Posts

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

Image
*ಶ್ರೀ ಕ್ಷೇತ್ರ ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ದಿನಾಂಕ : 3-10-2024 ನೇ ಗುರುವಾರದಿಂದ 12-10-2024 ನೇ ಶನಿವಾರದ ವರೆಗೆ.* ಸದ್ಭಕ್ತರೇ, ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂವತ್ಸರದ ಕನ್ಯಾ ಮಾಸ 17 ಸಲುವ ದಿನಾಂಕ : 03-10-2024 ನೇ ಗುರುವಾರ ಮೊದಲ್ಗೊಂಡು ದಿನಾಂಕ : 12-10-2024 ನೇ ಶನಿವಾರದ ವರೆಗೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು ಈ ನವರಾತ್ರಿ ಉತ್ಸವದಲ್ಲಿ *ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ ಹಾಗೂ ಅಕ್ಷರಭ್ಯಾಸ* ನಡೆಯಲಿರುವುದು. ಈ ಸೇವೆ ಮಾಡಲು ಇಚ್ಚಿಸುವವರು ಶ್ರೀ ಕ್ಷೇತ್ರದ ದೂರವಾಣಿ ಸಂಖ್ಯೆ: *9148894088* ತಿಳಿಸಿದ್ದಲ್ಲಿ ನೀವು ತಿಳಿಸಿದ ದಿನಾಂಕದಂದು ಪೂಜೆ ಮಾಡಿಸಿ ಪ್ರಸಾದ ನೀಡಲಾಗುವುದು. ಭಕ್ತಾಭಿಮಾನಿಗಳಾದ ತಾವು ತನು ಮನ ಧನಗಳಿಂದ ಸಹಕರಿಸಿ ಸರ್ವಶಕ್ತಿಗಳ ಪ್ರಸಾದ ಪಡೆದು ಸಾನಿಧ್ಯ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. *ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ.* 💛

ಸಿಗಂದೂರು ದಸರಾ ವೈಭವ- 2024

Image

ಮಂಗಳೂರು ದಸರಾ-2024 ನವರಾತ್ರಿ ಮಹೋತ್ಸವ2024ನೇ ಅಕ್ಟೋಬರ್ 3ರಿಂದ 14ರ ವರೆಗೆ ಮಂಗಳೂರು ಮಹಾದಸರಾ ಶೋಭಾಯಾತ್ರೆ-13-10-2024

Image

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ- ನವರಾತ್ರಿ ಉತ್ಸವ

Image

ಮಂಗಳೂರು ದಸರಾ-2024* ಸಮಾಲೋಚನಾ ಸಭೆ

Image
*ಮಂಗಳೂರು ದಸರಾ-2024* ಸಮಾಲೋಚನಾ ಸಭೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 14 ರವರೆಗೆ ನಡೆಯಲಿರುವ *ಮಂಗಳೂರು ದಸರಾ-2024* ಉತ್ಸವವವನ್ನು ಶ್ರದ್ಧಾಭಕ್ತಿಪೂರ್ವಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು *ಸೆ.15 ಭಾನುವಾರ* ದಂದು *ಸಂಜೆ 4:00* ಗಂಟೆಗೆ ಸರಿಯಾಗಿ, ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಕ್ಷೇತ್ರದ ಭಕ್ತರು, ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು, ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು *ಆಡಳಿತ ಮತ್ತು ಅಭಿವೃದ್ಧಿ ಸಮಿತಿ*,  *ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ*

ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ).,ಬಿಲ್ಲವ ಭವನ,ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು. ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮ ಆಚರಣೆ

Image
ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ)., ಬಿಲ್ಲವ ಭವನ,ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು. ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ರವರು. ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಆರ್. ರವಿಕುಮಾರ್ ರವರು. ಬಿಲ್ಲವ ಸಂಘದ ಅಧ್ಯಕ್ಷರಾದ ವೇದಕುಮಾರ್ ರವರು. ಈಡಿಗ ಮಹಿಳಾ ಸಂಘದ ರಾಜ್ಯಾಧ್ಯಕ್ಷರಾದ ನಳಿನಾಕ್ಷಿ ಸಣ್ಣಪ್ಪನವರು.ನಾಗರಾಜ್ ಕೈಸೊಡಿ.ಬೀರಪ್ಪ ಹೊಳೆಕೊಪ್ಪ.ಹುಚಪ್ಪ ಮರಸ. ಸೇರಿದಂತೆ ಇನ್ನು ಹಲವಾರು ಗಣ್ಯರು ಪಾಲ್ಗೊಂಡಿದ್ದರು

ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆ

Image
ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ ಸಭಾ ಕಾರ್ಯಕ್ರಮ ಆದಿತ್ಯವಾರ ಗುರು ಸಮುದಾಯ ಭವನ ದಲ್ಲಿ ಮಂದಿರದ ಅಧ್ಯಕ್ಷರಾದ ಪದ್ಮನಾಭ ಕಾರ್ನಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅತಿಥಿಗಳಾಗಿ ಸಿ ವೈ ರಾಮ್ ಮೋಹನ್ ಶ್ರೀ ರಮೇಶ್ ಬಿ ಡಾಕ್ಟರ್ ಉಮ್ಮಪ್ಪ ಪೂಜಾರಿ ನಗರಪಾಲಿಕೆಯ ಸದಸ್ಯರಾದ ಕಿರಣ್ ಕುಮಾರ್ ಹಾಗೂ ಮನೋಜ್ ಕುಮಾರ್ ಮಂದಿರದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೋಶಾಧಿಕಾರಿ ಸುಧಾಕರ್ ಕರ್ಕೇರ ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷರಾದ ರಮಣಿ ವೇದಿಕೆಯಲ್ಲಿ ಉಪಸಿತರಿದ್ದರು ಮಾಜಿ ಅಧ್ಯಕ್ಷರು ಪುರುಷೋತ್ತಮ್ ಪೂಜಾರಿ ಸಾಗತಿಸಿ ಪ್ರಧಾನ ಸಂಚಾಲಕರಾದ ಕೇಶವ ಸನಿಲ್ ಪ್ರಾಸ್ತಾವಿಕ ಗೈದರು ಮಂದಿರದ ಹಿರಿಯ ಸದಸ್ಯರಾದ ನಾರಾಯಣ್ ಟೈಲರ್ ಇವರನ್ನು ಸನ್ಮಾನಿಸಲಾಯಿತು. ಹಾಗೂ .ಎಸ್. ಎಲ್ .ಸಿ . ಹೆಚ್ಚು ಅಂಕ ಬಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಸೀತಾರಾಮ ಅಲಗುಡ್ಡ ಇವರು ಧನ್ಯವಾದಗಳು ಅರ್ಪಿಸಿದರು ಅರುಣ್ ಕುಮಾರ್ ಹಾಗೂ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು