ಶ್ರೀ ಕ್ಷೇತ್ರ ಸಿಗಂದೂರು ಕ್ಷೇತ್ರದಲ್ಲಿ ಭಗವಾನ್ ಶ್ರೀ ನಾರಾಯಣ ಗುರುದೇವನಿಗೆ ಮಹತ್ವದ ಮಹಾಗೌರವ ಭಕ್ತಿಯ ಮಹಾಗುರುಪೂಜೆ....ಅದ್ಬುತ...ನಮ್ಮ ಗುರು ಪರಮ ಸುಂದರ...ಪರಮೇಶ್ವರ... ಜಗದೀಶ್ವರ... ಮಹೇಶ್ವರ....!!!!!

ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಗುರುಪೂಜೆ

ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೇರವೇರಿಸಿಕೊಟ್ಟ ಪರಮಪೂಜ್ಯ ಬ್ರಹ್ಮ ಶ್ರೀ ನಾರಾಯಣ ಗುರುಗಳ ಗುರುಪೂಜೆಯು ದಿನಾಂಕ 16:01:2022 ರ ಸಂಜೆ 4:30ರಿಂದ ಶ್ರೀ ಕ್ಷೇತ್ರದ ದೇವಾಲಯದ ಶ್ರೀ ಸಿಗಂದೂರು ಚೌಡಮ್ಮ ದೇವಿಯ ಎದರುಭಾಗದ ಆವರಣದಲ್ಲಿ ನೇರವೇರಿತು.

ಭಕ್ತರ ಭಜನೆ,ಮಂತ್ರಪೂಜೆ,ಅಲಂಕಾರ ಪೂಜೆ,ವಿವಿಧ ಪುಷ್ಪಾಲಂಕಾರ ಪೂಜೆ,ಪ್ರಸಾದ ನೈವೇದ್ಯ, ಮಹಾಮಂಗಳಾರತಿ,ಜಯಘೋಷಾದೊಂದಿಗೆ
ವಿಜೃಂಭಣೆಯಿಂದ ದೇಶದ ಶಕ್ತಿ,ಸಂಘಟನೆ,ಧಾರ್ಮಿಕ, ದಾರ್ಶನಿಕ, ದೈವತ್ವದ ಗುರಯದೇವರ ಪಾದಾಪೂಜೆ ಶ್ರೀ ರವಿಕುಮಾರ್ ಹೆಚ್ ಆರ್ .ಪ್ರಧಾನ ಕಾರ್ಯದರ್ಶಿಗಳು. ಶ್ರೀ ಕ್ಷೇತ್ರ ಸಿಗಂದೂರು ಇವರ ಉಸ್ತುವಾರಿಯಲ್ಲಿ ಆರಾಧನಾ ಕಾರ್ಯ ನೇರವೇರಿತು.

ಗುರುದೇವರಿಗೆ ವಿಶೇಷ ವಾಗಿ ಈಡಿಗ ಸಮುದಾಯದ ಅರ್ಚಕರು ಮಂತ್ರ ಪಠಣ ಮಾಡಿ ಸ್ವಾಮಿಗೆ ಪಾದಾಪೂಜೆ ಮತ್ತು ಈ ಜಾತ್ರಾ ಮಹೋತ್ಸವದ ಸಂಪೂರ್ಣ ಹೋಮ ಹವನವನ್ನು‌ ನಡೆಸಿದ್ದು ಶ್ರೀ ಕ್ಷೇತ್ರದ ವಿಶೇಷ ವಾಗಿತ್ತು.


ದೇವಾಲಯದ ಗರ್ಭಗುಡಿಯ ಒಳ ಪ್ರವೇಶವನ್ನು ಪ್ರಪ್ರಥಮ ಬಾರಿಗೆ ತಮ್ಮ ಮನೆದೇವರಿಗೆ ತಾವೇ ಮಹಾಮಂಗಳಾರತಿಯನ್ನು ಮಾಡಿದ್ದು ಈ ಜಾತ್ರಾ ಮಹೋತ್ಸವದ ವಿಶೇಷ ವಾಗಿತ್ತು.ಈ ಕಾರ್ಯವನ್ನು ನೇರವೇರಲು ಮಾರ್ಗದರ್ಶನ ಮತ್ತು ಗುರು ಸಾನಿಧ್ಯವಹಿಸಿದ್ದು,
 ನಮ್ಮ ಸಮುದಾಯದ ಅತ್ಯಂತ ಹಿರಿಯ ಗುರುಗಳು ದಕ್ಷಿಣದ ಅಯೋದ್ಯೆ ಎಂದೇ ಕರೆಸಿಕೊಳ್ಳುವ
 ಕನ್ಯಾಡಿ ಕ್ಷೇತ್ರದ ಮಹಾಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿಗಳು. 
ಅವರು ಸಹಿತ ಗರ್ಭಗುಡಿ ಪ್ರವೇಶ ಮಾಡುವಂತೆ ಅನುಗ್ರಹಿಸಿ ತಾವು ಪ್ರವೇಶ ಮಾಡಿ 
ಶ್ರೀ ತಾಯಿಗೆ ಮಹಾ ಆರತಿ ಮಾಡಿದರು.ಎರಡೂ ದಿನಗಳ ಕಾಲ ಇದ್ದು, ಪರಮಪೂಜ್ಯ ಶ್ರೀ ಗಳ ಮಾರ್ಗದರ್ಶನ ದೊಂದಿಗೆ ಜಾತ್ರಾ ಕಾರ್ಯ ನೇರವೇರಿತು.


ಎರಡು ದಿನದ ಜಾತ್ರೆ ನಾರಾಯಣ ಗುರುಗಳ ಆದರ್ಶ ಪಾಲಿಸುತ್ತಾ,ಕನ್ಯಾಡಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನೇರವೇರಿತು.ಈ ಹಿಂದೆ ಗರ್ಭಗುಡಿಯ ಒಳಗೆ ಪೂಜ್ಯರಿಗೆ ವೈದಿಕ ಸಂಪ್ರದಾಯ ವಾದಿಗಳು ಒಳ ಪ್ರವೇಶ ನೀಡದಿರುವುದು. ಗುರುವಿನ ಕರುಣದಯದಲ್ಲಿ ನೇರವೇರಿದ್ಧು, ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಇರುವ ದೈವಿಕ ಶಕ್ತಿಗೆ ಒಂದು ಶ್ರೇಷ್ಠ ಉದಾಹರಣೆ ಯಾಗಿದೆ. ಐತಿಹಾಸಿಕ ದಾಖಲೆಯನ್ನು ಈ ಬಾರಿಯ ಸಿಗಂದೂರು ಜಾತ್ರೆ ಬರೆದಿದೆ ಎಂಬುದ್ರಲ್ಲಿ ಬೇರೆ ಮಾತೆ ಇಲ್ಲ ವೆಂಬುದು ಭಕ್ತರ ಅಭಿಪ್ರಾಯವಾಗಿದೆ.ಭಕ್ತಿಗೆ ಶಕ್ತಿ ತುಂಬಿದ ಗುರುದೇವರಿಗೆ ವಿಶೇಷ ಪೂಜೆಯನ್ನು ಸಿಗಂದೂರು ಕ್ಷೇತ್ರದಿಂದ ಅರ್ಪಣೆಯಾಯಿತು.

ಜೈ ಸಿಗಂದೂರು ಸಿರಿದೇವಿ
ಜೈ ಗುರುದೇವ
ಶ್ರೀ ಸಿಗಂದೂರು ಭಕ್ತ ವೃಂದ

See this post by SHREE NARAYANA GURUDEVA PRATHISTANA on Google: https://posts.gle/yLy2K1

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು