Posts

ಶ್ರೀ ಮಹಾಗುರು ಧ್ಯಾನ ತರಗತಿಗಳು- ಮೊದಲ ಬಾರಿಗೆ ಕರ್ನಾಟಕದ ಭಟ್ಕಳ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪ್ರಾರಂಭ.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||  ಸಮಸ್ತ ಗುರು ಭಕ್ತರೇ,   ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಶೀರ್ಕೇರಿ ಭಟ್ಕಳ  ಇದರ ಸಂಯುಕ್ತಾಶ್ರಯದಲ್ಲಿ ... ಕರ್ನಾಟಕ ರಾಜ್ಯಾದ್ಯಂತ ಇವರು   ಶ್ರೀ ನಾರಾಯಣ ಗುರುಭಕ್ತರಿಗಾಗಿ....  ಶ್ರೀ ಮಹಾಗುರು ಧರ್ಮದ ತತ್ವದಡಿ ಒಂದು ವಿಶೇಷವಾದ ಆಧ್ಯಾತ್ಮ ಯೋಜನೆಯನ್ನು ಪ್ರಾರಂಭ ಮಾಡುತ್ತಿದೆ..  ಅದುವೇ   *ಶ್ರೀ ಮಹಾಗುರು ಧ್ಯಾನ ತರಗತಿ* ಎಂಬುದಾಗಿ...  ----- ಇಲ್ಲಿ ಮುಖ್ಯವಾಗಿ   ------------------------------   *ಶ್ರೀ ಗುರು ನಾಮ ಜಪ ಯಜ್ಞ*        *ಗುರು ಸಂದೇಶ- ಜ್ಞಾನದ ಅನುಭವ ದೇವರು*  *ಮಾನಸ ಪೂಜೆ*   -------------------    ಈ ಯೋಜನೆಯ ಮುಖ್ಯ ಉದ್ದೇಶ... ಎಲ್ಲಾ ಮಹಾಗುರು ಭಕ್ತರು ಶ್ರೀ ನಾರಾಯಣ ಗುರುಗಳ ಸತ್ಯ ಧರ್ಮದ ತತ್ವದಡಿ ಜೀವನ ನಡೆಸುವುದಕ್ಕೆ , ನಿತ್ಯ ಆನಂದ...  ಸುಖ....ಶಾಂತಿ....ನೆಮ್ಮದಿಗಾಗಿ...ನಿಮಗೆ ಮತ್ತು ನಿಮ್ಮ ಸಮಸ್ತ ಕುಟುಂಬಕ್ಕೆ  ಮತ್ತು ಸರ್ವ ಮನುಕುಲಕ್ಕೆ.   ಪ್ರಥಮ...

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ - ಅಮೃತ ಮಹೋತ್ಸವ- ಬೃಹತ್ ಜಾಗೃತ ಸಮಾವೇಶ

Image

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ನವರಾತ್ರಿ ಮಹೋತ್ಸವ - ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ರೋವರ್ಸ್ ಹಾಗೂ ರೇಂಜರ್ಸ್" ಘಟಕದ ಸ್ವಯಂ ಸೇವಕರು ಪ್ರಮುಖ ಪಾತ್ರ .

Image
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇಲ್ಲಿ‌ ಮಂಗಳೂರು ದಸರಾ ಸಂದರ್ಭ ತಾ 20.10.2023 ರಿಂದ 24.10.2023 ರ ವರೆಗೆ ನಿರಂತರವಾಗಿ ಬೆಳಿಗ್ಗೆ 07.30 ರಿಂದ ರಾತ್ರಿ 12.30ರ ವರೆಗೆ ಶ್ರೀ ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ  ವಿವಿಧ ಜವಾಬ್ದಾರಿಯನ್ನು ವಹಿಸಿಕೊಂಡು ದೇವಸ್ಥಾನದ ಆವರಣದಲ್ಲಿ ತುಂಬಿದ ಭಕ್ತ ಜನ‌ ಸಾಗರವನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಮಾತೆ  ಶ್ರೀ ಶಾರದಾಂಬೆಯ ದರುಶನ ಪಡೆಯಲು ಅನುಕೂಲ ಮಾಡಿ ಕೊಡುತ್ತಾ , ದೇವಸ್ಥಾನದ ವಠಾರದಲ್ಲಿ ಅಚ್ಚುಕಟ್ಟಾದ ವಾತಾವರಣ ನಿರ್ಮಿಸುವಲ್ಲಿ  "ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ರೋವರ್ಸ್ ಹಾಗೂ ರೇಂಜರ್ಸ್" ಘಟಕದ ಸ್ವಯಂ ಸೇವಕರು ಪ್ರಮುಖ ಪಾತ್ರ ವಹಿಸಿರುತ್ತಾರೆ.ಈ ಎಲ್ಲಾ ಸ್ವಯಂ ಸೇವಾ ವಿದ್ಯಾರ್ಥಿಗಳಿಗೆ ಶ್ರೀ ಶಾರದಾ ಮಾತೆಯು ವಿದ್ಯೆ, ಬುದ್ದಿ,ಆಯುಷ್ಯ,ಅರೋಗ್ಯವನ್ನು ಸದಾ  ಕರುಣಿಸಲಿ ಹಾಗೂ ಶ್ರೀ ಕ್ಷೇತ್ರದಲ್ಲಿ ಇನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಈ ಸ್ವಯಂ ಸೇವಾ ವಿದ್ಯಾರ್ಥಿಗಳ ಸ್ವಯಂ ಸೇವೆ ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು... ಶ್ರೀ ನಾರಾಯಣ ಗುರುದೇವನ ಪೂರ್ಣ ಅನುಗ್ರಹ ನಿತ್ಯ ಇರಲಿ...ನಿಮಗೆ ಶುಭವಾಗಲಿ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ.......

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಮಂಗಳೂರು ದಸರಾ ವೈಭವ ಮತ್ತಷ್ಟು ಹೆಚ್ಚಿಸೋಣ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ. ಇಲ್ಲಿ ಯಾವುದೇ ರೀತಿಯ ಕಾನೂನುಬಾಹಿರ, ಅಹಿತಕರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದೆ, ಇದೊಂದು ಧಾರ್ಮಿಕ, ಸಾಂಸ್ಕೃತಿಕ ಉತ್ಸವ ಎಂಬುದನ್ನು ಮನಗಂಡು, ಈ ಐತಿಹಾಸಿಕ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಮಂದಿ ಹಿರಿಯರು, ಕಿರಿಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ, ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಂಗಳೂರು ದಸರಾದ ವೈಭವವನ್ನು ಇನ್ನಷ್ಟು ಹೆಚ್ಚಿಸಿ, ಕ್ಷೇತ್ರದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಹಕರಿಸೋಣ. ಶಾಂತಿ, ಸೌಹಾರ್ದ ನೆಮ್ಮದಿಯ ಸಮಾಜಕ್ಕಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ... ಪದ್ಮರಾಜ್ ಆರ್.  ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ದೀವರ ಸಾಂಸ್ಕೃತಿಕ ವೈಭವ-2023

Image

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2025 ರ ನೂತನ ಕ್ಯಾಲೆಂಡರ್

Image
|| *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* || *ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2024 ರ ನೂತನ ಕ್ಯಾಲೆಂಡರ್ ಮುದ್ರಿಸಲಾಗುವುದು ಇದರಲ್ಲಿ ವಿಶೇಷ ದಿನಗಳ ಜೊತೆಗೆ ನಮ್ಮ ದೇವಸ್ಥಾನ,* *ಸಂಘ,ಮಂದಿರ ಮತ್ತು ಗರೋಡಿ ಕ್ಷೇತ್ರ, ಗುತ್ತುಮನೆ,ಭಂಡಾರ ಮನೆಯಲ್ಲಿ ನಡೆಯುವ ವಾರ್ಷಿಕ ಮಹೋತ್ಸವ, ಆಚರಣೆಗಳ ವಿವರಗಳನ್ನು ಪ್ರಕಟಿಸಲಾಗುವುದು. ನಮಗೆ ಮಾಹಿತಿಗಳನ್ನು ಈ Google form link* https://forms.gle/VjFSngko9Kk9jNaX9 ನಲ್ಲಿ ಭರ್ತಿ ಮಾಡಿ *ದಿನಾಂಕ 31-10-2024 ರೊಳಗೆ ಕಳುಹಿಸಿರಿ.* ಹೆಚ್ಚಿನ ಮಾಹಿತಿಗಾಗಿ : 9483024279 (ಎಸ್.ಕೆ.ಪಾಂಡವರಕಲ್ಲು) ಸಂಪರ್ಕಿಸಬಹುದು. www.bsngdp.blogspot.com

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ - ಭಕ್ತ ರಿಂದ ಕರಸೇವೆ

Image
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅ.15ರಿಂದ 25ರವರೆಗೆ ಜರುಗಲಿರುವ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಕರಸೇವಕ ತಂಡ, ಬೋಳಾರ ಮಾರಿಯಮ್ಮ ಕರಸೇವಾ ತಂಡ, ಶ್ರೀ ಗೋಕರ್ಣನಾಥ ಸೇವಾದಳದ ಸರ್ವ ಸದಸ್ಯರು, ಕ್ಷೇತ್ರದ ಭಕ್ತರ ವತಿಯಿಂದ ಅ.10ರಂದು ಶ್ರೀ ಕ್ಷೇತ್ರವನ್ನು ಸ್ವಚ್ಛಗೊಳಿಸಲಾಯಿತು. ಶುಚಿತ್ವ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಎಲ್ಲರಿಗೂ ಬ್ರಹ್ಮಶ್ರೀ ನಾರಾಯಣಗುರುಗಳು, ಶ್ರೀ ಗೋಕರ್ಣನಾಥ ಮತ್ತು ಪರಿವಾರ ದೇವರು ಸದಾ ಅನುಗ್ರಹ ಕರಣಿಸಲಿ....ಶುಭವಾಗಲಿ.