ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ.......

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ಮಂಗಳೂರು ದಸರಾ ವೈಭವ ಮತ್ತಷ್ಟು ಹೆಚ್ಚಿಸೋಣ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ. ಇಲ್ಲಿ ಯಾವುದೇ ರೀತಿಯ ಕಾನೂನುಬಾಹಿರ, ಅಹಿತಕರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದೆ, ಇದೊಂದು ಧಾರ್ಮಿಕ, ಸಾಂಸ್ಕೃತಿಕ ಉತ್ಸವ ಎಂಬುದನ್ನು ಮನಗಂಡು, ಈ ಐತಿಹಾಸಿಕ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಮಂದಿ ಹಿರಿಯರು, ಕಿರಿಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ, ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಂಗಳೂರು ದಸರಾದ ವೈಭವವನ್ನು ಇನ್ನಷ್ಟು ಹೆಚ್ಚಿಸಿ, ಕ್ಷೇತ್ರದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಹಕರಿಸೋಣ. ಶಾಂತಿ, ಸೌಹಾರ್ದ ನೆಮ್ಮದಿಯ ಸಮಾಜಕ್ಕಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ...

ಪದ್ಮರಾಜ್ ಆರ್. 
ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!