ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ. ಭಜನಾ ತರಭೇತಿ- ಸಮಾರೋಪ ಸಮಾರಂಭ. ಅತಿಥಿಗಳಿಂದ ಜ್ಯೋತಿ ಪ್ರಜ್ವಲನ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

*ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ,ಕೊಲ್ಯ ಸೋಮೇಶ್ವರ.*
*ಮತ್ತು*
*ಯುವವಾಹಿನಿ (ರಿ.)ಕೊಲ್ಯ ಘಟಕದ*
*ಆಶ್ರಯದಲ್ಲಿ*
*ಕನ್ನಡ ಮತ್ತು ಸಂಸೃತಿ ಇಲಾಖೆ,ಮಂಗಳೂರು*
*ಇದರ* *ಸಹಯೋಗದೊಂದಿಗೆ*

*ಸಾಮಾನ್ಯ ಯೋಜನೆ ಗುರುಶಿಷ್ಯ ಪರಂಪರೆ ಯೋಜನೆಯಡಿ* ಪ್ರಾರಂಭಗೊಂಡ *ಕುಣಿತ ಭಜನಾ ತರಬೇತಿಯ* *""ಸಮಾರೋಪ ಸಮಾರಂಭ""* ವನ್ನು
*ತಾರೀಕು 05-04-2022* *ಮಂಗಳವಾರ* *ಸಾಯಂಕಾಲ 7:00ಕ್ಕೆ ಸರಿಯಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.*
*ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮವನ್ನು ಶ್ರೀ ರಾಜೇಶ್.ಜಿ.(ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು)* *ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.*
*ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಬಾಬು ಪೂಜಾರಿ ಪುತ್ತೂರು ಇವರು ಆಗಮಿಸಿ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಕೊಲ್ಯ ಘಟಕದ ಆಶ್ರಯದಲ್ಲಿ ಜರಗುತ್ತಿರುವ ನಾರಾಯಣ ಗುರುಗಳ ತತ್ವಾದರ್ಶದ ನೆಲೆಯಲ್ಲಿ  ಈ ಊರಿನ ಎಲ್ಲಾ ಸಮಾಜದ ಬಂಧುಗಳಿಗಾಗಿ ನೆರವೇರುವ ಧರ್ಮ ಶಿಕ್ಷಣ, ಭಜನೆ ಹಾಗೂ ಕುಣಿತ ಭಜನಾ ತರಗತಿಯು ಬಹಳ ಅರ್ಥಪೂರ್ಣವಾಗಿ ನಡೆದುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.*
*ಇನ್ನೋರ್ವ ಅತಿಥಿ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರ ಹಾಗೂ ಶ್ರೀ ಗುರು ಕುಣಿತ ಭಜನಾ ತಂಡದ ಗುರುಗಳಾದ ಡಾ. ಅರುಣ್ ಉಳ್ಳಾಲ್ ಇವರು ಮಾತನಾಡಿ ನಮ್ಮ ತರಗತಿಯ ಉಗಮದ ಹೆಜ್ಜೆಯನ್ನು ನೆನಪಿಸಿದರು ಹಾಗೂ ನಿತ್ಯ ನಿರಂತರವಾಗಿ ನಡೆಯುತ್ತಿರುವ ಧರ್ಮ ಶಿಕ್ಷಣ ಹಾಗೂ ಭಜನೆ   ಮತ್ತು ಕುಣಿತ ಭಜನಾ ತರಗತಿಯು ಮಕ್ಕಳ ಹಾಗೂ ಯುವ ಮನಸ್ಸುಗಳಲ್ಲಿ ಧಾರ್ಮಿಕತೆಯ ಮೌಲ್ಯ ಹಾಗೂ ಧರ್ಮ ಜಾಗೃತಿ ಮೂಡಲು ಸಹಕಾರಿಯಾಗುವುದು ಎಂದು ತಿಳಿಯಪಡಿಸಿದರು.*
*ಯುವವಾಹಿನಿ (ರಿ.)ಕೊಲ್ಯ ಘಟಕದ ಅಧ್ಯಕ್ಷರಾದ ಮೋಹನ್ ಮಾಡೂರು ಇವರು ಅಧ್ಯಕ್ಷೀಯ ಮಾತನ್ನಾಡಿ ಬಹಳ ಅಪರೂಪದ ಗುರುಶಿಷ್ಯ ಪರಂಪರೆ ಯೋಜನೆಯಡಿ ಈ ಯಶಸ್ವೀ ಕಾರ್ಯಕ್ರಮದ ಶಕ್ತಿ ಗಳಾದ ತರಗತಿಯ ಗುರುಗಳು ಡಾ.ಅರುಣ್ ಉಳ್ಳಾಲ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್.ಜಿ ಹಾಗೂ ಬಿಲ್ಲವ ಸಂಘದ ಗೌರವಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ  ಸಂಪೂರ್ಣ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.*
*ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.*
*ವೇದಿಕೆಯಲ್ಲಿ ಶ್ರೀ ರಮಾನಾಥ ಕೋಟೆಕಾರು(ಉಪಾಧ್ಯಕ್ಷರು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.)ಕೊಲ್ಯ ಸೋಮೇಶ್ವರ)*
*ಶ್ರೀ. ಗೋಪಾಲಕೃಷ್ಣ ಸೋಮೇಶ್ವರ (ಗೌರವಾಧ್ಯಕ್ಷರು ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.)ಕೊಲ್ಯ ಸೋಮೇಶ್ವರ)*
*ಶ್ರೀ ರಾಮ ಪರ್ಯತ್ತೂರು (ಅಧ್ಯಕ್ಷರು ಬಿಲ್ಲವ ಸೇವಾ ಸಮಾಜ(ರಿ.)ಕೊಲ್ಯ ಸೋಮೇಶ್ವರ*
*ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ರವಿ ಕೊಂಡಾಣ* 
*ಶ್ರೀಮತಿ ಕುಸುಮ ಭರತ್ ಕುಂಪಲ (ಅಧ್ಯಕ್ಷರು ನಾರಾಯಣ ಗುರು ಮಹಿಳಾ ಮಂಡಳಿ,ಕೊಲ್ಯ ಸೋಮೇಶ್ವರ) ಉಪಸ್ಥಿತರಿದ್ದರು.*
*ಶ್ರೀ ರಾಜೇಶ್ ಜಿ ಇವರಿಗೆ ಗೋಪಾಲಕೃಷ್ಣ ಸೋಮೇಶ್ವರ ಸ್ಮರಣಿಕೆ ನೀಡಿ ಗೌರವಿಸಿದರು*
*ಶ್ರೀ ಬಾಬು ಪೂಜಾರಿ ಪುತ್ತೂರು ಇವರಿಗೆ ರಮಾನಾಥ್ ಕೋಟೇಕಾರ್ ಇವರು ಸ್ಮರಣಿಕೆ ನೀಡಿ ಗೌರವಿಸಿದರು*
*ಗುರುಗಳಾದ ಡಾ.ಅರುಣ್ ಉಳ್ಳಾಲ್ ಇವರಿಗೆ ರಾಮ ಪರ್ಯತ್ತೂರು ಸ್ಮರಣಿಕೆ ನೀಡಿ ಗೌರವಿಸಿದರು.*
*ಧರ್ಮ ಶಿಕ್ಷಣದ ವಿದ್ಯಾರ್ಥಿಗಳು ಪ್ರಾರ್ಥಿಸಿದರು* 
*ಯುವವಾಹಿನಿ (ರಿ.) ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಶ್ರೀ ಮತಿ ಅರ್ಚನಾ.ಎಂ.ಬಂಗೇರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿದರು.ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಭಜನಾ ಸಂಚಾಲಕರಾದ ಜಗಜೀವನ್ ಕೊಲ್ಯ ಇವರು ವಂದಿಸಿದರು.ಕೊಲ್ಯ ಘಟಕದ ವ್ಯಕ್ತಿತ್ವ ವಿಕಸನದ ನಿರ್ದೇಶಕರಾದ ಜೀವನ್ ಕೊಲ್ಯ ಇವರು ಕಾರ್ಯಕ್ರಮ ನಿರೂಪಿಸಿದರು.*
*ಬಳಿಕ ಗುರು ಮಂದಿರದಲ್ಲಿ ಗುರು ಶಿಷ್ಯ ಪರಂಪರೆಯ ಯೋಜನೆಯಡಿಯಲ್ಲಿ ಗುರುಗಳಾದ ಡಾ.ಅರುಣ್ ಉಳ್ಳಾಲ್ ಇವರ ಮಾರ್ಗದರ್ಶನ ಹಾಗೂ ದಕ್ಷ ನಿರ್ದೇಶನದಲ್ಲಿ ರೂಪುಗೊಂಡ ನೂತನ ತಂಡ ಶ್ರೀ ಗುರು ಕುಣಿತ ಭಜನಾ ತಂಡದ ವಿದ್ಯಾರ್ಥಿಗಳಿಂದ  ಕುಣಿತ ಭಜನೆಯ ಸೇವೆಯು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಸಮರ್ಪಿತವಾಯಿತು.*

*✍️ಜಗಜೀವನ್ ಕೊಲ್ಯ*
*ಭಜನಾ ತರಗತಿಯ ಸಂಚಾಲಕರು*
* ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ,ಕೊಲ್ಯ.*


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು