Posts

ಮಂಗಳೂರು ದಸರಾ-2024* ಸಮಾಲೋಚನಾ ಸಭೆ

Image
*ಮಂಗಳೂರು ದಸರಾ-2024* ಸಮಾಲೋಚನಾ ಸಭೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 14 ರವರೆಗೆ ನಡೆಯಲಿರುವ *ಮಂಗಳೂರು ದಸರಾ-2024* ಉತ್ಸವವವನ್ನು ಶ್ರದ್ಧಾಭಕ್ತಿಪೂರ್ವಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು *ಸೆ.15 ಭಾನುವಾರ* ದಂದು *ಸಂಜೆ 4:00* ಗಂಟೆಗೆ ಸರಿಯಾಗಿ, ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಕ್ಷೇತ್ರದ ಭಕ್ತರು, ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು, ಸಂಘ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು *ಆಡಳಿತ ಮತ್ತು ಅಭಿವೃದ್ಧಿ ಸಮಿತಿ*,  *ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ*

ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ).,ಬಿಲ್ಲವ ಭವನ,ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು. ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮ ಆಚರಣೆ

Image
ಬಿಲ್ಲವ ಅಸೋಸಿಯೇಶನ್ ಬೆಂಗಳೂರು (ರಿ)., ಬಿಲ್ಲವ ಭವನ,ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು. ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ರವರು. ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಆರ್. ರವಿಕುಮಾರ್ ರವರು. ಬಿಲ್ಲವ ಸಂಘದ ಅಧ್ಯಕ್ಷರಾದ ವೇದಕುಮಾರ್ ರವರು. ಈಡಿಗ ಮಹಿಳಾ ಸಂಘದ ರಾಜ್ಯಾಧ್ಯಕ್ಷರಾದ ನಳಿನಾಕ್ಷಿ ಸಣ್ಣಪ್ಪನವರು.ನಾಗರಾಜ್ ಕೈಸೊಡಿ.ಬೀರಪ್ಪ ಹೊಳೆಕೊಪ್ಪ.ಹುಚಪ್ಪ ಮರಸ. ಸೇರಿದಂತೆ ಇನ್ನು ಹಲವಾರು ಗಣ್ಯರು ಪಾಲ್ಗೊಂಡಿದ್ದರು

ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆ

Image
ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ ಸಭಾ ಕಾರ್ಯಕ್ರಮ ಆದಿತ್ಯವಾರ ಗುರು ಸಮುದಾಯ ಭವನ ದಲ್ಲಿ ಮಂದಿರದ ಅಧ್ಯಕ್ಷರಾದ ಪದ್ಮನಾಭ ಕಾರ್ನಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅತಿಥಿಗಳಾಗಿ ಸಿ ವೈ ರಾಮ್ ಮೋಹನ್ ಶ್ರೀ ರಮೇಶ್ ಬಿ ಡಾಕ್ಟರ್ ಉಮ್ಮಪ್ಪ ಪೂಜಾರಿ ನಗರಪಾಲಿಕೆಯ ಸದಸ್ಯರಾದ ಕಿರಣ್ ಕುಮಾರ್ ಹಾಗೂ ಮನೋಜ್ ಕುಮಾರ್ ಮಂದಿರದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೋಶಾಧಿಕಾರಿ ಸುಧಾಕರ್ ಕರ್ಕೇರ ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷರಾದ ರಮಣಿ ವೇದಿಕೆಯಲ್ಲಿ ಉಪಸಿತರಿದ್ದರು ಮಾಜಿ ಅಧ್ಯಕ್ಷರು ಪುರುಷೋತ್ತಮ್ ಪೂಜಾರಿ ಸಾಗತಿಸಿ ಪ್ರಧಾನ ಸಂಚಾಲಕರಾದ ಕೇಶವ ಸನಿಲ್ ಪ್ರಾಸ್ತಾವಿಕ ಗೈದರು ಮಂದಿರದ ಹಿರಿಯ ಸದಸ್ಯರಾದ ನಾರಾಯಣ್ ಟೈಲರ್ ಇವರನ್ನು ಸನ್ಮಾನಿಸಲಾಯಿತು. ಹಾಗೂ .ಎಸ್. ಎಲ್ .ಸಿ . ಹೆಚ್ಚು ಅಂಕ ಬಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಸೀತಾರಾಮ ಅಲಗುಡ್ಡ ಇವರು ಧನ್ಯವಾದಗಳು ಅರ್ಪಿಸಿದರು ಅರುಣ್ ಕುಮಾರ್ ಹಾಗೂ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು

𝐓𝐇𝐄 𝐁𝐈𝐋𝐋𝐀𝐖𝐀𝐑 𝐀𝐒𝐒𝐎𝐂𝐈𝐀𝐓𝐈𝐎𝐍, 𝐌𝐔𝐌𝐁𝐀𝐈𝐀𝐍𝐃𝐇𝐄𝐑𝐈 𝐋𝐎𝐂𝐀𝐋 𝐎𝐅𝐅𝐈𝐂𝐄170th Guru Jayanti Celebration 💛💐🕉️WARM Welcome to all devotees✨

Image

ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಗೋಳಿಗರಡಿಯಲ್ಲಿ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ.

Image
*ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ* *ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಗೋಳಿಗರಡಿಯಲ್ಲಿ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಯಿತು* *ಗೋಳಿಗರಡಿ ಕ್ಷೇತ್ರದ ಪಾತ್ರಿಗಳಾದ ಶ್ರೀ ಶಂಕರ ಪೂಜಾರಿ ಇವರು ಪೂಜೆಯನ್ನು ನೆರೆವೇರಿಸುವುದರೊಂದಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.* *ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಜಿ ವಿಠ್ಠಲ ಪೂಜಾರಿ, ಅಧ್ಯಕ್ಷರಾದ ಶ್ರೀ ಎಂ ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀ ಐರೋಡಿ ವಿಠ್ಠಲ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನ ಜೆ ರಾಜ್, ಕೌಶಾಧಿಕಾರಿ ಶ್ರೀ ವಿಜಯ ಪೂಜಾರಿ, ಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಶ್ರೀ ರಾಜು ಪೂಜಾರಿ ಮೂಡಹಡು, ಶ್ರೀ ಸುರೇಶ್ ಪೂಜಾರಿ ಪಾಂಡೇಶ್ವರ, ಸುಧಾಕರ ಪೂಜಾರಿ ಐರೋಡಿ, ಸುರೇಶ್ ಪೂಜಾರಿ ಗುಡ್ಮಿ, ವಿಜಯ ಪೂಜಾರಿ ಬಾಳಕುದ್ರು, ಮನೋಜ ಪೂಜಾರಿ,  ಪಂಜು ಪೂಜಾರಿ, ಶ್ರೀಮತಿ ಶಶಿಕಲಾ ವಿಜಯ್ ಪೂಜಾರಿ, ಲೀಲಾವತಿ ಗಂಗಾಧರ ಪೂಜಾರಿ, ರಘು ಪೂಜಾರಿ, ಪ್ರಜ್ವಲ್ ಅರ್ಚಕರುಗಳಾದ ದಿನಕರ ಪೂಜಾರಿ,  ಸೀನ ಪೂಜಾರಿ, ಕರಿಯ ಪೂಜಾರಿ,  ಹರೀಶ್ ಪೂಜಾರಿ ಉಪಸ್ಥಿತರಿದ್ದರು*

ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೆಯ ಜಯಂತಿಯ ಆಚರಣೆ.

Image
ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಆಚರಣೆ ಮತ್ತು ಡಿ ದೇವರಾಜ ಅರಸು ರವರ 109ನೇ ಜನ್ಮದಿನಾಚರಣೆ  ಶ್ರೀ ಕ್ಷೇತ್ರ ಸಿಗಂದೂರಿನ ದೇವಾಲಯವೂ ಇಂದು ಎರಡು ವಿಶೇಷ ಆಚರಣೆಗೆ ಸಾಕ್ಷಿಯಾಯಿತು. ಈ ವಿಶ್ವ ಕಂಡ ದಾರ್ಶನಿಕರು,ವಿಶ್ವಕ್ಕೆ ಒಂದೇ ಜಾತಿ ,ಒಂದೇ ಮತ,ಒಂದೇ ಮತವೆಂದು ಸಾರಿದ ಮನುಕುಲದ ಉದ್ದಾರಕ್ಕಾಗಿ ಅದರಲ್ಲೂ ಹಿಂದುಳಿದ ಮನೂಕುಲದ ಧಾರ್ಮಿಕತೆ,ಶೈಕ್ಷಣಿಕ, ಮತ್ತು ಸ್ತ್ರೀ ಸ್ಥಾನಮಾನವನ್ನು ಹೆಚ್ಚಿಸಲು ಧಾರೆಗೆ ಆಗಮಿಸಿದ ಯುಗಪುರಷ ಬ್ರಹ್ಮಶ್ರೀ ನಾರಾಯಣ ಗುರುಗಳು ಇವರ 170ನೇ ಜನ್ಮದಿನಾಚರಣೆಯನ್ನು ಶ್ರೀ ‌ಕ್ಷೇತ್ರದಲ್ಲಿ ಅತೀ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಶ್ರೀ ‌ರಘುಪತಿ ಭಟ್ರ ಅರ್ಚಕತ್ವದಲ್ಲಿ ವಿಧಿ ವಿಧಾನದ ಪೂಜಾ ಕಾರ್ಯದೊಂದಿಗೆ,ಬೆಳಮಕ್ಕಿ ಭಜನ ತಂಡದ ಭಜನೆಯೊಂದಿಗೆ ನೇರದಿರುವ ಭಕ್ತ ಸಂಕುಲದ ಜೊತೆಗೆ ಪೂಜ್ಯ ಶ್ರೀ ಡಾ. ರಾಮಪ್ಪನವರು ಧರ್ಮದರ್ಶಿಗಳ ಸಂಪೂರ್ಣ ಅನುಗ್ರಹಪೂರ್ವಕವಾಗಿ ಶ್ರೀಯುತ ರವಿಕುಮಾರ್ ಹೆಚ್ ಆರ್ ಇವರ ಮುಂದಾಳತ್ವದಲ್ಲಿ ಪೂಜಾ ಕಾರ್ಯ ನೇರವೇರಿತು. ಶ್ರೀಯುತ ರವಿಕುಮಾರ್ ಹೆಚ್ ಆರ್ ಪ್ರಧಾನ ಕಾರ್ಯದರ್ಶಿಗಳು ಇದೇ ಸುಸಂದರ್ಭದಲ್ಲಿ 2 ಪ್ರಮುಖ ಘೋಷಣೆಗಳನ್ನು ಮಾಡಿದರು. 1) ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಗರದ ಅತ್ಯಂತ ಗುಡ್ಡಗಾಡು ಪ್ರದೇಶದ ಶೈಕ್ಷಣಿಕ ದೇಗುಲ ಸ ಕಿ ಪ್ರಾ ಶಾಲೆ ಮೇಘಾನೆ ಶಾಲೆಗೆ 52ನೇ ಶಾಲೆಯಾಗಿ ಶ್ರೀ ಕ್ಷೇತ್ರ ಸಿಗಂದೂರ...

ಶ್ರೀ ನಾರಾಯಣ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ”

Image
*ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ತನ್ನಿಮಿತ್ತ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ” ಎಂದು ಸಾರುವ ಪುಟ್ಟ ಘಟನೆ ಇಲ್ಲಿದೆ*… ಮಲಯಾಳಂ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖರಲ್ಲಿ ಕುಟ್ಟಿಪ್ಪುಳ ಕೃಷ್ಣಪಿಳ್ಳ (1900-1971) ಕೂಡಾ ಒಬ್ಬರು. ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಇವರು ಮತ ಧರ್ಮಗಳನ್ನು ವೈಚಾರಿಕತೆಯ ಒರೆಯಲ್ಲಿ ಪರೀಕ್ಷಿಸಿ ಮಂಡಿಸಿದ ಖ್ಯಾತಿಯುಳ್ಳವರು. ಅವರು 1922ರಲ್ಲಿ ಆಲುವಾ ಅದ್ವೈತಾಶ್ರಮದಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇರಿಕೊಂಡರು. ಈ ಕಾಲದ ಅನುಭವವೊಂದನ್ನು ಅವರು ದಾಖಲಿಸಿದ್ದಾರೆ. ಇದು ಶ್ಯಾಮ್ ಬಾಲಕೃಷ್ಣನ್ ಅವರು ಸಂಪಾದಿಸಿರುವ ‘ಮೌನಪೂನ್ತೇನ್’ ಕೃತಿಯಲ್ಲಿದೆ.  ಆಲುವಾ ಪಾಠಶಾಲೆಯ ವಿದ್ಯಾರ್ಥಿಗಳಿಗೆ   ಗುರುಗಳು ಪ್ರಾಯೋಜಿಸಿದ ಔತಣ ನೀಡುವ ರೂಢಿಯಿತ್ತು. ವಿವಿಧ ಜಾತಿ ಮತಗಳಿಗೆ ಸೇರಿದವರು ಒಟ್ಟಿಗೆ ಕುಳಿತು ಉಣ್ಣುವುದು ಈ ಔತಣಗಳ ಉದ್ದೇಶ. ಒಮ್ಮೆ ಈ ಔತಣಕ್ಕೆ ಆಶ್ರಮದ ಅಧಿಕಾರಿಗಳು ನನ್ನನ್ನೂ ಆಹ್ವಾನಿಸಿದರು. ಆ ಕಾಲದಲ್ಲಿ ನಾನಿದ್ದ ಸ್ಥಿತಿಯನ್ನು ಗಮನಿಸಿದ್ದ ಅವರಿಗೆ ಈ ಔತಣದ ಆಹ್ವಾನವನ್ನು ಒಪ್ಪಿಕೊಳ್ಳುತ್ತೇನೇಯೋ ಇಲ್ಲವೋ ಎಂಬ ಅನುಮಾನವಿತ್ತು. ವಿವಿಧ ಜಾತಿಗಳಿಗೆ ಸೇರಿದವರ ಸಹಪಂಕ್ತಿ ಭೋಜನ ಆಚಾರಗಳ ಉಲ್ಲಂಘನೆಯಲ್ಲೇ ಅತಿ ದೊಡ್ಡದೆಂದು ಸವರ್ಣ ಹಿಂದೂಗಳು ಭಾವಿಸಿದ್ದ ಕಾಲವದು. ಸಂಪ್ರದಾಯಸ್ಥ  ಕುಟುಂಬದಲ್ಲೇ ಹುಟ್ಟಿ ಅಲ್ಲಿಯ ತನಕ ಜಗತ್ತನ್ನೇ ನೋಡದ...