Posts

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೂಲಕ ಜಗತ್ತಿಗೆ ಸಾರಿದೆ. ಗುರು ದೇವರಿಗೆ ಗುರುಪೂಜೆ ಇಂದು ಸೋಮವಾರ ಸಂಜೆ 7.30ಕ್ಕೆ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || *ಇಂದು ಸೋಮವಾರ ಸಂಜೆ 7.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರು ಪೂಜೆ* ಭಕ್ತಿಭಾವ ತುಂಬಿದ ಮಂಗಳೂರು ದಸರಾ ಮಹೋತ್ಸವ ಬಹಳ ಯಶಸ್ವಿಯಾಗಿ ನೆರವೇರಿದೆ.ಶ್ರೀ ಬಿ ಜನಾರ್ಧನ ಪೂಜಾರಿಯವರ ಆಶಯದಂತೆ ಜರಗುವ ಮಂಗಳೂರು ದಸರಾ ಜನತೆಯ ದಸರಾವಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದದಿಂದ ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂಬ  ಅರಿವಿನ ಮೂಲಕ ಸರ್ವ ಸಮಾನತೆಯ ತತ್ವ ಸಂದೇಶಗಳನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೂಲಕ ಜಗತ್ತಿಗೆ ಸಾರಿದೆ. ಗುರು ದೇವರಿಗೆ ಗುರುಪೂಜೆ ಇಂದು ಸೋಮವಾರ ಸಂಜೆ 7.30ಕ್ಕೆ ಶ್ರೀ ಕ್ಷೇತ್ರದಲ್ಲಿ ನೇರವೇರಲಿದ್ದು ಕ್ಷೇತ್ರದ ಭಕ್ತರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಗುರುಪೂಜೆ ಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ.

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ಮಂಗಳೂರು

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವು ಕರ್ನಾಟಕದ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ನಗರದ ಹೃದಯಭಾಗದಲ್ಲಿರುವ ದೇವಾಲಯವಾಗಿದೆ.  ಈ ದೇವಾಲಯವು 800 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಇದು 14 ಭಗವತಿ ದೇವಿಯನ್ನು ಮೂರು ವಿಭಿನ್ನ ಹೆಸರುಗಳಲ್ಲಿ ಪೂಜಿಸುವ ಏಕೈಕ ದೇವಾಲಯವಾಗಿದೆ: ಶ್ರೀ. ಚೀರುಂಭ ಭಗವತಿ (4 ರೂಪಗಳು), ಶ್ರೀ ಪಡಂಗರ ಭಗವತಿ (5 ರೂಪಗಳು), ಶ್ರೀ ಪುಲ್ಲುರಾಳಿ ಭಗವತಿ (5 ರೂಪಗಳು) ಆದ್ದರಿಂದ ಈ ದೇವಾಲಯವನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ನೆಲೆಗೊಂಡಿರುವ 18 ಭಗವತಿ ದೇವಾಲಯಗಳಲ್ಲಿ ಕೂಟ ಕಲಾ ಎಂದು ಕರೆಯಲಾಗುತ್ತದೆ. ವಿಶ್ವಪ್ರಸಿದ್ಧ ಶ್ರೀ ನಾರಾಯಣ ಗುರುವಿನ ಪ್ರತಿಮೆಯನ್ನು ಬಿಳಿ ಅಮೃತಶಿಲೆಯಲ್ಲಿ ಕೆತ್ತಲಾಗಿದೆ ಅದು ಪ್ರವೇಶದ್ವಾರದಲ್ಲಿದೆ.  ಇಲ್ಲಿ ಪ್ರತಿ ವರ್ಷ ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಗುತ್ತದೆ. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ಮಂಗಳೂರು ವರದಿ ಕೃಪೆ: @united_Tulunadu

ಐತಿಹಾಸಿಕ ವಿಶ್ವವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ನಾರಾಯಣಗುರು ಹಾಗೂ ಶಾರದಾ ದೇವಿಯ ದರ್ಶನ ಪಡೆದ ವಿಧಾನ ಪರಿಷತ್ತಿನ ಸದಸ್ಯರಾದ ಸನ್ಮಾನ್ಯ ಬಿ.ಕೆ.ಹರಿಪ್ರಸಾದ್ ರವರು

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || *ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ಪ್ರಯುಕ್ತ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ನಾರಾಯಣಗುರು ಹಾಗೂ ಶಾರದಾ ದೇವಿಯ ದರ್ಶನ ಪಡೆದ ವಿಧಾನ ಪರಿಷತ್ತಿನ ಸದಸ್ಯರಾದ ಸನ್ಮಾನ್ಯ ಬಿ.ಕೆ.ಹರಿಪ್ರಸಾದ್ ರವರು*

ನೀವು ಪ್ರತಿ ದಿನ ಶ್ರೀ ಗುರು ಮಂತ್ರ ಜಪಿಸಿರಿ ಮತ್ತು ಶ್ರೀ ಗುರು ಅಷ್ಟೋತ್ತರ ಶತನಾಮಾವಳೀಯನ್ನು ಪಠಣ ಮಾಡುವುದು

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ನಮ್ಮ ಮಕ್ಕಳಿಗಾಗಿ- ಜೊತೆಗೆ ನಮಗಾಗಿ ಮುಂದಿನ ಉಜ್ವಲ ಭವಿಷ್ಯಕ್ಕೆ......!!! ------------------------------ --- *ಪ್ರತಿ ನಿತ್ಯ- ಹೀಗೆ ಮಾಡಿರಿ* ------------------------------ --- 1. ಬೆಳಿಗ್ಗೆ ಎದ್ದ ತಕ್ಷಣ  ಭಗವಾನ್ ಶ್ರೀ ನಾರಾಯಣ ಗುರುವಿಗೆ ನಮಸ್ಕಾರ ಮಾಡುವುದು ಇದನ್ನು ಪ್ರತಿ ನಿತ್ಯ ಮಾಡಿರಿ. ------------------ 2.ಪ್ರತಿ ದಿನ ಮಹಾಗುರುಗಳ ಮಹಾಮಂತ್ರ || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಎಂಬ ಈ ಮಂತ್ರವನ್ನು ಜಪಿಸಿರಿ.( ಯಾವುದೇ ಸಮಯದಲ್ಲಿ). ------------------- 3. ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ  ಶ್ರೀ ಗುರು ಅಷ್ಟೋತ್ತರ ಶತನಾಮಾವಳೀ ಯನ್ನು ಹೇಳುವುದು.( ಒಬ್ಬರು ಅಥವಾ ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿಕೊಂಡು ಕೊಡಾ ಆಗಬಹುದು). ------------------ 4. ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆಯಲ್ಲಿ ಗುರುದೇವರ ಭಾವ ಚಿತ್ರ ಇರಬೇಕು ನಮ್ಮ ಗುರು ಶ್ರೀ ನಾರಾಯಣ ಗುರು. ನಮ್ಮ ಗುರುಪರಂಪರೆಯನ್ನು ಯಾವತ್ತೂ ಮರೆಯಬೇಡಿ *ಮಹಾಗುರು ಬಲ ಮೊದಲು* ನೆನಪಿರಲಿ. --------------------- 5. ಪ್ರತಿ ನಿತ್ಯ ಮನೆಯಿಂದ ಹೊರಡುವ ಮುಂಚೆ ನಮ್ಮ ಆರಾಧ್ಯ ಮಹಾಗುರು ಶ್ರೀ ನಾರಾಯಣ ಗುರುವಿಗೆ ನಮಸ್ಕರಿಸಿ ಹೋಗಿ..ಮತ್ತೆ ಮನೆಗೆ ವಾಪಸ್ಸು ಬರುವಾಗ ಗುರುದೇವರಿಗೆ ಧನ್ಯವಾದ ಹೇಳುವುದನ್ನು ಎಂದಿಗೂ ಮರೆಯಬೇಡಿ. ------------------- ಯಾರ...

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

Image
*ಶ್ರೀ ಕ್ಷೇತ್ರ ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ದಿನಾಂಕ : 3-10-2024 ನೇ ಗುರುವಾರದಿಂದ 12-10-2024 ನೇ ಶನಿವಾರದ ವರೆಗೆ.* ಸದ್ಭಕ್ತರೇ, ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂವತ್ಸರದ ಕನ್ಯಾ ಮಾಸ 17 ಸಲುವ ದಿನಾಂಕ : 03-10-2024 ನೇ ಗುರುವಾರ ಮೊದಲ್ಗೊಂಡು ದಿನಾಂಕ : 12-10-2024 ನೇ ಶನಿವಾರದ ವರೆಗೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು ಈ ನವರಾತ್ರಿ ಉತ್ಸವದಲ್ಲಿ *ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ ಹಾಗೂ ಅಕ್ಷರಭ್ಯಾಸ* ನಡೆಯಲಿರುವುದು. ಈ ಸೇವೆ ಮಾಡಲು ಇಚ್ಚಿಸುವವರು ಶ್ರೀ ಕ್ಷೇತ್ರದ ದೂರವಾಣಿ ಸಂಖ್ಯೆ: *9148894088* ತಿಳಿಸಿದ್ದಲ್ಲಿ ನೀವು ತಿಳಿಸಿದ ದಿನಾಂಕದಂದು ಪೂಜೆ ಮಾಡಿಸಿ ಪ್ರಸಾದ ನೀಡಲಾಗುವುದು. ಭಕ್ತಾಭಿಮಾನಿಗಳಾದ ತಾವು ತನು ಮನ ಧನಗಳಿಂದ ಸಹಕರಿಸಿ ಸರ್ವಶಕ್ತಿಗಳ ಪ್ರಸಾದ ಪಡೆದು ಸಾನಿಧ್ಯ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. *ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ.* 💛

ಸಿಗಂದೂರು ದಸರಾ ವೈಭವ- 2024

Image

ಮಂಗಳೂರು ದಸರಾ-2024 ನವರಾತ್ರಿ ಮಹೋತ್ಸವ2024ನೇ ಅಕ್ಟೋಬರ್ 3ರಿಂದ 14ರ ವರೆಗೆ ಮಂಗಳೂರು ಮಹಾದಸರಾ ಶೋಭಾಯಾತ್ರೆ-13-10-2024

Image