ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

*ಶ್ರೀ ಕ್ಷೇತ್ರ ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ದಿನಾಂಕ : 3-10-2024 ನೇ ಗುರುವಾರದಿಂದ 12-10-2024 ನೇ ಶನಿವಾರದ ವರೆಗೆ.*

ಸದ್ಭಕ್ತರೇ, ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂವತ್ಸರದ ಕನ್ಯಾ ಮಾಸ 17 ಸಲುವ ದಿನಾಂಕ : 03-10-2024 ನೇ ಗುರುವಾರ ಮೊದಲ್ಗೊಂಡು ದಿನಾಂಕ : 12-10-2024 ನೇ ಶನಿವಾರದ ವರೆಗೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು ಈ ನವರಾತ್ರಿ ಉತ್ಸವದಲ್ಲಿ *ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ ಹಾಗೂ ಅಕ್ಷರಭ್ಯಾಸ* ನಡೆಯಲಿರುವುದು. ಈ ಸೇವೆ ಮಾಡಲು ಇಚ್ಚಿಸುವವರು ಶ್ರೀ ಕ್ಷೇತ್ರದ ದೂರವಾಣಿ ಸಂಖ್ಯೆ: *9148894088* ತಿಳಿಸಿದ್ದಲ್ಲಿ ನೀವು ತಿಳಿಸಿದ ದಿನಾಂಕದಂದು ಪೂಜೆ ಮಾಡಿಸಿ ಪ್ರಸಾದ ನೀಡಲಾಗುವುದು. ಭಕ್ತಾಭಿಮಾನಿಗಳಾದ ತಾವು ತನು ಮನ ಧನಗಳಿಂದ ಸಹಕರಿಸಿ ಸರ್ವಶಕ್ತಿಗಳ ಪ್ರಸಾದ ಪಡೆದು ಸಾನಿಧ್ಯ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.

*ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ.* 💛

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.