Posts
ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು ವಿಶೇಷವಾಗಿ ಆಮಂತ್ರಿಸಿದ ಕ್ಷಣ.
- Get link
- X
- Other Apps
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು ವಿಶೇಷವಾಗಿ ಆಮಂತ್ರಿಸಿದ ಕ್ಷಣ. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಪರಾದ ಶ್ರೀ ಜಯರಾಮ ಪೂಜಾರಿ ಬಾಳಿಲ ಶಕ್ತಿನಗರ , ಮತ್ತು ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ಸೇವಕ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ SNGDPS ಸಂಚಾಲಕರಾದ ಶ್ರೀಯುತ ರತ್ನಾಕರ್ ಬಿಲ್ಲವ , ಹಾಗೂ ಶ್ರೀಯತ ವಿವೇಕ್ ಪೂಜಾರಿ ಶಕ್ತಿನಗರ ಉಪಸ್ಥಿತರಿದ್ದರು. ಸಿಗಂದೂರು ಕ್ಷೇತ್ರದ ವತಿಯಿಂದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್ ಆರ್ ಇವರು ನಮ್ಮನ್ನು ಸ್ವಾಗತಿಸಿದರು.
ಜನರ ಹಿತದ ಹೋರಾಟಗಾರ: ಮುದ್ರಾಡಿ ಮಂಜುನಾಥ ಪೂಜಾರಿ
- Get link
- X
- Other Apps
✍️ ಚೈತ್ರ ಕಬ್ಬಿನಾಲೆ ಜನರ ಹಿತದ ಹೋರಾಟಗಾರ: ಮುದ್ರಾಡಿ ಮಂಜುನಾಥ ಪೂಜಾರಿ! ಮುದ್ರಾಡಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಮಂಜುನಾಥ ಪೂಜಾರಿ ಅವರು ಕೇವಲ ಒಬ್ಬ ವ್ಯಕ್ತಿ ಅಲ್ಲ, ಹೋರಾಟದ ಪ್ರತಿಧ್ವನಿ, ನಿಷ್ಠೆಯ ಪ್ರತಿರೂಪ, ಜನಸೇವೆಯ ಕಾವ್ಯ. ಉಡುಪಿಯ ಹೆಬ್ರಿ ತಾಲೂಕಿನ ಬಾಚಿಮಜಲು ಅವರ ಜನ್ಮಭೂಮಿ. ತಂದೆ ದಿ. ಚಂದು ಪೂಜಾರಿ, ತಾಯಿ ಕಮಲ ಚಂದು ಪೂಜಾರಿಯವರ ಜೀವನವೇ ಸಾರ್ವಜನಿಕ ಸೇವೆಯ ದಾರಿ ತೋರಿಸಿದ ಪಾಠಶಾಲೆ. ತಂದೆ ಮಂಡಲ ಪಂಚಾಯತ್ ಸದಸ್ಯರಾಗಿದ್ದವರು. ತಾಯಿ 10 ವರ್ಷಗಳ ಕಾಲ ಪಂಚಾಯತ್ ಸದಸ್ಯೆಯಾಗಿದ್ದವರು. ಹೀಗೆ ಜನಸೇವೆಯ ಮಣ್ಣಲ್ಲಿ ಬೆಳೆದ ಮಂಜುನಾಥ ಪೂಜಾರಿಯವರ ಹೃದಯದಲ್ಲಿ ಹೋರಾಟದ ಜ್ಯೋತಿ ಬಾಲ್ಯದಲ್ಲೇ ಬೆಳಗಿತ್ತು. 1980ರ ದಶಕದಲ್ಲಿ ಹೆಬ್ರಿಯ ಗ್ರಾಮಗಳು ಕಾರ್ಕಳ ತಾಲೂಕಿಗೆ ಸೇರಿದ್ದಾಗ, ಅಭಿವೃದ್ಧಿಯ ಕನಸುಗಳು ಮಂಕಾಗಿದ್ದವು. ಆದರೆ ಮಂಜುನಾಥ ಪೂಜಾರಿ ಮೌನವಾಗಿರಲಿಲ್ಲ. ಅವರು ಜನರ ಹಿತಕ್ಕಾಗಿ ಧ್ವಜ ಹಿಡಿದರು. “ಹೆಬ್ರಿಗೆ ತಾಲೂಕು ಬೇಕು” ಎಂಬ ಧ್ವನಿ ಅವರ ಶ್ವಾಸವಾಗಿಬಿಟ್ಟಿತು. ಮಕ್ಕಳಿಂದ ಹಿರಿಯರ ತನಕ ಎಲ್ಲರನ್ನು ಒಗ್ಗೂಡಿಸಿ, ಧರಣಿ, ಪ್ರತಿಭಟನೆ, ಪತ್ರಿಕೆ, ಸಭೆ ಹೀಗೆ ಎಲ್ಲಾಮಾರ್ಗಗಳನ್ನು ಬಳಸಿ ಸರ್ಕಾರದ ಕಿವಿಗೆ ಕನಸಿನ ಧ್ವನಿಯನ್ನು ತಟ್ಟಿದರು. ಶಾಸಕರಾದ ವೀರಪ್ಪ ಮೊಯ್ಲಿಯವರು ಸ್ಥಳಕ್ಕೆ ತಕ್ಷಣ ಬರುವುದಿಲ್ಲವೆಂದು ಹೇಳಿದಾಗ, ಮಂಜುನಾಥ ಪೂಜಾರಿ ತಮ್ಮ ಹೋರಾಟದ ಹಠವನ್ನು ತೋರಿಸುತ್ತಾ “ತಾಲೂಕು ಘೋಷಣೆ ಮ...
ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.
- Get link
- X
- Other Apps
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ - ಮಂಗಳೂರು ಮಹಾದಸರಾ- 2025
- Get link
- X
- Other Apps
SHREE NARAYANA GURU DHARMA SAMMELANA-2025
- Get link
- X
- Other Apps
ಈ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳವು ಗುರುಗಳ ಸಂಪೂರ್ಣ ಅನುಗ್ರಹದೊಂದಿಗೆ ನಡೆಯಲಿದೆ. ನೀವು ಇಂದೇ ಗುರುಸೇವೆಯಲ್ಲಿ ಭಾಗವಹಿಸಿರಿ. ಈ ಮಹಾಯಜ್ಞದಲ್ಲಿ ಭಕ್ತಿಯಿಂದ ಭಾಗವಹಿಸುವುದರಿಂದ ನಿಮ್ಮ ಜೀವನದಲ್ಲಿ ಮಹಾ ಬದಲಾವಣೆ ಇರುವುದು ಅಂತೂ ಸತ್ಯ. ನಿಮ್ಮ ಪೂರ್ಣ ಮಾಹಿತಿಗಳನ್ನು ಈ ಗೂಗಲ್ ಫಾರ್ಮ್ ನಲ್ಲಿ ಭರ್ತಿ ಮಾಡಿರಿ. ಈ ಲಿಂಕ್ 👇 ನಾನು ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಭಾಗವಹಿಸುತ್ತೇನೆ.