Posts

ಗುರು ಸಂದೇಶ ಜಾಥಾ - ಪೂರ್ವಭಾವಿ ಸಭೆ

Image
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜರಗಲಿರುವ  *ಗುರು ಸಂದೇಶ ಜಾಥಾ* ವನ್ನು ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಶಿಸ್ತುಬದ್ದ ತಂಡವನ್ನು ನೇಮಕಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು *ದಿನಾಂಕ 04-08-2024 ಆದಿತ್ಯವಾರ  ಮಧ್ಯಾಹ್ನ 3:30pm ಗಂಟೆಗೆ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಸಭೆ ಕರೆಯಲಾಗಿದೆ.* ಗುರು ಸಂದೇಶ ಜಾಥಾ ವಾಟ್ಸಪ್ ಗ್ರೂಪ್ ಹಾಗೂ ತಮ್ಮ ಮಿತ್ರ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ವಿನಂತಿ. *ಪ್ರವೀಣ್ ಎಂ ಪೂಜಾರಿ*  *ಅಧ್ಯಕ್ಷರು* *ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)*

ಶ್ರೀ ಮಹಾಗುರು ಸೇವಾ ಬಳಗ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಮಹಾಗುರು ಸೇವಾ ಬಳಗ ಕರ್ನಾಟಕದಲ್ಲಿ --------------------------------------------------------- ಶ್ರೀ ಮಹಾಗುರು ಸೇವಾ ಬಳಗ ಮಂಗಳೂರು ಸಂಚಾಲಕರು:      ಸಹಸಂಚಾಲಕರು: 1. 2. 3. 4. 5. 6. 7. 8. ಶ್ರೀ ಮಹಾಗುರು ಸೇವಾ ಬಳಗ ಬಂಟ್ಟಾಳ ತಾಲ್ಲೂಕು ಸಂಚಾಲಕರು: ಸಹ ಸಂಚಾಲಕರು: ಗೌರವ ಸದಸ್ಯರು: 1. 2. 3. 4. 5. 6. 7. 8.

ಶ್ರೀ ಗುರು ಅಷ್ಟೋತ್ತರ ಶತನಾಮಾವಳೀ- ಪುಸ್ತಕ ಪ್ರಕಟಣೆಗೆ ಸೇವಾ ರೂಪದಲ್ಲಿ ದೇಣಿಗೆ ನೀಡಿದ ಸೇವಾಕರ್ತರು.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಪ್ರವೀಣ್ ಪೂಜಾರಿ ಉಡುಪಿ ಶ್ರೀ ಚಂದ್ರಮೋಹನ್ ಪೂಜಾರಿ, ಬ್ರಹ್ಮಾವರ ಶ್ರೀ ಲಿಂಗಪ್ಪ ಬಂಗೇರ ASI ಶಂಭೂರು ಶ್ರೀ ಪ್ರಕಾಶ್ ಸಿಗಂದೂರು ಶ್ರೀ ವಿವೇಕಾನಂದ ಪೂಜಾರಿ,ಬೆಂಗಳೂರು ಶ್ರೀ ರಾಜೇಶ್ ಸುವರ್ಣ  ಶ್ರೀ ವರದರಾಜ್ ಪೂಜಾರಿ ಕಟಪಾಡಿ ,ಉಡುಪಿ ಶ್ರೀ ವೇಣು ಗೋಪಾಲ್ ಬೆಂಗಳೂರು ಶ್ರೀ ಪ್ರಕಾಶ್ ಕೋಟ್ಯಾನ್ ಮುಂಬಯಿ ಶ್ರೀ ಪಿ.ಎನ್.ನಂಜುಂಡೇಶ್ವರ ಬೆಂಗಳೂರು ಶ್ರೀ ಆಶ್ವತ್ ಪೂಜಾರಿ ಸುರತ್ಕಲ್ ಶ್ರೀ ಉಮಾಶಂಕರ್ ಪ್ರಸಾದ್ ಆರ್ಟ್ ಶ್ರೀ ಗಣೇಶ್ ಪೂಜಾರಿ. ಎಮ್ ಶ್ರೀ ಕೆ. ಎನ್.ಪೂಜಾರಿ BSNL ಶಂಭೂರು,ಬಂಟ್ವಾಳ ಶ್ರೀ ಯೋಗೀಶ್ ಪೂಜಾರಿ  ಶ್ರೀ ಪ್ರವೀಣ್ ಪೂಜಾರಿ ಕೊಲ್ಯ ಶ್ರೀ ಸತ್ಯರಾಜ್  ಶ್ರೀ ದಿನಕರ ಪೂಜಾರಿ ಶ್ರೀ ಸತೀಶ್ ಕರ್ಕೇರ ಮೂಳೂರು,ಉಡುಪಿ

ಶ್ರೀ ಮಹಾಗುರು ನಿಧಿ - ಮಹಾಗುರು ಭಕ್ತರ ವಿವರಗಳು

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಮಹಾಗುರು ನಿಧಿಗೆ ಪ್ರತಿ ತಿಂಗಳು ರೂಪಾಯಿ 30/-ರಂತೆ ಸೇವಾ ದೇಣಿಗೆಯಾಗಿ ನೀಡುತ್ತಿರುವ ಮಹಾಗುರು ಭಕ್ತರ ವಿವರಗಳು. ನಿಮ್ಮ ಸೇವೆ ಅಮೂಲ್ಯ ನಿಮಗೆ ಸದಾ ಒಳಿತು ಆಗಲಿ...ಶುಭವಾಗಲಿ. 1.ಎಸ್.ಕೆ.ಪಾಂಡವರಕಲ್ಲು 2.ಪ್ರವೀಣ್ ಪೂಜಾರಿ ಉಡುಪಿ 3.

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ- ಶ್ರೀ ನಾರಾಯಣ ಗುರು ಜಯಂತಿ ಆಚರಣೆ

Image

ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿ

Image
ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿ ಸರಸಕವಿ ಮೂಲೂರು ಎಂದೇ ಪ್ರಸಿದ್ಧರಾಗಿರುವ ಮೂಲೂರು ಎಸ್ ಪದ್ಮನಾಭ ಪಣಿಕ್ಕರ್ (1869-1931) ಅವರ ಸಲಹೆಯಂತೆ ಟಿ.ಕೆ. ಕಿಟ್ಟನ್ ರೈಟರ್, ವಲ್ಲಭಶ್ಶೇರಿಯಿಲ್ ಗೋವಿಂದನ್ ವೈದ್ಯರ್ ಕೊಟ್ಟಾಯಂನ ನಾಗಂಬಡಂ ದೇವಾಲಯದಲ್ಲಿ ನಾರಾಯಣ ಗುರುಗಳನ್ನು ಭೇಟಿಯಾಗಿ ಶಿವಗಿರಿ ತೀರ್ಥಯಾತ್ರೆಯ ಪರಿಕಲ್ಪನೆಯನ್ನು ವಿವರಿಸಿ ಅದಕ್ಕೆ ಅನುಮತಿಯನ್ನು ಪಡೆದುಕೊಂಡರು. ಸರಸಕವಿ ಮೂಲೂರರ ಮಾರ್ಗದರ್ಶನದಲ್ಲಿ ತೀರ್ಥಯಾತ್ರೆಗೆ ಸಂಬಂಧಿಸಿದ ಒಂದು ಪ್ರಕಟಣೆಯನ್ನು ಸಿದ್ಧಪಡಿಸಿಕೊಂಡೇ ಕಿಟ್ಟನ್ ರೈಟರ್ ಮತ್ತು ಗೋವಿಂದನ್ ವೈದ್ಯರು ಗುರುಗಳನ್ನು ಬೇಟಿಯಾದರು. ಮೂಲೂರು ಅವರಿಗೆ ಆ ದಿನ ಮತ್ತೊಂದು ಕಾರ್ಯಕ್ರಮವಿದ್ದುದರಿಂದ ಗುರುಗಳನ್ನು ಭೇಟಿಯಾಗುವ ನಿಯೋಗದಲ್ಲಿ ಅವರು ಇರಲಿಲ್ಲ. ಈ ಭೇಟಿ 1928ರ ಜನವರಿ 19ರಂದು ನಡೆಯಿತು.  ಗುರುಗಳು ಶಿವಗಿರಿ ತೀರ್ಥಯಾತ್ರೆಯ ದಿನಾಂಕವನ್ನು ಯೂರೋಪಿಯನ್ ವರ್ಷಾರಂಭವೆಂದು ಸಲಹೆ ಮಾಡಿದ್ದರು. ಆದರೆ ಅದು ಈಗ ಡಿಸೆಂಬರ್ ತಿಂಗಳ ಕೊನೆಯಲ್ಲೇ ಆರಂಭವಾಗುತ್ತದೆ. ತೀರ್ಥಯಾತ್ರೆಯೊಂದು ದೈವಭಕ್ತಿಯಾಚೆಗೆ ಜನ ಕಲ್ಯಾಣದ ವಿಚಾರಗಳನ್ನು ಹೇಗೆ ಒಳಗೊಳ್ಳಬೇಕು ಎಂಬುದನ್ನು ಗುರುಗಳು ಅಂದೇ ಚಿಂತಿಸಿ ವಿವರಿಸಿದ್ದಾರೆ. ಆ ದಿನದ ಮಾತುಕತೆಯ ವಿವರಗಳನ್ನು ಗುರುಗಳ ಅನುಯಾಯಿಗಳು ದಾಖಲಿಸಿದ್ದಾರೆ. ಇಲ್ಲಿರುವ ಅನುವಾದಕ್ಕೆ ಪಿ ಸುಭದ್ರಾ ಅವರು ರಚಿಸಿರುವ ‘ಶ್ರೀ ನಾರಾಯಣಗುರು: ಮಹಾಪ್ರವಾಚಕನಾಯ ಮೈತ್ರೇಯನ್’...

15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ - ಬಿಲ್ಲವರು

Image
*15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ ಬಿಲ್ಲವರು*  ಕರ್ನಾಟಕ ಕರಾವಳಿಯ ಬಿಲ್ಲವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿ, ಮೇಲ್ಟಾತಿಯವರೆಂದು ಹೇಳಿಕೊಳ್ಳುವ ಹಿಂದೂಗಳು ಅಸಮಾನತೆಯ ಧೋರಣೆಯನ್ನು ಮಾಡುತ್ತಿದ್ದರು. ಬಿಲ್ಲವರು ಹಿಂದೂ ಧರ್ಮ ಮತ್ತು ದೇವತೆಗಳ ಬಗೆಗೆ ಅನನ್ಯ ಶ್ರದ್ಧೆಯುಳ್ಳವರಾಗಿ, ಮೇಲ್ಟಾತಿಯವರ ಮೋಸದ ಮಾತುಗಳನ್ನು ನಂಬಿ ನಡೆಯುತ್ತಿದ್ದರು. ಯಾವುದೇ ದೇವಸ್ಥಾನಗಳಲ್ಲಿ ಬಿಲ್ಲವರಿಗೆ ಪ್ರವೇಶವಿಲ್ಲದಿದ್ದರೂ ಕೂಡ ಅವರು ಆ ದೇವಸ್ಥಾನಗಳ ಹೊರ ಆವರಣದಲ್ಲಿ ನಿಂತು ಕಾಣದ ದೇವರಿಗೆ ಕೈ ಮುಗಿದು ಹರಕೆ-ಕಾಣಿಕೆಗಳನ್ನು ಕೊಂಡೊಯ್ದು ಸುರಿಯುತ್ತಿದ್ದರು. ಶತಮಾನಗಳ ಹಿಂದೆಯೇ ಕೆಲವು ಪ್ರಜ್ಞಾವಂತ ಬಿಲ್ಲವರು ಮೇಲ್ವಾತಿಯವರಿಂದ ತಮ್ಮವರಿಗೆ ಆಗುತ್ತಿರುವ ಮೋಸ, ವಂಚನೆ, ಶೋಷಣೆಗಳನ್ನು ಅರಿತು ನ್ಯಾಯಕ್ಕಾಗಿ ಹೋರಾಡುತ್ತಿದ್ದರು ಎನ್ನುವ ವಿಚಾರ ಕೋಟಿ-ಚೆನ್ನಯ, ಕಾಂತಬಾರೆ-ಬೂದಾಬಾರೆ, ಮಾಣಿಬಾಲೆ ಮುಂತಾದ ಪಾಡ್ಡನಗಳಲ್ಲಿ ಉಲ್ಲೇಖಗೊಂಡಿವೆ. ತಮ್ಮ ಜನಾಂಗದ ಹೀನ ಗತಿಯನ್ನು ಸಹಿಸಲಾರದ ಎಂ. ಅರಸಪ್ಪನವರು 1869 ರಲ್ಲಿ ಮಂಗಳೂರಿನಲ್ಲಿ ಬಿಲ್ಲವರ ಸಭೆಯನ್ನು ಕರೆದರು. ಸುಮಾರು 5000 ಬಿಲ್ಲವ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮೇಲ್ಮಾತಿಯ ಹಿಂದೂಗಳಿಂದ ಬಿಲ್ಲವರಿಗಾಗುವ ಅವಮಾನವನ್ನು ಅರಸಪ್ಪನವರು ವಿವರಿಸಿದರು. ತಮಗೆ ಸಮಾನ ಸ್ಥಾನವನ್ನು ಕೊಡದ ಹಿಂದೂಗಳಿಂದ ಪ್ರತ್ಯೇಕವ...