಶ್ರೀ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿಯವರು  ಗುರುಭಕ್ತರನ್ನು ಸ್ವಾಗತಿಸಿಲಿದ್ದಾರೆ. 

ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಗಳಿಂದ    ಕಟಪಾಡಿ ವಿಶ್ವನಾಥ  ಕ್ಷೇತ್ರಕ್ಕೆ ಟ್ಯಾಬ್ಲೋ ಗಳ ಮೂಲಕ ಬಂದು ಸೇರುವುದು.

ಬಿಲ್ಲವ ಸಂಘ ಮತ್ತು ಶ್ರೀ ನಾರಾಯಣ ಗುರುಸಂಘಗಳ ಪ್ರಮುಖರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದರು.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು