ಶೇಂದಿ ಇಳಿಸುವ ಬಗ್ಗೆ ಶ್ರೀ ನಾರಾಯಣ ಗುರುಗಳು ಭಕ್ತರಿಗೆ ಏನು ಹೇಳಿದ್ದಾರೆ....!? ನಿಜವಾದ ಮಹಾಗುರು ಸತ್ಯವನ್ನು ತಿಳಿಸುತ್ತಾರೆ ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇವರು....

ಶ್ರೀ ನಾರಾಯಣ ಗುರುಗಳ ಧರ್ಮದ ವಚನ....
ಇದು ಮಹಾಗುರುವಿನ ಸತ್ಯದ ವಚನ....ಗುರುಗಳೇ ಅಂದು ಹೇಳಿದ ನುಡಿ...ಒಬ್ಬ ಭಕ್ತನಿಗೆ. ಇದೇ ಗುರುಗಳ ಉತ್ತರ....
ಶೇಂದಿ ಇಳಿಸುವುದು ಒಂದು ಮಹಾವ್ಯಾಧಿ...
ಒಂದು ಅಂಗದಲ್ಲಿ ಕುಷ್ಠರೋಗ ಹಿಡಿದರೆ ಆ ದೇಹವೆಲ್ಲ ಕೆಡುವುದು. ಅದರಂತೆ ಕೆಲವರು ಶೇಂದಿ ಇಳಿಸುವುದರಿಂದ ಸಮಾಜವೇ ಕೆಡುತ್ತಿದೆ.ರೋಗದ ಅಂಗ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಂತೆ ಹೆಂಡ ಇಳಿಸುವವರನ್ನು ಸಮಾಜದಿಂದ ಬೇರ್ಪಡಿಸಬೇಕು.
ಅವರೊಂದಿಗೆ ಕೂಡಿಕೊಳ್ಳಬಾರದು.
ಅವರು ಹೆಂಡದ ವೃತ್ತಿ ತ್ಯಜಿಸಿದರೆ ಅವರನ್ನು ಶುದ್ಧೀಕರಿಸಿ ಸ್ವೀಕರಿಸಬಹುದು.ಇದು ಮಹಾಗುರುಗಳ ಮಾತು.
ಭಕ್ತ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾನೆ...ಗುರುಗಳಲ್ಲಿ.
ಭಕ್ತ: ಜೀವನಕ್ಕೆ ಬೇರೆ ಉಪಾಯವಿಲ್ಲದೆ ಆ ಕೆಲಸಕ್ಕೆ ಹೋಗುವವರು...!?
ಗುರುಗಳು ಹೇಳುತ್ತಾರೆ: ಮೂರ್ತೆ ಕತ್ತಿಯಿಂದ ನಾಲ್ಕು ಕ್ಪೌರದ ಕತ್ತಿಗಳನ್ನು ತಯಾರಿಸಿಕೊಂಡು ಉದ್ಯೋಗ ಮಾಡಿ ಜೀವಿಸುವುದು ಹೆಂಡ ಇಳಿಸುವ ಕೆಲಸಕ್ಕಿಂತ ಅಭಿಮಾನಕರವೂ ಲಾಭಕರವೂ ಆಗಿದೆ.( ಇದನ್ನು ಕೇಳಿ ಮೌನವಾಗಿದ್ದ ಭಕ್ತನೊಡನೆ ಪುನ) ಹೆಂಡ ಇಳಿಸುವ ಕೆಲಸ ಒಂದು ಮಹಾ ಪಾತಕ. ಅದು ಮೀನು ಹಿಡಿಯುವ ಕೆಲಸಕ್ಕಿಂತ ಪಾಪಕರ. ಕಳ್ಳು ತೆಗೆಯುವ ಬದಲು ಕಾಯಿ ತೆಗೆಯುವುದು ಮೇಲು, ಇದರಲ್ಲಿ ಕಷ್ಟ ಕಡಿಮೆ. ಆದರೆ ಕ್ರಮೇಣ ಗೊನೆಯನ್ನು ಬಿಟ್ಟು ಮೇಲೇರಿ ಬಿಟ್ಟಾನು, ಜೋಕೆ ....! ( ಗೊನೆ ಬಿಟ್ಟು ಕೊಂಬು ಕತ್ತರಿಸಿ ಬಿಟ್ಟಾನು") ಆಗ ಎಲ್ಲರೂ ನಕ್ಕರು.
*****
ಇದು ನಿಜವಾದ ಮಹಾಗುರುಧರ್ಮ ಸತ್ಯ.
ಆಧಾರ: ಬ್ರಹ್ಮ ಶ್ರೀ ನಾರಾಯಣ ಗುರು ಜೀವನ ಚರಿತ್ರೆ, ವಚನ ಪುಸ್ತಕದಿಂದ.ಪುಟ ಸಂಖ್ಯೆ:123 ಮತ್ತು 124.
  ಕೃಪೆ: ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು.
ಮಾಹಿತಿಗಾಗಿ: 9483024279(  ಸುರೇಶ್ ಪೂಜಾರಿ ಪಾಂಡವರಕಲ್ಲು) ಗುರುಸೇವಕ,ಆಧ್ಯಾತ್ಮ ಚಿಂತಕ,ಶಿಕ್ಷಕ


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು