Posts

15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ - ಬಿಲ್ಲವರು

Image
*15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ ಬಿಲ್ಲವರು*  ಕರ್ನಾಟಕ ಕರಾವಳಿಯ ಬಿಲ್ಲವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿ, ಮೇಲ್ಟಾತಿಯವರೆಂದು ಹೇಳಿಕೊಳ್ಳುವ ಹಿಂದೂಗಳು ಅಸಮಾನತೆಯ ಧೋರಣೆಯನ್ನು ಮಾಡುತ್ತಿದ್ದರು. ಬಿಲ್ಲವರು ಹಿಂದೂ ಧರ್ಮ ಮತ್ತು ದೇವತೆಗಳ ಬಗೆಗೆ ಅನನ್ಯ ಶ್ರದ್ಧೆಯುಳ್ಳವರಾಗಿ, ಮೇಲ್ಟಾತಿಯವರ ಮೋಸದ ಮಾತುಗಳನ್ನು ನಂಬಿ ನಡೆಯುತ್ತಿದ್ದರು. ಯಾವುದೇ ದೇವಸ್ಥಾನಗಳಲ್ಲಿ ಬಿಲ್ಲವರಿಗೆ ಪ್ರವೇಶವಿಲ್ಲದಿದ್ದರೂ ಕೂಡ ಅವರು ಆ ದೇವಸ್ಥಾನಗಳ ಹೊರ ಆವರಣದಲ್ಲಿ ನಿಂತು ಕಾಣದ ದೇವರಿಗೆ ಕೈ ಮುಗಿದು ಹರಕೆ-ಕಾಣಿಕೆಗಳನ್ನು ಕೊಂಡೊಯ್ದು ಸುರಿಯುತ್ತಿದ್ದರು. ಶತಮಾನಗಳ ಹಿಂದೆಯೇ ಕೆಲವು ಪ್ರಜ್ಞಾವಂತ ಬಿಲ್ಲವರು ಮೇಲ್ವಾತಿಯವರಿಂದ ತಮ್ಮವರಿಗೆ ಆಗುತ್ತಿರುವ ಮೋಸ, ವಂಚನೆ, ಶೋಷಣೆಗಳನ್ನು ಅರಿತು ನ್ಯಾಯಕ್ಕಾಗಿ ಹೋರಾಡುತ್ತಿದ್ದರು ಎನ್ನುವ ವಿಚಾರ ಕೋಟಿ-ಚೆನ್ನಯ, ಕಾಂತಬಾರೆ-ಬೂದಾಬಾರೆ, ಮಾಣಿಬಾಲೆ ಮುಂತಾದ ಪಾಡ್ಡನಗಳಲ್ಲಿ ಉಲ್ಲೇಖಗೊಂಡಿವೆ. ತಮ್ಮ ಜನಾಂಗದ ಹೀನ ಗತಿಯನ್ನು ಸಹಿಸಲಾರದ ಎಂ. ಅರಸಪ್ಪನವರು 1869 ರಲ್ಲಿ ಮಂಗಳೂರಿನಲ್ಲಿ ಬಿಲ್ಲವರ ಸಭೆಯನ್ನು ಕರೆದರು. ಸುಮಾರು 5000 ಬಿಲ್ಲವ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮೇಲ್ಮಾತಿಯ ಹಿಂದೂಗಳಿಂದ ಬಿಲ್ಲವರಿಗಾಗುವ ಅವಮಾನವನ್ನು ಅರಸಪ್ಪನವರು ವಿವರಿಸಿದರು. ತಮಗೆ ಸಮಾನ ಸ್ಥಾನವನ್ನು ಕೊಡದ ಹಿಂದೂಗಳಿಂದ ಪ್ರತ್ಯೇಕವ...

ಸರ್ವ ಮನುಕುಲದ ವಿಶ್ವಶಕ್ತಿ ಭಗವಾನ್ ಶ್ರೀ ನಾರಾಯಣ ಗುರು

Image
ನಾರಾಯಣ ಗುರುಗಳಿಗೆ ಮಾಲಾರ್ಪಣೆಗೂ ಮುನ್ನ ಮೋದಿ ಉತ್ತರಿಸಬೇಕಿರುವುದು..! - ನವೀನ್ ಸೂರಿಂಜೆ ಎಪ್ರಿಲ್ 14 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಗಳೂರಿನಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ನಾರಾಯಣ ಗುರುಗಳ ಬಗೆಗಿನ ನರೇಂದ್ರ ಮೋದಿಯವರ ನಿಲುವನ್ನು ಸ್ಪಷ್ಟಪಡಿಸಬೇಕು. 2022 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಪ್ರಸ್ತಾಪವನ್ನು ಕಳಿಸಿತ್ತು. ಆದರೆ ಕೇಂದ್ರ ಸರ್ಕಾರವು ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಪೆರೇಡ್ ನಿಂದ ಹೊರ ಹಾಕಿತ್ತು‌.  "ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು" ಎಂಬುವುದು ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ತತ್ವವಾಗಿದೆ. ನಾರಾಯಣ ಗುರುಗಳು ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಈಳವ ಸಮುದಾಯದಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಮಾಜದ ಸುಧಾರಕರಾಗಿ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ನಾರಾಯಣ ಗುರುಗಳು ಮಂಗಳೂರಿಗೂ ಆಗಮಿಸಿ ಮಂಗಳೂರಿನಲ್ಲೂ ಅಸ್ಪೃಶ್ಯತೆಯ ವಿರುದ್ಧ ಕ್ರಾಂತಿ ಮಾಡಿದರು. ಕೇರಳದ ಈಳವರಂತೆ ಮಂಗಳೂರಿನ ಬಿಲ್ಲವ ಸಮುದಾಯ ಕೂಡಾ ನಾ...

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ- ನಡಾವಳಿ ಉತ್ಸವ ದಿನಾಂಕ 29-3-2024 ರಿಂದ 31-3-2024

Image
ಶ್ರೀ ನಾರಾಯಣ ಗುರು ವೈದಿಕ ಪರಂಪರೆ- ಕರ್ನಾಟಕದಲ್ಲಿ ಇರುವ ನಮ್ಮ ಪವಿತ್ರ ಕ್ಷೇತ್ರಗಳು

ಶ್ರೀ ಮಹಾಗುರು ವಿದ್ಯಾಪೀಠ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಮಹಾಗುರು ಶ್ರೀ ನಾರಾಯಣ ಗುರುಗಳ ವಿಶ್ವ ಸಂದೇಶ ಒಂದೇ ಜಾತಿ,ಒಂದೇ ಧರ್ಮ, ಒಂದೇ  ದೇವರು ಎಂಬ  ಮಹಾಗುರು ತತ್ವದಡಿಯಲ್ಲಿ ಒಂದು ಹೋಸ ಯೋಜನೆ- ಶಿಕ್ಷಣ, ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು... ಆ ಯೋಜನೆ....ಶ್ರೀ ಮಹಾಗುರು ವಿದ್ಯಾಪೀಠ.        - ಯೋಜನೆಗಳ ರೂಪುರೇಷೆಗಳು-                ಪಂಚತಂತ್ರ ಸೂತ್ರಗಳು 1. ಈ ವಿನೂತನ ಯೋಜನೆಗಳ ಒಟ್ಟು ಅವಧಿ 9 ವರುಷಗಳು, 7 ವರುಷಗಳು ನಿಧಿ ಸಂಗ್ರಹಕ್ಕೆ ಅವಧಿಯನ್ನು  ಪರಿಗಣಿಸಲಾಗಿದೆ. 2.ಆರ್ಥಿಕವಾಗಿ ಹಿಂದುಳಿದ ಎಲ್ಲಾ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ. 3. ಮೊದಲಿಗೆ ನರ್ಸರಿ,Lkg, Ukg ತರಗತಿಗಳನ್ನು ಪ್ರಾರಂಭಿಸಲಾಗುವುದು,ನಂತರ ಹಂತ ಹಂತವಾಗಿ ಉನ್ನತ ಶಿಕ್ಷಣದವರೆಗೆ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. 4. ಆಧುನಿಕ ಶಿಕ್ಷಣದ ಜೊತೆಗೆ ಶ್ರೀ ನಾರಾಯಣ ಗುರುಧರ್ಮದಂತೆ ಧಾರ್ಮಿಕ/ ಆಧ್ಯಾತ್ಮ ಶಿಕ್ಷಣವನ್ನು ಕೂಡ ನೀಡಲಾಗುತ್ತದೆ. 5.ಈ ವಿನೂತನ ವಿಶೇಷ ಯೋಜನೆಗಾಗಿ ಪ್ರತಿ ದಿನ ಕನಿಷ್ಠ ಒಂದು ರೂಪಾಯಿಗಳನ್ನು ಪ್ರತಿಯೊಬ್ಬ ಗುರುಭಕ್ತರು ತೆಗೆದಿಡುವುದು. ಅಥವಾ ದಿನ ಒಂದು ರೂಪಾಯಿಗಳನ್ನು  ಟ್ರಸ್ಟ್ ನ  UPI no; 9483024279@upi ಕಳುಹಿಸಿಕೊಡಬಹುದು.

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ- ಸಾಮಾಜಿಕ ಜಾಲತಾಣ.

Image
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು. ನಮ್ಮ ಆಧ್ಯಾತ್ಮ ಸಂಸ್ಥೆಯ ಪೂರ್ಣ ಮಾಹಿತಿಗಳನ್ನು ತಿಳಿಯಲು ನಮ್ಮ ಸಾಮಾಜಿಕ ತಂತ್ರಜ್ಞಾನದ ಕೆಲವು ಲಿಂಕ್ ಗಳು ಕ್ಲಿಕ್ ಮಾಡಿ ನೋಡಿರಿ.  1.  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - blog web page 2. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ- Facebook page 3.  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ‌ Google Page 4. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - youtube channel 5. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - Kutumb app

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ- ವರ್ಷಾವಧಿ ಜಾತ್ರೆ-ಮಹಾ ಶಿವರಾತ್ರಿ ಮಹೋತ್ಸವ

Image
       || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕ್ಪೇತ್ರದ website: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು

ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃದ್ಧಿ ಸ್ಪೀಕರ್ ಯು.ಟಿ ಖಾದರ್

Image
ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃಧ್ದಿ- ಸ್ಪೀಕರ್  ಯು.ಟಿ ಖಾದರ್ ವಿಡಿಯೋ ನೋಡಲು 👇👇👇  ಉಳ್ಳಾಲ ತಾಲ್ಲೂಕು ಬಿಲ್ಲವರ ಬೃಹತ್ ಸಮಾವೇಶ