Posts

ಶ್ರೀ ನಾರಾಯಣ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ”

Image
*ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ತನ್ನಿಮಿತ್ತ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ” ಎಂದು ಸಾರುವ ಪುಟ್ಟ ಘಟನೆ ಇಲ್ಲಿದೆ*… ಮಲಯಾಳಂ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖರಲ್ಲಿ ಕುಟ್ಟಿಪ್ಪುಳ ಕೃಷ್ಣಪಿಳ್ಳ (1900-1971) ಕೂಡಾ ಒಬ್ಬರು. ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಇವರು ಮತ ಧರ್ಮಗಳನ್ನು ವೈಚಾರಿಕತೆಯ ಒರೆಯಲ್ಲಿ ಪರೀಕ್ಷಿಸಿ ಮಂಡಿಸಿದ ಖ್ಯಾತಿಯುಳ್ಳವರು. ಅವರು 1922ರಲ್ಲಿ ಆಲುವಾ ಅದ್ವೈತಾಶ್ರಮದಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇರಿಕೊಂಡರು. ಈ ಕಾಲದ ಅನುಭವವೊಂದನ್ನು ಅವರು ದಾಖಲಿಸಿದ್ದಾರೆ. ಇದು ಶ್ಯಾಮ್ ಬಾಲಕೃಷ್ಣನ್ ಅವರು ಸಂಪಾದಿಸಿರುವ ‘ಮೌನಪೂನ್ತೇನ್’ ಕೃತಿಯಲ್ಲಿದೆ.  ಆಲುವಾ ಪಾಠಶಾಲೆಯ ವಿದ್ಯಾರ್ಥಿಗಳಿಗೆ   ಗುರುಗಳು ಪ್ರಾಯೋಜಿಸಿದ ಔತಣ ನೀಡುವ ರೂಢಿಯಿತ್ತು. ವಿವಿಧ ಜಾತಿ ಮತಗಳಿಗೆ ಸೇರಿದವರು ಒಟ್ಟಿಗೆ ಕುಳಿತು ಉಣ್ಣುವುದು ಈ ಔತಣಗಳ ಉದ್ದೇಶ. ಒಮ್ಮೆ ಈ ಔತಣಕ್ಕೆ ಆಶ್ರಮದ ಅಧಿಕಾರಿಗಳು ನನ್ನನ್ನೂ ಆಹ್ವಾನಿಸಿದರು. ಆ ಕಾಲದಲ್ಲಿ ನಾನಿದ್ದ ಸ್ಥಿತಿಯನ್ನು ಗಮನಿಸಿದ್ದ ಅವರಿಗೆ ಈ ಔತಣದ ಆಹ್ವಾನವನ್ನು ಒಪ್ಪಿಕೊಳ್ಳುತ್ತೇನೇಯೋ ಇಲ್ಲವೋ ಎಂಬ ಅನುಮಾನವಿತ್ತು. ವಿವಿಧ ಜಾತಿಗಳಿಗೆ ಸೇರಿದವರ ಸಹಪಂಕ್ತಿ ಭೋಜನ ಆಚಾರಗಳ ಉಲ್ಲಂಘನೆಯಲ್ಲೇ ಅತಿ ದೊಡ್ಡದೆಂದು ಸವರ್ಣ ಹಿಂದೂಗಳು ಭಾವಿಸಿದ್ದ ಕಾಲವದು. ಸಂಪ್ರದಾಯಸ್ಥ  ಕುಟುಂಬದಲ್ಲೇ ಹುಟ್ಟಿ ಅಲ್ಲಿಯ ತನಕ ಜಗತ್ತನ್ನೇ ನೋಡದ...

ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ170ನೇ ಜಯಂತಿ ಆಚರಣೆ -ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಇವರಿಗೆ ಉದ್ಘಾಟನೆ.

Image
ದಿನಾಂಕ: 20.8.2024, ಮಂಗಳವಾರ ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆ ಮೂಲಕ ಹೊರಟು 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.ಈ ಕಾರ್ಯಕ್ರಮವು ಸಂಜೆ 6.30 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಆಗಮಿಸಲಿದ್ದಾರೆ. ಮಹಿಳೆಯರೆಲ್ಲರೂ  ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.      

ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮೀಜಿಯವರ 170ನೇ ಜನ್ಮ ದಿನೋತಸ್ಸವ

Image

Dhyana

Image
*ಧ್ಯಾನ ಮಾಡುವುದರಿಂದ ಒಂದು ನೂರು ಲಾಭಗಳು* 1. ಧ್ಯಾನದಿಂದ *ಆತ್ಮ ಸಾನಿಧ್ಯ* ಹೆಚ್ಚುವುದು. 2. ಧ್ಯಾನದಿಂದ *ಜೀವನ ದೃಷ್ಟಿ* ಬದಲಾಗುವುದು. 3. ಧ್ಯಾನದಿಂದ *ಹೃದಯ* ಬಲಗೊಳ್ಳುವುದು.  4. ಧ್ಯಾನದಿಂದ *ಚೈತನ್ಯ* ಜಾಗೃತವಾಗುವುದು.  5. ಧ್ಯಾನದಿಂದ *ರೋಗ* ನಿರೋಧಕ ಶಕ್ತಿ ಹೆಚ್ಚುವುದು. 6. ಧ್ಯಾನದಿಂದ *ದೈಹಿಕ* ಬೇನೆಗಳು ದೂರವಾಗುವುದು. 7. ಧ್ಯಾನದಿಂದ *ಮೆದುಳಿಗೆ* ಉತ್ತೇಜನವಾಗುವುದು. 8. ಧ್ಯಾನದಿಂದ *ಮನಸ್ಸು* ಶಾಂತವಾಗುವುದು.  9. ಧ್ಯಾನದಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು.  10. ಧ್ಯಾನದಿಂದ *ಒತ್ತಡ* ಮಾಯವಾಗುವುದು.  11. ಧ್ಯಾನದಿಂದ *ಕೋಪ* ಕಡಿಮೆಗೊಳ್ಳುವುದು.  12. ಧ್ಯಾನದಿಂದ *ಆತ್ಮಸ್ಥೈರ್ಯ* ಹೆಚ್ಚುವುದು.  13. ಧ್ಯಾನದಿಂದ *ಸಮಸ್ಯೆಗಳು* ಇಲ್ಲವಾಗುವುದು. 14. ಧ್ಯಾನದಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗುವುದು. 15. ಧ್ಯಾನದಿಂದ *ಮನಃ ಶಾಂತಿ* ದೊರೆಯುವುದು.  16. ಧ್ಯಾನದಿಂದ *ತಾಳ್ಮೆ* ಉಂಟಾಗುವುದು. 17. ಧ್ಯಾನದಿಂದ *ಬಾಂಧವ್ಯ* ವೃದ್ಧಿಸುವುದು. 18. ಧ್ಯಾನದಿಂದ *ನಾಯಕತ್ವ* ಬೆಳೆಯುವುದು. 19. ಧ್ಯಾನದಿಂದ *ಉತ್ತಮ ನಿದ್ರೆ* ಬರುವುದು. 20. ಧ್ಯಾನದಿಂದ *ಸಂಸ್ಕಾರ* ಸಿಗುವುದು 21. ಧ್ಯಾನದಿಂದ *ಸಂತೋಷ* ಸಾಧ್ಯವಾಗುವುದು. 22. ಧ್ಯಾನದಿಂದ *ಕರ್ಮ* ಕಳೆಯುವುದು. 23. ಧ್ಯಾನದಿಂದ *ಪಾಪ* ಮರೆಯಾಗುವುದು. 24. ಧ್ಯಾನದಿಂದ *ಸಾಮರ್ಥ್ಯ* ...

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

Image
*ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು* ಗಾನಗಂಧರ್ವನೆಂಬ ಬಿರುದಿನ ಮೂಲಕವೇ ಪ್ರಸಿದ್ಧರಾಗಿರುವ ಕೆ.ಜೆ. ಯೇಸುದಾಸ್ ತಮ್ಮ ಸಿನಿಮಾ ಸಂಗೀತ ಪಯಣವನ್ನು ಆರಂಭಿಸಿದ್ದು ಈ ಕೆಳಗಿನ ಹಾಡಿನ ಮೂಲಕ… ।  ಜಾತಿ ಭೇದಂ ಮತದ್ವೇಷಂ ಏದುಮಿಲ್ಲಾದೆ ಸರ್ವರುಂ ಸೋದರತ್ವೇನ ವಾಳುನ್ನ ಮಾತೃಕಾ ಸ್ಥಾಪನಮಾಣಿದ್ “ಜಾತಿ ಭೇದ, ಮತ ದ್ವೇಷಗಳಿಲ್ಲದೆ  ಸರ್ವರೂ ಸೋದರರಂತೆ ಬಾಳುವ ಮಾದರಿ ಸಂಸ್ಥೆಯಿದು” ಎಂದು ಈ ಸಾಲುಗಳನ್ನು  ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಮೊದಲ  ಧಾರ್ಮಿಕ ಸಂಸ್ಥೆಯಾದ ಶೋಷಿತ ಅವಕಾಶ ವಂಚಿತ ಜನರಿಗೆ ಸ್ವಾಭಿಮಾನ ಆತ್ಮಗೌರವದ ಬಾಗಿಲು ತೆರೆದ ಕೇರಳದ ಅರುವಿಪ್ಪುರಂ ದೇಗುಲದ ಗೋಡೆಯಲ್ಲಿ ಗುರುಗಳು ಬರೆಸಿದ ವಾಕ್ಯಗಳು ಇವು. ಸುಮಾರು ಹತ್ತು ವರ್ಷಗಳ ಹಿಂದೆ ಗುರು ಸಮಾಧಿ ದಿನದಂದು ಕೆ. ಜೆ. ಯೇಸುದಾಸ್ ಗುರುದೇವರ ಬಗ್ಗೆ ಆಡಿದ ಮಾತುಗಳು ಈ ಕೆಳಗಿನಂತೆ ಇವೆ. ನನ್ನ ಬದುಕಿನ ಬಹುದೊಡ್ಡ ಹೆಜ್ಜೆಯನ್ನಿಟ್ಟದ್ದು ಶ್ರೀನಾರಾಯಣ ಗುರುದೇವರ ಈ ಮಹಾಕಾವ್ಯವನ್ನು ಹಾಡುವುದರ ಮೂಲಕವಾಗಿತ್ತು. ಇದು ನನ್ನ ಬದುಕಿನ ಬಹುದೊಡ್ಡ ಪುಣ್ಯಗಳಲ್ಲೊಂದೆಂದು ನಾನು ಭಾವಿಸಿದ್ದೇನೆ. ‘ಕಾಲ್ಪಾಡುಗಳ್’ ಎಂಬ ಸಿನಿಮಾಕ್ಕಾಗಿ ನಾನು ಮೊದಲು ಹಾಡಿದ, ಈಗಲೂ ಹಾಗೂ ಎಂದೆಂದೂ ಹಾಡುತ್ತಲೇ ಇರಬೇಕನ್ನಿಸುವ ನಾಲ್ಕು ಸಾಲುಗಳಿವು. ಇವು ನಾನು ಸಿನಿಮಾಕ್ಕಾಗಿ ಹಾಡಿದ ಮೊದಲ ಹಾಡಿನ ಸಾಲುಗಳೂ ಹೌದು. ಈ ನಾಲ್ಕು ಸಾಲುಗಳಲ್ಲಿ ಗುರುಗಳು ತೋರಿಸಿಕೊ...

ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘ (ರಿ.) - ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘ (ರಿ.) - ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ

*ಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಪತ್ರ ಬಿಡುಗಡೆ*

Image
      || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || *ಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಪತ್ರ ಬಿಡುಗಡೆ* ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ  ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜನ್ಮ ದಿನಾಚರಣೆಯ ಪ್ರಯುಕ್ತ  ದಿನಾಂಕ 25-08-2024ನೇ ಆದಿತ್ಯವಾರದಂದು ಜರಗಲಿರುವ ಗುರು ಸಂದೇಶ ಜಾಥಾದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬನ್ನಂಜೆ ಬಿಲ್ಲವ  ಸಂಘದಲ್ಲಿ ಜರಗಿತು. ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿಯವರು ಸ್ವಾಗತದೊಂದಿಗೆ ಜಾಥಾದ ರೂಪುರೇಷೆಗಳನ್ನು ಪ್ರಸ್ತಾವಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಜನಾರ್ಧನ್ ತೋನ್ಸೆ, ವೆಹಿಕಲ್ ಸರ್ವೇಯರ್ ನಂದ ಕಿಶೋರ್,ಉಪ್ಪೂರು ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ರಾಜು ಪೂಜಾರಿ, ಸಂತೆಕಟ್ಟೆ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಶೇಖರ್ ಗುಜ್ಜರ್‌ಬೆಟ್ಟು,ಯುವವಾಹಿನಿ ಉಡುಪಿ ಅಧ್ಯಕ್ಷರಾದ ಅಮಿತಾಂಜಲಿ ಕಿರಣ್,  ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯತೀಶ್ ಕುಮಾರ್, ಚಲನಚಿತ್ರ ನಟ ಸೂರ್ಯೋದಯ್ ಪೆರಂಪಳ್ಳಿ, ಯುವವಾಹಿನಿ ಕಟಪಾಡಿ ಘಟಕ ಅಧ್ಯಕ್ಷರಾದ ಪ್ರತಿಮಾ ವಿ ಪೂಜಾರಿ,ಪಕ್ಕಿಬೆಟ್ಟು ಗರೋಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ವಿಠ್ಠಲ ಪೂಜಾರಿ, ವೇದಿಕೆಯ ಗೌರವಾಧ್ಯಕ್ಷರು ದಿವಾಕರ್ ಸನಿ...