Posts

ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾದ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಭಾಗವಹಿಸಿ ತಮ್ಮ ಸಮಾರೋಪದಲ್ಲಿ -ಶ್ರೀ ನಾರಾಯಣ ಗುರುಗಳ ವಿಚಾರ ಚಿಂತನೆ-ಅಧ್ಯಾಯನ ರಾಜ್ಯದ ಎಲ್ಲೆಡೆಯೂ ನಡೆಯಬೇಕು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಬ್ರಹ್ಮಶ್ರೀ ನಾರಾಯಣಗುರು ಚಿಂತನೆಗಳ ಅಧ್ಯಯನ ಶಿಬಿರವನ್ನು ದಿನಾಂಕ 12-06-22-ರಿಂದ 13-06-22ರವರೆಗೆ,          ಸ್ಥಳ-ಸಿಗಂದೂರು ಕ್ಷೇತ್ರ.ಸಾಗರ ಇಲ್ಲಿ ಜರುಗಿತು. ಕಾರ್ಯಕ್ರಮದ ಸಾನಿದ್ಯವನ್ನು ವಹಿಸಿದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾದ್ಯಕ್ಷರಾದ   ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಭಾಗವಹಿಸಿ ತಮ್ಮ ಸಮಾರೋಪ  ನುಡಿಯಲ್ಲಿ  ಶ್ರೀ ನಾರಾಯಣ ಗುರುಗಳ ವಿಚಾರ ಚಿಂತನೆ-ಅಧ್ಯಾಯನ  ರಾಜ್ಯದ ಎಲ್ಲೆಡೆಯೂ ನಡೆಯಬೇಕು ಆಗ ಮಾತ್ರ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಲು ಮತ್ತು ಸಮುದಾಯವನ್ನು  ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆಂದರು.  🙏🌷🙏 ಜೈ ಗುರುದೇವ್🙏🌷🙏🌷🙏

ಶ್ರೀ ನಾರಾಯಣ ಗುರುಗಳ ನೂತನ ಶಿಲಾಮಯ ಮೂರ್ತಿ ಪ್ರತಿಷ್ಠೆ , ಹಾಗೂ ಧಾರ್ಮಿಕ ಕಾರ್ಯಕ್ರಮ ,12/13/5/2022.

Image
ಶ್ರೀ  ನಾರಾಯಣ ಗುರು ಪ್ರಸಾದಿತ ಸಂಘ ( ರಿ ), ನಿಡ್ಡೋಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಶಿಲಾಮಯ ಮೂರ್ತಿ ಪ್ರತಿಷ್ಠೆ , ಹಾಗೂ ಧಾರ್ಮಿಕ ಕಾರ್ಯಕ್ರಮ , ಭವ್ಯ ಮೂರ್ತಿಯ ಶೋಭಾಯಾತ್ರೆ , ಗುರು ಕುಟೀರ ಉದ್ಘಾಟನೆ    ದಿನಾಂಕ : 𝟏𝟐 ಮತ್ತು 𝟏𝟑 ಮೇ 𝟐𝟎𝟐𝟐 ಸರ್ವರಿಗೂ ಸುಸ್ವಾಗತ. 🙏💐 𝐒𝐫𝐢 𝐍𝐚𝐫𝐚𝐲𝐚𝐧𝐚 𝐆𝐮𝐫𝐮 𝐏𝐫𝐚𝐬𝐚𝐝𝐢𝐭𝐡𝐚 𝐒𝐚𝐧𝐠𝐡𝐚  Ⓡ , 𝐍𝐢𝐝𝐝𝐨𝐝𝐢 🙏🏻💛

Inauguration Shivagiri mutt Asram an in the U.K 30/04/22

Image
Inauguration Shivagiri mutt Asram an in the U.K 30/04/22

ಶೇಂದಿ ಇಳಿಸುವ ಬಗ್ಗೆ ಶ್ರೀ ನಾರಾಯಣ ಗುರುಗಳು ಭಕ್ತರಿಗೆ ಏನು ಹೇಳಿದ್ದಾರೆ....!? ನಿಜವಾದ ಮಹಾಗುರು ಸತ್ಯವನ್ನು ತಿಳಿಸುತ್ತಾರೆ ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇವರು....

Image
ಶ್ರೀ ನಾರಾಯಣ ಗುರುಗಳ ಧರ್ಮದ ವಚನ.... ಇದು ಮಹಾಗುರುವಿನ ಸತ್ಯದ ವಚನ....ಗುರುಗಳೇ ಅಂದು ಹೇಳಿದ ನುಡಿ...ಒಬ್ಬ ಭಕ್ತನಿಗೆ. ಇದೇ ಗುರುಗಳ ಉತ್ತರ.... ಶೇಂದಿ ಇಳಿಸುವುದು ಒಂದು ಮಹಾವ್ಯಾಧಿ... ಒಂದು ಅಂಗದಲ್ಲಿ ಕುಷ್ಠರೋಗ ಹಿಡಿದರೆ ಆ ದೇಹವೆಲ್ಲ ಕೆಡುವುದು. ಅದರಂತೆ ಕೆಲವರು ಶೇಂದಿ ಇಳಿಸುವುದರಿಂದ ಸಮಾಜವೇ ಕೆಡುತ್ತಿದೆ.ರೋಗದ ಅಂಗ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಂತೆ ಹೆಂಡ ಇಳಿಸುವವರನ್ನು ಸಮಾಜದಿಂದ ಬೇರ್ಪಡಿಸಬೇಕು. ಅವರೊಂದಿಗೆ ಕೂಡಿಕೊಳ್ಳಬಾರದು. ಅವರು ಹೆಂಡದ ವೃತ್ತಿ ತ್ಯಜಿಸಿದರೆ ಅವರನ್ನು ಶುದ್ಧೀಕರಿಸಿ ಸ್ವೀಕರಿಸಬಹುದು.ಇದು ಮಹಾಗುರುಗಳ ಮಾತು. ಭಕ್ತ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾನೆ...ಗುರುಗಳಲ್ಲಿ. ಭಕ್ತ: ಜೀವನಕ್ಕೆ ಬೇರೆ ಉಪಾಯವಿಲ್ಲದೆ ಆ ಕೆಲಸಕ್ಕೆ ಹೋಗುವವರು...!? ಗುರುಗಳು ಹೇಳುತ್ತಾರೆ: ಮೂರ್ತೆ ಕತ್ತಿಯಿಂದ ನಾಲ್ಕು ಕ್ಪೌರದ ಕತ್ತಿಗಳನ್ನು ತಯಾರಿಸಿಕೊಂಡು ಉದ್ಯೋಗ ಮಾಡಿ ಜೀವಿಸುವುದು ಹೆಂಡ ಇಳಿಸುವ ಕೆಲಸಕ್ಕಿಂತ ಅಭಿಮಾನಕರವೂ ಲಾಭಕರವೂ ಆಗಿದೆ.( ಇದನ್ನು ಕೇಳಿ ಮೌನವಾಗಿದ್ದ ಭಕ್ತನೊಡನೆ ಪುನ) ಹೆಂಡ ಇಳಿಸುವ ಕೆಲಸ ಒಂದು ಮಹಾ ಪಾತಕ. ಅದು ಮೀನು ಹಿಡಿಯುವ ಕೆಲಸಕ್ಕಿಂತ ಪಾಪಕರ. ಕಳ್ಳು ತೆಗೆಯುವ ಬದಲು ಕಾಯಿ ತೆಗೆಯುವುದು ಮೇಲು, ಇದರಲ್ಲಿ ಕಷ್ಟ ಕಡಿಮೆ. ಆದರೆ ಕ್ರಮೇಣ ಗೊನೆಯನ್ನು ಬಿಟ್ಟು ಮೇಲೇರಿ ಬಿಟ್ಟಾನು, ಜೋಕೆ ....! ( ಗೊನೆ ಬಿಟ್ಟು ಕೊಂಬು ಕತ್ತರಿಸಿ ಬಿಟ್ಟಾನು") ಆಗ ಎಲ್ಲರೂ ನಕ್ಕ...

ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶಿವಗಿರಿ ಯಾತ್ರೆಯ 90ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ನಾರಾಯಣ ಗುರುಗಳ ಕೊಡುಗೆಗಳ ಸ್ಮರಣೆ. ಮಂಗಳೂರು ಲಕ ಸುದ್ದಿ: ಜಾತಿ ತಾರತಮ್ಯ ನೀತಿಗಳ ವಿರುದ್ಧದ ಹೋರಾಡಿದ ಕೇರಳದ ಮಹಾನ್‌ ಸಂತ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಆಯೋಜಿಸಿದ್ದ ಶಿವಗಿರಿ ಯಾತ್ರೆಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಸಮಾಜ ಸುಧಾರಕರಾದ ನಾರಾಯಣ ಗುರುಗಳು ಧರ್ಮವನ್ನು ಪರಿಷ್ಕರಿಸಿದರು. ಮತ್ತು ಕಾಲಕ್ಕೆ ತಕ್ಕಂತೆ ಬದಲಾಯಿಸಿದರು. ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ, ಜಗತ್ತಿನ ಯಾವುದೇ ಶಕ್ತಿಯು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುರುಗಳ ಸಂದೇಶಗಳು ‘ಆತ್ಮ ನಿರ್ಭರ ಭಾರತ’ದ ಕಡೆಗೆ ದಾರಿ ತೋರುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಜನರಿಗೆ ಜ್ಞಾನದ ಮಾರ್ಗ ತೋರುತ್ತಿರುವ ಬ್ರಹ್ಮ ವಿದ್ಯಾಲಯವು ಇದೀಗ ಸುವರ್ಣ ಮಹೋತ್ಸವದ ಆಚರಿಸಿಕೊಳ್ಳುತ್ತದೆ. ಈ ಪಯಣ...

ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ - ವಾರ್ಷಿಕ ಭಜನಾ ಮಂಗಲೋತ್ಸವ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಗಜಾನನ ಬಿಲ್ಲವರ ಸೇವಾ ಸಂಘ (ರಿ.), ಹೂಡೆ ವಾರ್ಷಿಕ ಭಜನಾ ಮಂಗಲೋತ್ಸವ ದಿನಾಂಕ 14-05-2022 ಶನಿವಾರ 15-05-2022 ಆದಿತ್ಯವಾರದ ವರೆಗೆ ಜರಗಲಿರುವುದು ಕಾರ್ಯಕ್ರಮಗಳ ವಿವರ ದಿನಾಂಕ : 14-05-2022ನೇ ಶನಿವಾರ ಸಂಜೆ ಗಂಟೆ 6-30ಕ್ಕೆ : ಕಲಶ ಪ್ರತಿಷ್ಠೆ ಸಂಜೆ ಗಂಟೆ 7-00ಕ್ಕೆ : ಭಜನಾ ಕಾರ್ಯಕ್ರಮ ಪ್ರಾರಂಭವಾಗಿ ಮರುದಿನ ಸುರ್ಯೋದಯಕ್ಕೆ ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ದಿನಾಂಕ : 15-05-2022ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಕಲ್ಪ ಪೂರ್ವಾಹ್ನ ಗಂಟೆ 11.35ಕ್ಕೆ : ಪ್ರಸಾದ ವಿತರಣೆ ಪೂರ್ವಾಹ್ನ ಗಂಟೆ 11.45ಕ್ಕೆ : ವಿದ್ಯಾರ್ಥಿ ವೇತನ ವಿತರಣೆ ಕೊಡುಗೆ : ಶ್ರೀ ಕಿರಣ್ ಪಾಂಡುರಂಗ ಅಂಚನ್ "ಕಮಲ ಕಿರಣ್" ಹೂಡೆ ಮದ್ಯಾಹ್ನ ಗಂಟೆ 12.30ಕ್ಕೆ : ಅನ್ನಸಂತರ್ಪಣೆ ಸರ್ವರಿಗೂ ಆದರದ ಸ್ವಾಗತ. 🙏🙏🙏 ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಮಹಿಳಾ ಘಟಕ

ಮಹಾಗುರುಧರ್ಮ ಪರಮ ಪವಿತ್ರ....

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಯಾರೇ ಆಗಲಿ...ಜಾತಿ,ಮತ,ಭಾಷೆ, ವರ್ಣ,ಲಿಂಗ ಭೇದ ಭಾವ ಮಾಡುವವರನ್ನು, ದ್ವೇಷಿಸುವವರನ್ನು ದೂರ ಇಡಿರಿ...ಅವರ ಗೆಳತನ ಮಾಡಬೇಡಿರಿ...ಯಾಕೆಂದರೆ ಅವರೆಂದೂ  ಪರಮ ನೆಮ್ಮದಿಯನ್ನು,ಪರಮ ದಯೆಯನ್ನು ಪಡೆಯಲು ಸಾಧ್ಯವಿಲ್ಲ...!!! ಅವರು ದಿನ ಒಂದಾಲ್ಲ ಒಂದು ರೀತಿಯ ಸಮಸ್ಯೆಯಲ್ಲಿ,ತೊಂದರೆಯಲ್ಲಿ ಇರುತ್ತಾರೆ ನಿತ್ಯ ಇದು ಸತ್ಯ. ಯಾರು ಸರ್ವ ಮಾನವ ಧರ್ಮದ ಒಳಿತನ್ನು ಬಯಸುವರು...ಅವರು ಸದಾ ಪರಮಾನಂದವನ್ನು ಪಡೆಯುತ್ತಾರೆ... ನಿತ್ಯವೂ... ಇದು ಪರಮ ಮಹಾಸತ್ಯ. ಇದುವೇ ನಿಜವಾದ ಮಹಾಗುರು ಶ್ರೀ ನಾರಾಯಣ ಗುರು  #ಮಹಾಗುರುಧರ್ಮ. ಶುಭವಾಗಲಿ ಸರ್ವ ಮನುಕುಲಕ್ಕೆ #ನನ್ನ_ಅನುಭವ_ದೇವರು  #ಶ್ರೀ_ನಾರಾಯಣ_ಗುರು