ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ - ಭಕ್ತ ರಿಂದ ಕರಸೇವೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅ.15ರಿಂದ 25ರವರೆಗೆ ಜರುಗಲಿರುವ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಕರಸೇವಕ ತಂಡ, ಬೋಳಾರ ಮಾರಿಯಮ್ಮ ಕರಸೇವಾ ತಂಡ, ಶ್ರೀ ಗೋಕರ್ಣನಾಥ ಸೇವಾದಳದ ಸರ್ವ ಸದಸ್ಯರು, ಕ್ಷೇತ್ರದ ಭಕ್ತರ ವತಿಯಿಂದ ಅ.10ರಂದು ಶ್ರೀ ಕ್ಷೇತ್ರವನ್ನು ಸ್ವಚ್ಛಗೊಳಿಸಲಾಯಿತು. ಶುಚಿತ್ವ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಎಲ್ಲರಿಗೂ ಬ್ರಹ್ಮಶ್ರೀ ನಾರಾಯಣಗುರುಗಳು, ಶ್ರೀ ಗೋಕರ್ಣನಾಥ ಮತ್ತು ಪರಿವಾರ ದೇವರು ಸದಾ ಅನುಗ್ರಹ ಕರಣಿಸಲಿ....ಶುಭವಾಗಲಿ.




Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!