ಯಾರು ನಿಜವಾದ ಪರಮ ಮಹಾಗುರು ಭಕ್ತರು....?!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಯಾರು...!? ನಿಜವಾದ ಪರಮಾತ್ಮನ , ಸೃಷ್ಟಿಕರ್ತನ ಮಹಾಭಕ್ತರು - ಮಾನವ ಧರ್ಮವನ್ನು ಅರಿತವರು ಇವರು ಮಾತ್ರ....!!!
1. ಸರ್ವ ಮನುಕುಲವನ್ಬು ಪ್ರೀತಿಸುವವರು - ಯಾವುದೇ ಭೇದ ಭಾವ ಮಾಡದೇ ಇರುವವರು.
2. ಸರ್ವರ ಒಳಿತಿಗಾಗಿ ಪರಮಾತ್ಮನಲ್ಲಿ  ಪ್ರಾರ್ಥಿಸುವವರು.
3. ಸರ್ವರಲ್ಲಿ ನಿತ್ಯ ಅನುನ್ಯತೆಯಿಂದ,ಸೌಹಾರ್ದತೆಯಿಂದ,ಸಹೋದರತೆಯಿಂದ ಇರುವವರು.
4. ಸರ್ವರಲ್ಲಿ ಯಾವುದೇ ಜಾತಿ,ಮತ_ಧರ್ಮ, ಭಾಷೆ,ಲಿಂಗ ವರ್ಣ,ಮೇಲು ಕೀಳು, ಭೇದ ಭಾವ ಮಾಡದೇ ಇರುವವರು.
5.ಸಂಕಷ್ಟದಲ್ಲಿರುವವರಿಗೆ ಸಹಾಯ_ಸಹಕಾರ ಮಾಡುವವರು.
6. ಪರಮಾತ್ಮನ ಅನ್ನದಾನದಲ್ಲಿ ಪಂಕ್ತಿ ಭೇದ ಭಾವ ಮಾಡದೇ ಇರುವವರು.
7.ಲೋಕದ ಸರ್ವ ಜೀವ ಸಂಕುಲದ ಹಿತವನ್ನು ಬಯಸುವವರು.
8. ದ್ವೇಷ , ಸ್ವಾರ್ಥ ಅಹಂಕಾರದ ಯೋಜನೆ ಮಾಡದೇ ಇರುವವರು.
9.ಸರ್ವ ಉತ್ತಮ ಕಾರ್ಯವು ಪರಮಾತ್ಮನ ದಯೆ, ಸಂಕಲ್ಪದಂತೆ ನಡೆಯುತ್ತದೆ... ನಾನು ಇಲ್ಲಿ ನೆಪ ಮಾತ್ರ ಎಂದು ಹೇಳುವವರು.
ಇವರು ಮಾತ್ರ ನಿಜವಾದ ಪರಮಾತ್ಮನ, ಸೃಷ್ಟಿಕರ್ತನ ಮಹಾದೇವನ ಪರಮ ಮಹಾಭಕ್ತರಾಗಿರುತ್ತಾರೆ.
ಹಾಗೇಯೇ ಇವರ ಬದುಕು_ಜೀವನ ನಿತ್ಯ ಸುಖ...ಶಾಂತಿ... ನೆಮ್ಮದಿಯಿಂದ ಇರುವುದು...ನಿತ್ಯವೂ ಇದು ಸತ್ಯ.
-----------------------------------------------------------
ಇದುವೇ ಶ್ರೀ ನಾರಾಯಣ ಗುರು ಮಹಾಧರ್ಮ....
-----------------------------------------------------------
ಸದಾ ಸರ್ವ ಮಾನವ ಧರ್ಮದ ಪರಮ ಸೇವೆಯಲ್ಲಿ
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.