Posts

ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ. ಮಂಗಳೂರು ಲಕ ಸುದ್ದಿ: ಜಾತಿ ತಾರತಮ್ಯ ನೀತಿಗಳ ವಿರುದ್ಧದ ಹೋರಾಡಿದ ಕೇರಳದ ಮಹಾನ್‌ ಸಂತ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಆಯೋಜಿಸಿದ್ದ ಶಿವಗಿರಿ ಯಾತ್ರೆಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಸಮಾಜ ಸುಧಾರಕರಾದ ನಾರಾಯಣ ಗುರುಗಳು ಧರ್ಮವನ್ನು ಪರಿಷ್ಕರಿಸಿದರು. ಮತ್ತು ಕಾಲಕ್ಕೆ ತಕ್ಕಂತೆ ಬದಲಾಯಿಸಿದರು. ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ, ಜಗತ್ತಿನ ಯಾವುದೇ ಶಕ್ತಿಯು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುರುಗಳ ಸಂದೇಶಗಳು ‘ಆತ್ಮ ನಿರ್ಭರ ಭಾರತ’ದ ಕಡೆಗೆ ದಾರಿ ತೋರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಜನರಿಗೆ ಜ್ಞಾನದ ಮಾರ್ಗ ತೋರುತ್ತಿರುವ ಬ್ರಹ್ಮ ವಿದ್ಯಾಲಯವು ಇದೀಗ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳುತ್ತದೆ. ಈ ಪಯಣ...

ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ - ವಾರ್ಷಿಕ ಭಜನಾ ಮಂಗಲೋತ್ಸವ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ ವಾರ್ಷಿಕ ಭಜನಾ ಮಂಗಲೋತ್ಸವ ದಿನಾಂಕ 14-05-2022 ಶನಿವಾರ 15-05-2022 ಆದಿತ್ಯವಾರದ ವರೆಗೆ ಜರಗಲಿರುವುದು ಕಾರ್ಯಕ್ರಮಗಳ ವಿವರ ದಿನಾಂಕ : 14-05-2022ನೇ ಶನಿವಾರ ಸಂಜೆ ಗಂಟೆ 6-30ಕ್ಕೆ : ಕಲಶ ಪ್ರತಿಷ್ಠೆ ಸಂಜೆ ಗಂಟೆ 7-00ಕ್ಕೆ : ಭಜನಾ ಕಾರ್ಯಕ್ರಮ ಪ್ರಾರಂಭವಾಗಿ ಮರುದಿನ ಸುರ್ಯೋದಯಕ್ಕೆ ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ದಿನಾಂಕ : 15-05-2022ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಕಲ್ಪ ಪೂರ್ವಾಹ್ನ ಗಂಟೆ 11.35ಕ್ಕೆ : ಪ್ರಸಾದ ವಿತರಣೆ ಪೂರ್ವಾಹ್ನ ಗಂಟೆ 11.45ಕ್ಕೆ : ವಿದ್ಯಾರ್ಥಿ ವೇತನ ವಿತರಣೆ ಕೊಡುಗೆ : ಶ್ರೀ ಕಿರಣ್ ಪಾಂಡುರಂಗ ಅಂಚನ್ "ಕಮಲ ಕಿರಣ್" ಹೂಡೆ ಮದ್ಯಾಹ್ನ ಗಂಟೆ 12.30ಕ್ಕೆ : ಅನ್ನಸಂತರ್ಪಣೆ ಸರ್ವರಿಗೂ ಆದರದ ಸ್ವಾಗತ. 🙏🙏🙏 ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಮಹಿಳಾ ಘಟಕ

ಮಹಾಗುರುಧರ್ಮ ಪರಮ ಪವಿತ್ರ....

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಯಾರೇ ಆಗಲಿ...ಜಾತಿ,ಮತ,ಭಾಷೆ, ವರ್ಣ,ಲಿಂಗ ಭೇದ ಭಾವ ಮಾಡುವವರನ್ನು, ದ್ವೇಷಿಸುವವರನ್ನು ದೂರ ಇಡಿರಿ...ಅವರ ಗೆಳತನ ಮಾಡಬೇಡಿರಿ...ಯಾಕೆಂದರೆ ಅವರೆಂದೂ  ಪರಮ ನೆಮ್ಮದಿಯನ್ನು,ಪರಮ ದಯೆಯನ್ನು ಪಡೆಯಲು ಸಾಧ್ಯವಿಲ್ಲ...!!! ಅವರು ದಿನ ಒಂದಾಲ್ಲ ಒಂದು ರೀತಿಯ ಸಮಸ್ಯೆಯಲ್ಲಿ,ತೊಂದರೆಯಲ್ಲಿ ಇರುತ್ತಾರೆ ನಿತ್ಯ ಇದು ಸತ್ಯ. ಯಾರು ಸರ್ವ ಮಾನವ ಧರ್ಮದ ಒಳಿತನ್ನು ಬಯಸುವರು...ಅವರು ಸದಾ ಪರಮಾನಂದವನ್ನು ಪಡೆಯುತ್ತಾರೆ... ನಿತ್ಯವೂ... ಇದು ಪರಮ ಮಹಾಸತ್ಯ. ಇದುವೇ ನಿಜವಾದ ಮಹಾಗುರು ಶ್ರೀ ನಾರಾಯಣ ಗುರು  #ಮಹಾಗುರುಧರ್ಮ. ಶುಭವಾಗಲಿ ಸರ್ವ ಮನುಕುಲಕ್ಕೆ #ನನ್ನ_ಅನುಭವ_ದೇವರು  #ಶ್ರೀ_ನಾರಾಯಣ_ಗುರು

ಜಗತ್ತಿನಲ್ಲಿಯೇ ಸಾರ್ವಜನಿಕವಾಗಿ ಬಜೆಟ್ ಖರ್ಚು ವೆಚ್ಚಗಳನ್ನು ಮಂಡನೆ ಮಾಡುವ ಮಠವೊಂದು ಇದ್ದಾರೆ ಆದು ಶಿವಗಿರಿ ಮಠ ಮಾತ್ರ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಜಗತ್ತಿನಲ್ಲಿಯೇ ಸಾರ್ವಜನಿಕವಾಗಿ ಬಜೆಟ್ ಖರ್ಚು ವೆಚ್ಚಗಳನ್ನು ಮಂಡನೆ ಮಾಡುವ ಮಠವೊಂದು ಇದ್ದಾರೆ ಆದು ಶಿವಗಿರಿ ಮಠ ಮಾತ್ರ....!!!  ಗುರುಧರ್ಮ ಗುರುಸತ್ಯ ಅಷ್ಟು ಪವಿತ್ರ ಇದು ಸತ್ಯ. https://www.facebook.com/329646097783649/posts/1182667255814858/

ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ. ಭಜನಾ ತರಭೇತಿ- ಸಮಾರೋಪ ಸಮಾರಂಭ. ಅತಿಥಿಗಳಿಂದ ಜ್ಯೋತಿ ಪ್ರಜ್ವಲನ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ,ಕೊಲ್ಯ ಸೋಮೇಶ್ವರ.* *ಮತ್ತು* *ಯುವವಾಹಿನಿ (ರಿ.)ಕೊಲ್ಯ ಘಟಕದ* *ಆಶ್ರಯದಲ್ಲಿ* *ಕನ್ನಡ ಮತ್ತು ಸಂಸೃತಿ ಇಲಾಖೆ,ಮಂಗಳೂರು* *ಇದರ* *ಸಹಯೋಗದೊಂದಿಗೆ* *ಸಾಮಾನ್ಯ ಯೋಜನೆ ಗುರುಶಿಷ್ಯ ಪರಂಪರೆ ಯೋಜನೆಯಡಿ* ಪ್ರಾರಂಭಗೊಂಡ *ಕುಣಿತ ಭಜನಾ ತರಬೇತಿಯ* *""ಸಮಾರೋಪ ಸಮಾರಂಭ""* ವನ್ನು *ತಾರೀಕು 05-04-2022* *ಮಂಗಳವಾರ* *ಸಾಯಂಕಾಲ 7:00ಕ್ಕೆ ಸರಿಯಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.* *ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮವನ್ನು ಶ್ರೀ ರಾಜೇಶ್.ಜಿ.(ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು)* *ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.* *ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಬಾಬು ಪೂಜಾರಿ ಪುತ್ತೂರು ಇವರು ಆಗಮಿಸಿ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಕೊಲ್ಯ ಘಟಕದ ಆಶ್ರಯದಲ್ಲಿ ಜರಗುತ್ತಿರುವ ನಾರಾಯಣ ಗುರುಗಳ ತತ್ವಾದರ್ಶದ ನೆಲೆಯಲ್ಲಿ  ಈ ಊರಿನ ಎಲ್ಲಾ ಸಮಾಜದ ಬಂಧುಗಳಿಗಾಗಿ ನೆರವೇರುವ ಧರ್ಮ ಶಿಕ್ಷಣ, ಭಜನೆ ಹಾಗೂ ಕುಣಿತ ಭಜನಾ ತರಗತಿಯು ಬಹಳ ಅರ್ಥಪೂರ್ಣವಾಗಿ ನಡೆದುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.* *ಇನ್ನೋ...

ಯಾರು ನಿಜವಾದ ಪರಮ ಮಹಾಗುರು ಭಕ್ತರು....?!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಯಾರು...!? ನಿಜವಾದ ಪರಮಾತ್ಮನ , ಸೃಷ್ಟಿಕರ್ತನ ಮಹಾಭಕ್ತರು - ಮಾನವ ಧರ್ಮವನ್ನು ಅರಿತವರು ಇವರು ಮಾತ್ರ....!!! 1. ಸರ್ವ ಮನುಕುಲವನ್ಬು ಪ್ರೀತಿಸುವವರು - ಯಾವುದೇ ಭೇದ ಭಾವ ಮಾಡದೇ ಇರುವವರು. 2. ಸರ್ವರ ಒಳಿತಿಗಾಗಿ ಪರಮಾತ್ಮನಲ್ಲಿ  ಪ್ರಾರ್ಥಿಸುವವರು. 3. ಸರ್ವರಲ್ಲಿ ನಿತ್ಯ ಅನುನ್ಯತೆಯಿಂದ,ಸೌಹಾರ್ದತೆಯಿಂದ,ಸಹೋದರತೆಯಿಂದ ಇರುವವರು. 4. ಸರ್ವರಲ್ಲಿ ಯಾವುದೇ ಜಾತಿ,ಮತ_ಧರ್ಮ, ಭಾಷೆ,ಲಿಂಗ ವರ್ಣ,ಮೇಲು ಕೀಳು, ಭೇದ ಭಾವ ಮಾಡದೇ ಇರುವವರು. 5.ಸಂಕಷ್ಟದಲ್ಲಿರುವವರಿಗೆ ಸಹಾಯ_ಸಹಕಾರ ಮಾಡುವವರು. 6. ಪರಮಾತ್ಮನ ಅನ್ನದಾನದಲ್ಲಿ ಪಂಕ್ತಿ ಭೇದ ಭಾವ ಮಾಡದೇ ಇರುವವರು. 7.ಲೋಕದ ಸರ್ವ ಜೀವ ಸಂಕುಲದ ಹಿತವನ್ನು ಬಯಸುವವರು. 8. ದ್ವೇಷ , ಸ್ವಾರ್ಥ ಅಹಂಕಾರದ ಯೋಜನೆ ಮಾಡದೇ ಇರುವವರು. 9.ಸರ್ವ ಉತ್ತಮ ಕಾರ್ಯವು ಪರಮಾತ್ಮನ ದಯೆ, ಸಂಕಲ್ಪದಂತೆ ನಡೆಯುತ್ತದೆ... ನಾನು ಇಲ್ಲಿ ನೆಪ ಮಾತ್ರ ಎಂದು ಹೇಳುವವರು. ಇವರು ಮಾತ್ರ ನಿಜವಾದ ಪರಮಾತ್ಮನ, ಸೃಷ್ಟಿಕರ್ತನ ಮಹಾದೇವನ ಪರಮ ಮಹಾಭಕ್ತರಾಗಿರುತ್ತಾರೆ. ಹಾಗೇಯೇ ಇವರ ಬದುಕು_ಜೀವನ ನಿತ್ಯ ಸುಖ...ಶಾಂತಿ... ನೆಮ್ಮದಿಯಿಂದ ಇರುವುದು...ನಿತ್ಯವೂ ಇದು ಸತ್ಯ. ----------------------------------------------------------- ಇದುವೇ ಶ್ರೀ ನಾರಾಯಣ ಗುರು ಮಹಾಧರ್ಮ.... ---------------------------------------------------------...

ಮಹಾಗುರು ಧರ್ಮ ಶಿಕ್ಷಣ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಅತೀ ಶೀಘ್ರದಲ್ಲೇ ಪ್ರಾರಂಭವಾಗುವುದು. #ಮಹಾಗುರು_ಧರ್ಮ_ಶಿಕ್ಷಣ ಮಹಾಗುರು ಶ್ರೀ ನಾರಾಯಣ ಗುರು ಸಂಕಲ್ಪ.... ಪ್ರೇರಣೆಯಂತೆ. ಇಲ್ಲಿರುವುದು *ಧ್ಯಾನ  *ಗುರುಪ್ರಾರ್ಥನೆ * ಗುರು ಅಷ್ಟೋತ್ತರ ಶತನಾಮಾವಳಿ *  ಪ್ರವಚನ. ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.