ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆ..........🙏💛🙏` *``ಮಂಗಳೂರು ದಸರಾ - 2022`* ``*ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ**ಯುವವಾಹಿನಿ (ರಿ) ಮಂಗಳೂರು ಘಟಕದ ಸಾರಥ್ಯದಲ್ಲಿ**ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆ*ಯುವವಾಹಿನಿ (ರಿ) ಕೇಂದ್ರ ಸಮಿತಿಯ ವಿವಿಧ ಘಟಕಗಳು, ಶ್ರೀ ನಾರಾಯಣ ಗುರುಸಂಘಗಳು, ಬಿಲ್ಲವ ಸಂಘಗಳು ಹಾಗೂ ಸಮಸ್ತ ಗುರುಭಕ್ತರ ಸಹಭಾಗಿತ್ವದಲ್ಲಿ ನಡೆಯಲಿರುವ *ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆ* ಅಕ್ಟೋಬರ್ 5ರಂದು ಹಳದಿ ವಸ್ತ್ರಧಾರಣೆ ಮಾಡಿ, ಗುರು ಭಕ್ತರು ಗುರು ನಾಮಸ್ಮರಣೆ ಯೊಂದಿಗೆ ಭಕ್ತಿಭಾವದಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಭಕ್ತಿ ಗೌರವದಿಂದ ವಿನಂತಿ ಮಾಡುತ್ತಿದ್ದೇವೆ.ಈ ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆಯಲ್ಲಿ ಶ್ರೀ ನಾರಾಯಣ ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.ವಂದನೆಗಳೊಂದಿಗೆ,ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ( ರಿ.) ಮಂಗಳೂರು.ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.ವಿ.ಸೂ; ಭಾಗವಹಿಸುವ ಗುರುಭಕ್ತರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ನೋಡಿ:📖⬇️⬇️⬇️http://bsngdp.blogspot.com/2022/09/5102022-mangalurumahadasara2022-shree.html

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
`
` *``ಮಂಗಳೂರು ದಸರಾ  - 2022`* ``
*ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ*
*ಯುವವಾಹಿನಿ (ರಿ) ಮಂಗಳೂರು ಘಟಕದ ಸಾರಥ್ಯದಲ್ಲಿ*

*ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆ*

ಯುವವಾಹಿನಿ (ರಿ) ಕೇಂದ್ರ ಸಮಿತಿಯ ವಿವಿಧ ಘಟಕಗಳು, ಶ್ರೀ ನಾರಾಯಣ ಗುರುಸಂಘಗಳು, ಬಿಲ್ಲವ ಸಂಘಗಳು  ಹಾಗೂ ಸಮಸ್ತ ಗುರುಭಕ್ತರ ಸಹಭಾಗಿತ್ವದಲ್ಲಿ ನಡೆಯಲಿರುವ *ಶಿವಗಿರಿ ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆ* ಅಕ್ಟೋಬರ್  5ರಂದು  ಹಳದಿ ವಸ್ತ್ರಧಾರಣೆ ಮಾಡಿ, ಗುರು ಭಕ್ತರು ಗುರು ನಾಮಸ್ಮರಣೆ ಯೊಂದಿಗೆ ಭಕ್ತಿಭಾವದಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮೆರವಣಿಗೆಯಲ್ಲಿ ಗುರು ಕೃಪೆಯೊಂದಿಗೆ ಭಾಗವಹಿಸಲಿದ್ದಾರೆ.

*ಶಿವಗಿರಿ ತೀರ್ಥಾಟನ ಯಾತ್ರೆಯ ಅರಿವಿನ ನಡಿಗೆಯ ಸಂಕ್ಷಿಪ್ತ ವಿವರ* 👇

ಬ್ರಹ್ಮಶ್ರೀ ನಾರಾಯಣ ಗುರುಗಳ ತಪೋ ಭೂಮಿ ಶಿವಗಿರಿಯ ತೀರ್ಥಾಟನೆಯು ಭಾರತದ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾಗಿದೆ. ಪ್ರತಿ ವರ್ಷ ತೀರ್ಥಯಾತ್ರೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 30ರಿಂದ ಜನವರಿ 1 ರವರೆಗೆ  ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಹಳದಿ ವಸ್ತ್ರಧಾರಣೆ ಮಾಡಿ ಗುರುದೇವರ ಜ್ಞಾನದ ಸಂಕೇತವಾದ ಹಳದಿ ಧ್ವಜದೊಂದಿಗೆ  ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಶಿವಗಿರಿಗೆ ಭೇಟಿ ನೀಡುತ್ತಾರೆ.
 ಬ್ರಹ್ಮಶ್ರೀ ನಾರಾಯಣ ಗುರುಗಳು, ಶಿವಗಿರಿ ತೀರ್ಥಕ್ಷೇತ್ರ ದರ್ಶನಕ್ಕೆ  ಬರುವ ಭಕ್ತರು ವಾಕ್, ಬುದ್ಧಿ, ಮನ, ಕ್ರಿಯೆ ಮತ್ತು ಶರೀರ ಶುದ್ಧಿ ಎನ್ನುವ ಪಂಚ ಶುದ್ಧಿ ಗಳನ್ನು  ಹೊಂದಿರಬೇಕೆಂಬ  ನಿಬಂಧನೆಗಳೊಂದಿಗೆ ಅಹಿಂಸೆ, ಸತ್ಯ, ದೈವಭಕ್ತಿ, ಬ್ರಹ್ಮಚರ್ಯ, ಮದ್ಯಪಾನ ತ್ಯಾಗವನ್ನು ಪಾಲಿಸಬೇಕೆಂದು ಸೂಚಿಸುವುದರೊಂದಿಗೆ ಶಿವಗಿರಿ ತೀರ್ಥಾಟನೆಗೆ ಅನುಮತಿಯನ್ನು ನೀಡಿದ್ದರು.

     ಶ್ರೀ ನಾರಾಯಣ ಗುರುಗಳ ಪ್ರಕಾರ, ತೀರ್ಥಯಾತ್ರೆಯ ಉದ್ದೇಶವು ಜನರಲ್ಲಿ ಸಮಗ್ರ ಜ್ಞಾನದ ಸೃಷ್ಟಿಯಾಗಬೇಕು. ಅವರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮೃದ್ಧಿಗೆ ತೀರ್ಥಾಟನೆ  ಸಹಾಯ ಮಾಡುತ್ತದೆ. ಆದ್ದರಿಂದ  ತೀರ್ಥಾಟನೆ  ಶಿಕ್ಷಣ, ಸ್ವಚ್ಛತೆ, ಧರ್ಮನಿಷ್ಠೆ(ಭಕ್ತಿ),
ಸಂಘಟನೆ, ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಎಂಟು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದರು.
ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ  ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮರವಣಿಗೆಯಲ್ಲಿ ಶಿವಗಿರಿ  ತೀರ್ಥಾಟನಾ ಯಾತ್ರೆಯ ಅರಿವಿನ ನಡಿಗೆಯನ್ನು ಯುವವಾಹಿನಿ (ರಿ) ಮಂಗಳೂರು ಘಟಕವು ಹಮ್ಮಿಕೊಂಡಿದೆ. ಸಮಸ್ತ ಗುರುಭಕ್ತರು ಈ ನಡಿಗೆಯನ್ನು ಸಾಕಾರಗೊಳಿಸಬೇಕಾಗಿ ವಿನಮ್ರ ವಿನಂತಿ.
🙏ಧನ್ಯವಾದಗಳು🙏
ಶ್ರೀ ರಾಮಚಂದ್ರ ಪೂಜಾರಿ  ದೇರಬೈಲ್ ಸಂಚಾಲಕರು - +919448104371
ಶ್ರೀ ಗಣೇಶ್ ವಿ. ಕೋಡಿಕಲ್, ಅಧ್ಯಕ್ಷರು - +918310326890
ಶ್ರೀ ಸಾಧುಪೂಜಾರಿ, ಸಲಹೆಗಾರರು - +918951649899
ಶ್ರೀ ರಾಜೇಂದ್ರ ಚಿಲಿಂಬಿ, ಸಹ ಸಂಚಾಲಕರು - +919972185251.
--------------------------------------------------------
ದೇವಿಕಾ ಸಾರೀಸ್ ಮತ್ತು ಡ್ರೆಸ್  ಇಲ್ಲಿ ಹಳದಿ ಬಣ್ಣದ ಸೀರೆ ಮಂಗಳೂರು ದಸರಾ ಮೆರವಣಿಗೆಯ ಶಿವಗಿರಿ ತೀರ್ಥಾಟನಾ ಅರಿವಿನ ನಡಿಗೆಗೆ  ರೂಪಾಯಿ 300 ಕ್ಕೆ ಸಿಗುತ್ತದೆ. ಬೇಕಾದವರು ಪಡೆದುಕೊಳ್ಳಬಹುದು. ಫೋನ್ 9448309307
---------------------------------------------------------------
ಶಿವಗಿರಿ ತೀರ್ಥಾಟನ ಯಾತ್ರೆಯ ಅರಿವಿನ ನಡಿಗೆಯಲ್ಲಿ ಪಾಲ್ಗೊಳ್ಳುವ ಬಂಧುಗಳು   ಹಳದಿ ಅಂಗಿ, ಹಳದಿ ಧೋತಿ ಅಥವಾ ಮುಂಡು, ಹಳದಿ ಶಾಲು ಧರಿಸುವುದು. ಮಹಿಳೆಯರು ಹಳದಿ ಸೀರೆ, ಹಳದಿ ರವಿಕೆ, ಹಳದಿ ಶಾಲು ಧರಿಸುವುದು. ಕ್ಯಾಪ್ ಅಥವಾ ಕೊಡೆ ಹಳದಿಯೇ ಇದ್ದರೆ ಉತ್ತಮ.
ಹಳದಿ ಉಡುಪು ಬೇಕಿದ್ದವರು ಸೆಂಟ್ರಲ್ ಟಾಕೀಸ್ ಬಳಿ ಇರುವ MP Silks ನಿಂದ ಖರೀಧಿಸಬಹುದು.

Contact 
MP DINESH 
MPEE SILKS 
MOB.9060502055 

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು