ಇತಿಹಾಸ ಪ್ರಸಿದ್ಧ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ - ಶ್ರೀ ಮಹಾಗುರು ಧ್ಯಾನ ತರಗತಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ


|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || 

ಭಟ್ಕಳ:  ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ 
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ
ಹಾಗೂ
ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ
 ಇದರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಶ್ರೀ ಮಹಾಗುರು ಧ್ಯಾನ ತರಗತಿಯನ್ನು ಕ್ಷೇತ್ರದ ಮೊಕ್ತೆಸರರಾದ ಶ್ರೀಯುತ ಸುಬ್ರಾಯ ನಾಯ್ಕ ಮತ್ತು ನಾಮಧಾರಿ ಗುರು ಮಠ ಸಂಘದ ಅಧ್ಯಕ್ಷರಾದ ಶ್ರೀಯುತ ಸುಬ್ರಾಯ ನಾಯ್ಕರವರು ಮಹಾಗುರುಗಳಿಗೆ ದೀಪ ಬೆಳಗಿಸಿ, ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಎಸ್ .ಕೆ. ಪಾಂಡವರಕಲ್ಲು ಇವರು ಶ್ರೀ ಗುರುಗಳ ಅನುಭವ ಸಂದೇಶಗಳನ್ನು, ಮಾನಸ ಪೂಜೆ, ಗುರುಧ್ಯಾನವನ್ಬು  ಗುರುಭಕ್ತರಿಗೆ ಹೇಳಿದರು.
 ಗುರುಗಳ ಸಂದೇಶಗಳನ್ನು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಕೇಳಿದರು.
ಈ ಸಂದರ್ಭದಲ್ಲಿ ನಾಮಧಾರಿ ಗುರು ಮಠದ ಗೌರವ ಅಧ್ಯಕ್ಷರಾದ ಶ್ರೀಯುತ ಕೃಷ್ಣ ನಾಯ್ಕ ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ಡಿ.ಎಲ್.‌ನಾಯ್ಕ,
ಕ್ಷೇತ್ರದ ಸದಸ್ಯರಾದ  ಕೆ ಇ.ಬಿ ಇಂಜಿನಿಯರ್ ಶ್ರೀಯುತ ಶಿವನಂದ ನಾಯ್ಕ, ಹಾಗೂ
ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮದ ಮುಖ್ಯ ಸಂಚಾಲಕರಾದ  ಶ್ರೀಯುತ ಕೃಷ್ಣ ಎಸ್  ನಾಯ್ಕ ಶಿರಾಲಿ, ಶ್ರೀಯುತ ಸತೀಶ್ ಕುಮಾರ್  ಭಟ್ಕಳ,  ಕಾರ್ಯಕ್ರಮದ ಆಯೋಜಕರಾದ  ಶ್ರೀಯುತ ಗಣಪತಿ.ಮತ್ತು ಶಿರಾಲಿ ದೇವಸ್ಥಾನದ ಮುಖ್ಯ ಆರ್ಚಕರಾದ ಶ್ರೀ ಯುತ ಲೋಹಿತ್ , ಶ್ರೀಯುತ ಮೋಹನ್ ಉಪಸ್ಥಿತಿ ಇದ್ದರು.ಕಾರ್ಯಕ್ರಮವು ಗುರು ಪೂಜೆ ಮಾಡುವ ಮೂಲಕ   ಪೂರ್ಣ ಗೊಂಡಿತು. ನಂತರ 
 ಗುರು ಭಕ್ತರು ಕ್ಷೇತ್ರದ ಪ್ರಧಾನ  ಆರ್ಚಕರಾದ ಲೋಹಿತ್ ಮತ್ತು ಶ್ರೀಯುತ ಗಣಪತಿ ನಾಯ್ಕರವರು ಉತ್ತಮವಾದ ಗುರುಗಳ ಅನುಭವಗಳನ್ನು ಹಂಚಿಕೊಂಡರು. 
ಎಲಾ ಭಕ್ತರಿಗೆ ಶ್ರೀ ಗುರು ಅಷ್ಟೋತ್ತರ ಶತನಾಮಾವಳೀ ನೀಡಲಾಯಿತು.
ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಲು ಅವಕಾಶ ನೀಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಮತ್ತು   ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ ಇದರ ಆಡಳಿತ ಮಂಡಳಿಗೂ ನಮ್ಮ ಆನಂತ ಆನಂತ ಧನ್ಯವಾದಗಳು.
ಸರ್ವರಿಗೂ ಶ್ರೀ ನಾರಾಯಣ ಗುರುಗಳ ಕೃಪೆ... ಅನುಗ್ರಹ ನಿರಂತರ ಇರಲಿ....ಸರ್ವರಿಗೂ ಶುಭವಾಗಲಿ.


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು